Tuesday, October 13, 2026
Tuesday, October 13, 2026

ಜಗದೊಡೆಯನ ಜನ್ಮಾಷ್ಟಮಿ ಸಂಭ್ರಮ- ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ

ಜಗದೊಡೆಯನ ಜನ್ಮಾಷ್ಟಮಿ ಸಂಭ್ರಮ- ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ

Date:

ಉಡುಪಿ, ಆ.25: ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಶೀರೂರು ಮಠ, ಉಡುಪಿ ಆಶ್ರಯದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯದ ನೇತೃತ್ವದಲ್ಲಿ, ಲಯನ್ಸ್ ಕ್ಲಬ್ ಮುನಿಯಾಲು ಸಹಕಾರದೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸ್ಪರ್ಧೆ-2026 ಕಲರ್ಸ್ ಆಫ್ ಶ್ರೀ ಕೃಷ್ಣ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯ ಪ್ರಚಾರದ ಬಿತ್ತಿ ಚಿತ್ರವನ್ನು ಪರ್ಯಾಯ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು. ಎಸ್.ಕೆಪಿಎ ಉಡುಪಿ ವಲಯದ ಅಧ್ಯಕ್ಷ ದಿವಾಕರ್ ಹಿರಿಯಡ್ಕ, ಮಾಜಿ ಅಧ್ಯಕ್ಷ ಜನಾರ್ದನ್ ಕೊಡವೂರು, ಸದಸ್ಯರಾದ ರತನ್ ಶೆಟ್ಟಿ, ಶ್ರೀಶ ಬಲ್ಲಾಳ್ ಹಾಗು ಶ್ರೀಮಠದ ಛಾಯಾಗ್ರಾಹಕ ಕೃತಿಕ್ ಭಟ್ ಉಪಸ್ಥಿತರಿದ್ದರು.

ಸ್ಪರ್ಧೆಯ ನಿಯಮಗಳು: ಪ್ರತಿ ಸ್ಪರ್ಧಿಯು ಗರಿಷ್ಠ ನಾಲ್ಕು ಛಾಯಾಚಿತ್ರಗಳನ್ನು ಕಳುಹಿಸಬಹುದು. ಒಂದು ಛಾಯಾಚಿತ್ರದ ಗಾತ್ರ ಗರಿಷ್ಠ 4MBಗಿಂತ ಹೆಚ್ಚು ಮೀರಬಾರದು. – ಮೊಬೈಲ್ನಲ್ಲಿ ತೆಗೆದ ಛಾಯಾಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ಪೋಟೋಶಾಪ್ನಲ್ಲಿ ತಿರುಚಲಾದ ಮತ್ತು ವಾಟರ್ ಮಾರ್ಕ್ ಇದ್ದ ಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. – ಒಂದು ಬಾರಿ ನೋಂದಣಿಯಾದ ಛಾಯಾಚಿತ್ರಗಳನ್ನು ಬದಲಾಯಿಸಲು ಅವಕಾಶವಿರುವುದಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶ. – ಛಾಯಾಚಿತ್ರವನ್ನು ಇಮೇಲ್ ಮೂಲಕ ಕಳುಹಿಸುವಾಗ ತಮ್ಮ ಭಾವಚಿತ್ರ, ಹೆಸರು, ವಿಳಾಸ, ದೂರವಾಣಿ ಹಾಗೂ ನೋಂದಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು. ತೀರ್ಪುಗಾರರ ತೀರ್ಮಾನವೇ ಅಂತಿಮ. ಉಡುಪಿ ಶ್ರೀ ಕೃಷ್ಣ ಮಠದ ಪರಿಸರದಲ್ಲಿ ನಡೆಯುವ ಶ್ರೀ ಕೃಷ್ಣ ಜನ್ಮಾಷ್ಟಮಿ (04-0​9-2026) ಹಾಗೂ ರಥಬೀದಿಯಲ್ಲಿ ನಡೆಯುವ ವಿಟ್ಲಪಿಂಡಿ ಮಹೋತ್ಸವದ (05-0​9-2026) ಛಾಯಾಚಿತ್ರಗಳಿಗೆ ಮಾತ್ರ ಅವಕಾಶ. ಛಾಯಾಚಿತ್ರವನ್ನು ಕಳುಹಿಸಲು ಕೊನೆಯ ದಿನಾಂಕ 15-09-2026. ಫಲಿತಾಂಶವನ್ನು ದಿನಾಂಕ 25-09-2026 ರಂದು ಪ್ರಕಟಿಸಲಾಗುವುದು.

ಛಾಯಾಚಿತ್ರಗಳನ್ನು ಕಳುಹಿಸಬೇಕಾದ ವಿಳಾಸ: rameshyelluru@gmail.com, ನೋಂದಾಯಿಸಲು ಕೊನೆಯ ದಿನಾಂಕ 01-09-2026 ನೋಂದಾಯಿಸಿದ ಎಲ್ಲಾ ಛಾಯಾಗ್ರಾಹಕರಿಗೆ ಒಂದು ಟಿ-ಶರ್ಟ್ ಉಚಿತ. ಟಿ-ಶರ್ಟ್ ಧರಿಸಿ ಛಾಯಾಗ್ರಹಣವನ್ನು ಮಾಡತಕ್ಕದ್ದು. ಛಾಯಾಚಿತ್ರವನ್ನು ಯಾವುದೇ ಪೂರ್ವಾನುಮತಿ ಇಲ್ಲದೆ ಬಳಸುವ ಹಕ್ಕನ್ನು ಪಡೆದಿರುತ್ತೇವೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಡಾ. ಸುಧಾ ಯಾದವ್ ಕರ್ನಾಟಕದ ನೂತನ ರಾಜ್ಯಪಾಲೆ

ಬೆಂಗಳೂರು, ಅ.12: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಾ. ಸುಧಾ ಯಾದವ್...

ಅಮೇರಿಕನ್ ಅರ್ಥಶಾಸ್ತ್ರಜ್ಞರಾದ ರಾಬರ್ಟ್ ಇ. ಹಾಲ್ ಮತ್ತು ಮೈಕೆಲ್ ವುಡ್‌ಫೋರ್ಡ್ ಅವರಿಗೆ 2026 ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ

ಯು.ಬಿ.ಎನ್.ಡಿ., ಅ.12: 2026 ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಅಮೇರಿಕನ್ ಅರ್ಥಶಾಸ್ತ್ರಜ್ಞರಾದ...

ಅ.17-18: ಬ್ರಹ್ಮಾವರದಲ್ಲಿ ಕೃಷಿ ಮತ್ತು ತೋಟಗಾರಿಕೆ ಮೇಳ

ಉಡುಪಿ, ಅ.12: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ...

ಕ್ರಿಯೇಟಿವ್ ಗ್ಲೋಬಲ್ ಶಾಲೆಯಲ್ಲಿ ಅಂಚೆ ದಿನಾಚರಣೆ

ಕಾರ್ಕಳ, ಅ.12: ಮೊಬೈಲ್ ಸಂದೇಶಗಳ ಭರಾಟೆಯಲ್ಲಿ ಪತ್ರದ ಮಧುರತೆಯನ್ನು ಮರೆತಿರುವ ಇಂದಿನ...
error: Content is protected !!