Tuesday, July 7, 2026
Tuesday, July 7, 2026

ಶೈಕ್ಷಣಿಕ ನೆಮ್ಮದಿಯನ್ನು ದಯವಿಟ್ಟು ಕೆಡಿಸಬೇಡಿ

ಶೈಕ್ಷಣಿಕ ನೆಮ್ಮದಿಯನ್ನು ದಯವಿಟ್ಟು ಕೆಡಿಸಬೇಡಿ

Date:

ರಾಜ್ಯದ ಪ್ರಾಥಮಿಕ ಮಾಧ್ಯಮಿಕ ಶಿಕ್ಷಣ ವಲಯದಲ್ಲಿ ಸಾಕಷ್ಟು ಕಿತ್ತು ತಿನ್ನುವ ಸಮಸ್ಯೆಗಳಿವೆ. ಸಾಕಷ್ಟು ಸಂಖ್ಯೆಯಲ್ಲಿ ಶಿಕ್ಷಕರ ಕೊರತೆ ಇದೆ. ಅದರಲ್ಲೂ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಪರಿಸ್ಥಿತಿಯಲ್ಲಿ ಬಂದು ನಿಂತಿದೆ. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಪ್ರಯತ್ನ ಮಾಡಬೇಕಾದ ಶಿಕ್ಷಣ ಇಲಾಖೆ ತೇರ್ಗಡೆಯಾದ ವಿದ್ಯಾರ್ಥಿಗಳ ಸಂಖ್ಯೆಯನ್ನು ಜಾಸ್ತಿ ಮಾಡುವ ದೃಷ್ಟಿಯಿಂದ ಕನಿಷ್ಟ 35 ಅಂಕಗಳನ್ನು 33ಕ್ಕೆ ಇಳಿಸಿ ರಾಜ್ಯದಲ್ಲಿ ಹಿಂದಿಗ್ಗಿಂತ ನಮ್ಮ ಆಡಳಿತ ಅವಧಿಯಲ್ಲಿ ಗರಿಷ್ಠ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಅನ್ನುವ ಅಂಕಿಅಂಶಗಳನ್ನು ಮುಂದಿಟ್ಟು ಇದು ನಮ್ಮ ಶೈಕ್ಷಣಿಕ ಸಾಧನೆ ಅನ್ನುವ ರೀತಿಯಲ್ಲಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡು ಬಿಟ್ಟರು. ಒಬ್ಬ ವಿದ್ಯಾರ್ಥಿ 80 ರಲ್ಲಿ 13 ಅಂಕ ಗಳಿಸಿ ಬಾಕಿ ಉಳಿದ 20 ಅಂಕಗಳ ಆಂತರಿಕ ಮೌಲ್ಯ ಮಾಪನದಲ್ಲಿ ಶಾಲೆಯವರು ನಮ್ಮ ವಿದ್ಯಾರ್ಥಿ ಹೇಗಾದರು ಪಾಸಾಗಲಿ ಫೈಲಾದರೆ ಕೊನೆಗೂ ನಮಗೆ ಕಷ್ಟ ಹಾಗಾಗಿ ಹೆಚ್ಚಿನ ಶಾಲಾ ಮೇಷ್ಟ್ರುಗಳು 20 ಕ್ಕೆ 20 ಅಂಕಗಳನ್ನು ನೀಡಿ ತಮ್ಮ ಶಾಲಾ ಫಲಿತಾಂಶದ ಜೊತೆಗೆ ರಾಜ್ಯದಲ್ಲಿ ಫಲಿತಾಂಶವನ್ನು ಹೆಚ್ಚಿಸಿ ಶಿಕ್ಷಣ ಸಚಿವರನ್ನು ತೃಪ್ತಿಪಡಿಸಿದ ಪ್ರಸಂಗವನ್ನು ನಾವು ನೇೂಡಿದ್ದೇವೆ.

ಇದೀಗ ಇದೇ ಪ್ರಾಥಮಿಕ ಮಾಧ್ಯಮಿಕ ಶಿಕ್ಷಣ ಸಚಿವರು ಶಿಕ್ಷಣ ಕ್ಷೇತ್ರದಲ್ಲಿ ಸಾಮಾಜಿಕ ಧಾರ್ಮಿಕ ನ್ಯಾಯ ಕೊಡುತ್ತೇನೆ ಅನ್ನುವ ರೀತಿಯಲ್ಲಿ ಶೈಕ್ಷಣಿಕ ವಲಯದ ನೆಮ್ಮದಿಯನ್ನು ಕೆಡಿಸಲು ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದಾರೆ ಅನ್ನಿಸುತ್ತದೆ. ಕಳೆದ ಮೂರು ನಾಲ್ಕು ವರ್ಷಗಳ ಹಿಂದೆ ರಾಜ್ಯದ ಶಿಕ್ಷಣ ಕ್ಷೇತ್ರದ ನೆಮ್ಮದಿ ಶಾಂತಿ ಸಂಪೂರ್ಣವಾಗಿ ಕೆಡಿಸಿದ ಹಿಜಾಬ್ ಕೇಸರಿ ಶಾಲುಗಳ ಸವಾಲು ಇಡೀ ವಿದ್ಯಾರ್ಥಿ ಸಮುದಾಯವನ್ನೆ ಒಡೆದು ಶಾಲಾ ಕಾಲೇಜು ರಾಜಕೀಯವಾಗಿ ರಣರಂಗವಾಗಿ ಮಾಡಿದ್ದ ಪ್ರಸಂಗ ಇನ್ನೂ ವಿದ್ಯಾರ್ಥಿಗಳ ಶಿಕ್ಷಕರ ಪೇೂಷಕರ ಮನಸ್ಸಿನಿಂದ ಮಾಸಿಲ್ಲ. ವಿದ್ಯಾರ್ಥಿಗಳಿಗೆ ಸಮವಸ್ತೃ ಬೇಕೋ ಬೇಡವೋ? ಧಾರ್ಮಿಕ ಉಡುಗೆ ತೊಡುಗೆ ತೊಟ್ಟು ಶಾಲೆಗೆ ಬರಬಹುದೇ? ಈ ವಿಷಯ ನ್ಯಾಯಾಂಗ ಮೆಟ್ಟಿಲು ಹತ್ತಿ ಹೈಕೋರ್ಟ್ ಶಾಲಾ ಸಮವಸ್ತ್ರ ಧರಿಸುವುದು ಆಯಾಯ ಶಾಲಾ ನಿಧಾ೯ರಕ್ಕೆ ಬಿಟ್ಟ ವಿಚಾರ ಅನ್ನುವ ತೀರ್ಪು ನೀಡಿತ್ತು. ಮತ್ತೆ ಇದೇ ವಿಷಯ ಸುಪ್ರೀಂ ಅಂಗಳಕ್ಕೆ ಹೇೂದಾಗ ಅಡ್ಡಗೇೂಡೆಯ ಮೇಲೆ ದೀಪ ಇಟ್ಟ ತೀರ್ಪು ಬಂದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮತ್ತು ಶಾಲಾ ಕಾಲೇಜುಗಳು ಒಂದು ರೀತಿಯಲ್ಲಿ ಎಲ್ಲಾ ಜಾತಿ ಮತೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರೂ ಒಪ್ಪುವ ತರದಲ್ಲಿ ಸಮವಸ್ತ್ರ ಕಡೆಗೆ ಹೆಚ್ಚು ಒಲವು ತೇೂರಿಸಿದ್ದನ್ನು ನಾವು ನೇೂಡಿದ್ದೇವೆ. ಇತಿ ಮಿತಿಯ ಒಳಗೆ ಸಮವಸ್ತ್ರ ಮುಚ್ಚದ ರೀತಿಯಲ್ಲಿ ವಿದ್ಯಾರ್ಥಿಗಳ ಧಾಮಿ೯ಕ ವೇಷ ಭೂಷಣಕ್ಕೆ ವ್ಯವಸ್ಥೆ ಮಾಡಿ ಶಿಕ್ಷಣ ರಂಗದಲ್ಲಿ ಒಂದು ರೀತಿಯಲ್ಲಿ ಶಾಲಾ ಕಾಲೇಜುಗಳಲ್ಲಿ ನೆಮ್ಮದಿಯ ಶೈಕ್ಷಣಿಕ ವಾತಾವರಣ ಮೂಡಿ ಬಂತು ಅನ್ನುವ ಸಂದರ್ಭದಲ್ಲಿ ನಮ್ಮ ಶಿಕ್ಷಣ ಸಚಿವರು ಮತ್ತೆ ಹಿಜಾಬ್ ಪ್ರಶ್ನೆ ಯನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಹೊಸದೊಂದು ವೇದಿಕೆ ಸಜ್ಜುಗೊಳಿಸಲು ಮುಂದಾಗಿದ್ದಾರೆ ಅನ್ನುವುದು ಸ್ವಷ್ಟ.

ಜನಿವಾರದ ವಿಷಯವನ್ನು ಹಿಡಿದುಕೊಂಡು ಹಿಜಾಬ್ ಗೆ ನ್ಯಾಯ ಕೊಡಲು ಮುಂದಾಗಿದ್ದಾರೆ. ಜನಿವಾರದ ಸಮವಸ್ತ್ರದ ಒಳಗೆ ಯಾರಿಗೂ ಕಾಣದ ರೀತಿಯಲ್ಲಿ ಇರುತ್ತದೆ. ಹಾಗಾಗಿ ಜನಿವಾರ ಸಮವಸ್ತ್ರ ಕಾಣದಂತೆ ಎಂದು ಅಡ್ಧಿ ಮಾಡುವುದಿಲ್ಲ.ಇದೆ ಹಿಜಾಬ್ ಒಪ್ಪಿಗೆ ಕೊಟ್ಟಾಗ ಹಿಂದು ವಿದ್ಯಾರ್ಥಿಗಳು ಕೇಸರಿ ಶಾಲು ಮುಂಡು ಪೇಟ ಧರಿಸಿಕೊಂಡು ಬರುವ ಸಾಧ್ಯತೆಯೂ ಇದೆ. ಇದು ಕೂಡಾ ಧಾರ್ಮಿಕ ಉಡುಗೆ ತೊಡುಗೆ ಅನ್ನುವ ಇನ್ನೊಂದು ಪ್ರತಿವಾದ ಮುಂದಿನ ದಿನಗಳಲ್ಲಿ ಶಿಕ್ಷಣ ವಲಯದಲ್ಲಿ ಹುಟ್ಟಿಕೊಂಡರು ಆಶ್ಚರ್ಯ ಪಡಬೇಕಾಗಿಲ್ಲ.? ಇದಕ್ಕೂ ನೀವೇ ವೇದಿಕೆ ರೂಪಿಸಿಕೊಟ್ಟ ಕೀರ್ತಿ ಸಲ್ಲಬಹುದು.? ಈ ರೀತಿಯ ಅತಿಯಾದ ಧಾಮಿ೯ಕ ತುಷ್ಟೀಕರಣದಿಂದಾಗಿಯೇ ಪಶ್ಚಿಮ ಬಂಗಾಳದಲ್ಲಿ ಮಮತಾ ಮೂಲೆ ಸೇರಿದರು; ತಮಿಳುನಾಡಿನಲ್ಲಿ ಡಿ.ಎಂ.ಕೆ.ಸೇೂತು ವಿಪಕ್ಷದಲ್ಲಿ ಕೂರುವ ಪರಿಸ್ಥಿತಿ ಬಂದಿದೆ ಅನ್ನುವುದು ನಮಗೆ ಪಾಠವಾಗ ಬೇಕು. ಕರ್ನಾಟಕದಲ್ಲಿ ಶೈಕ್ಷಣಿಕ ನೆಮ್ಮದಿ ಶಾಂತಿ ಉಳಿಯುವ ದೃಷ್ಟಿಯಿಂದ ಮಧು ಬಂಗಾರಪ್ಪನವರು ತಮ್ಮ ನಿರ್ಧಾರ ಬದಲಾಯಿಸಿಕೊಳ್ಳಿ ಅನ್ನುವುದು ನಮ್ಮೆಲ್ಲರ ಸವಿನಯ ಕೇೂರಿಕೆ.

ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಬೆಳೆ ವಿಮೆ ಯೋಜನೆ: ನೋಂದಣಿ ಅವಧಿ ವಿಸ್ತರಣೆ

ಉಡುಪಿ, ಜು.6: ತೋಟಗಾರಿಕೆ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಮರು ವಿನ್ಯಾಸಗೊಳಿಸಿದ...

ಮೆಸ್ಕಾಂ ಜನಸಂಪರ್ಕ ಸಭೆ

ಉಡುಪಿ, ಜು. 6: ಮೆಸ್ಕಾಂ ಶಂಕರನಾರಾಯಣ ಉಪವಿಭಾಗ ಕಛೇರಿಯಲ್ಲಿ ಜುಲೈ 8...

ಉಚಿತ ಉಪಕರಣ ಸೌಲಭ್ಯ ಪಡೆಯಲು ಕುಶಲಕರ್ಮಿಗಳಿಂದ ಅರ್ಜಿ ಆಹ್ವಾನ

ಉಡುಪಿ, ಜು.6: ಗ್ರಾಮಾಂತರ ಕೈಗಾರಿಕೆ ಇಲಾಖೆ ವತಿಯಿಂದ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿರುವ...

ತೆಂಕನಿಡಿಯೂರು ಕಾಲೇಜಿನಲ್ಲಿ ಎಸ್.ಐ.ಆರ್ ಮಾಹಿತಿ; ಜಾಥಾ ಕಾರ್ಯಕ್ರಮ

ತೆಂಕನಿಡಿಯೂರು, ಜು.6: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ...
error: Content is protected !!