Wednesday, October 14, 2026
Wednesday, October 14, 2026

‘ಮತ್ತು’ ಬರಿಸಿ ಪ್ರಯಾಣಿಕರ ಲೂಟಿ- ರಕ್ಷಣಾ ದಳದ ಮುಖ್ಯಸ್ಥರನ್ನು ಭೇಟಿಯಾದ ಸಂಸದ ಕೋಟ ಶ್ರೀನಿವಾಸ ಪೂಜಾರಿ

‘ಮತ್ತು’ ಬರಿಸಿ ಪ್ರಯಾಣಿಕರ ಲೂಟಿ- ರಕ್ಷಣಾ ದಳದ ಮುಖ್ಯಸ್ಥರನ್ನು ಭೇಟಿಯಾದ ಸಂಸದ ಕೋಟ ಶ್ರೀನಿವಾಸ ಪೂಜಾರಿ

Date:

ಉಡುಪಿ, ಅ.12: ಮತ್ಸ್ಯಗಂಧ ಮತ್ತು ಸಿಎಸ್‌ಟಿ ರೈಲುಗಳಲ್ಲಿ ಕಳೆದ ಹಲವಾರು ದಶಕಗಳಿಂದ ದೂರಲಾಗುತ್ತಿರುವ ‘ಮತ್ತು’ ಬರಿಸಿ ಪ್ರಯಾಣಿಕರನ್ನು ಲೂಟಿ ಮಾಡುತ್ತಿರುವ ಸತತ ದೂರುಗಳ ಬಗ್ಗೆ ದೆಹಲಿಯ ರೈಲ್ವೇ ಬೋರ್ಡಿನಲ್ಲಿ ಭಾರತೀಯ ರೈಲ್ವೇಯ ರಕ್ಷಣಾ ದಳದ ಮುಖ್ಯಸ್ಥರನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿಯಾಗಿ ಪರಿಹಾರೋಪಯಗಳ ಕುರಿತು ಚರ್ಚೆ ನಡೆಸಿದರು. ಮುಖ್ಯವಾಗಿ, ರೈಲಿನ ಏಸಿ ಕೋಚ್ ಮಾತ್ರವಲ್ಲ ಸ್ಲೀಪರ್ ಕೋಚುಗಳಲ್ಲೂ ಸಿಸಿಟಿವಿ ಅಳವಡಿಕೆ ಮತ್ತು ಇದುವರೆಗೂ ನಡೆದ ಸಂಘಟಿತ ಅಪರಾಧಗಳ ಮಾದರಿಯ ಈ ಎಲ್ಲಾ ದರೋಡೆ ಪ್ರಕರಣಗಳ ತನಿಖೆಗೆ ನಾಲ್ಕು ರಾಜ್ಯಗಳ ಸಹಯೋಗದಲ್ಲಿ ವಿಶೇಷ ತನಿಖಾ ತಂಡ ರಚನೆಯ ಕುರಿತು ಚರ್ಚಿಸಲಾಯಿತು. ಸಂಸದರ ಜತೆ ವಿಷಯಗಳನ್ನು ವಿವರವಾಗಿ ಚರ್ಚಿಸಿದ ಸುರಕ್ಷತಾ ಮಹಾನಿರ್ದೇಶಕಿ ಸೋನಿಯಾ ಶರ್ಮಾ ರವರು ಇದುವರೆಗಿನ ಅಪರಾದಗಳ ಸಮಗ್ರ ತನಿಖೆಗೆ ಹಿರಿಯ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಿದರು.

ರೈಲುಗಳ ಕೋಚ್ ಗಳಿಗೆ ಸಿಸಿಟಿವಿ ಅಳವಡಿಕೆಗೆ ರೈಲು ಮಂಡಳಿಯ ಸೂಚನೆಗಾಗಿ ಮುಂದಿನ ಸಭೆಯಲ್ಲಿ ಈ ವಿಷಯ ಪ್ರಸ್ತುತಪಡಿಸುವುದಾಗಿಯೂ ತಿಳಿಸಿದರು. ಇದು ಅತ್ಯಂತ ಗಂಭೀರ ಹಾಗೂ ಪ್ರಯಾಣಿಕರ ಸುರಕ್ಷತೆಯ ವಿಷಯವೂ ಆಗಿದ್ದು ಇದನ್ನು ತಾರ್ಕಿಕ ಅಂತ್ಯದತ್ತ ಕೊಂಡೊಯ್ಯಲು ಮುಂದಿನ ವಾರ ರೈಲು ಸಚಿವರನ್ನೂ ಈ ಕುರಿತು ಭೇಟಿಯಾಗಿ ಚರ್ಚಿಸಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಶ್ರೀ ವಿನಾಯಕ ಯುವಕ ಮಂಡಲ (ರಿ.) ಸಾೖಬ್ರಕಟ್ಟೆ ಯಡ್ತಾಡಿ 15 ನೇ ವರ್ಷದ ಶಾರದೋತ್ಸವ

ಉಡುಪಿ, ಅ.13: ಶ್ರೀ ವಿನಾಯಕ ಯುವಕ ಮಂಡಲ (ರಿ) ಸಾೖಬ್ರಕಟ್ಟೆ ಯಡ್ತಾಡಿ...

ಗಂಗೊಳ್ಳಿ ಸರಸ್ವತಿ ವಿದ್ಯಾಲಯ: ಎನ್ ಎಸ್ ಎಸ್ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭ

ಉಡುಪಿ, ಅ.13: ಒಬ್ಬ ವಿದ್ಯಾರ್ಥಿ ದೈಹಿಕ ಮಾನಸಿಕ ಕಲಾತ್ಮಕ ಸದೃಢತೆ ಸಾಧಿಸುವಲ್ಲಿ...

ಸಾಹಿತ್ಯದಿಂದ ಮಾನವೀಯ ಮೌಲ್ಯಗಳ ಪುನರುತ್ಥಾನ

ಕೋಟೇಶ್ವರ, ಅ.13: ಸಮಾಜದ ಏಳುಬೀಳಿನ ಕಥನವನ್ನು ಹೇಳಿ ಆರೋಗ್ಯಪೂರ್ಣ ಸಮಾಜ ಕಟ್ಟುವ...

ಕಾಮಗಾರಿ ಹಿನ್ನೆಲೆ ಸಂಚಾರಕ್ಕೆ ಬದಲಿ ಮಾರ್ಗ

ಉಡುಪಿ, ಅ.13: ಉಡುಪಿ ನಗರಸಭಾ ವ್ಯಾಪ್ತಿಯ ತೆಂಕಪೇಟೆ ವಾರ್ಡಿನ ಬಡಗುಪೇಟೆ ರಸ್ತೆಯಲ್ಲಿ...
error: Content is protected !!