Tuesday, November 24, 2026
Tuesday, November 24, 2026

ಕಾರ್ತಿಕದ ಹುಣ್ಣಿಮೆ ಚಂದಿರ ಸೂಪರ್ ಮೂನ್

ಕಾರ್ತಿಕದ ಹುಣ್ಣಿಮೆ ಚಂದಿರ ಸೂಪರ್ ಮೂನ್

Date:

ಅದೇನು ಕಾಕತಾಳೀಯವೋ.. ಕಾರ್ತಿಕದ ದೀಪೋತ್ಸವಕ್ಕೆ ಹುಣ್ಣಿಮೆ ಚಂದಿರ ತನ್ನದೂ ಒಂದು ದೀಪವಿರಲಿ ಎಂಬಂತೆ ಹುಣ್ಣಿಮೆಯ ದಿನ ಸೂಪರ್ ಮೂನ್ ಆಗಲಿದ್ದಾನೆ. 28 ದಿನಗಳಲ್ಲಿ ಚಂದ್ರ ಪ್ರತಿ ದಿನ ಒಂದೊಂದು ನಕ್ಷತ್ರಕ್ಕೆ ನೇರ ಬಂದಂತೆ ಕಾಣುವನು. 24ನೇ ತಾರೀಕು, ಕೃತಿಕಾ ನಕ್ಷತ್ರ. ಅದೇ ದಿನ ಹುಣ್ಣಿಮೆ ಹಾಗಾಗಿ ಕಾರ್ತಿಕ ಮಾಸದ ಕಾರ್ತಿಕ ಹುಣ್ಣಿಮೆ.

ಭೂಮಿ ಸುತ್ತುವ ಚಂದ್ರನ ಪಥ ವರ್ತುಲವಲ್ಲ. ದೀರ್ಘ ವೃತ್ತಾಕಾರ. ಈ ಪಥದಲ್ಲಿ 28 ದಿನಗಳಿಗೊಮ್ಮೆ ಭೂಮಿಗೆ ಚಂದ್ರ ಸಮೀಪ ಹಾಗೂ (ಇದನ್ನ ಎಪೊಜಿ ಸಮೀಪ ದೂರ) ದೂರದ ದೂರ (ಪೆರಿಜಿ) ಬರುತವುದಿದೆ. ಭೂಮಿ ಚಂದ್ರರ ಸರಾಸರಿ ದೂರ 3 ಲಕ್ಷ 84 ಸಾವಿರ ಕಿಮೀ. ಅದೇ ಸಮೀಪ ಬಂದಾಗ 3ಲಕ್ಷದ 60ಸಾವಿರ ಕಿಮೀ ಬರುವದು. ಹೀಗೆ ಹತ್ತಿರ ಬಂದಾಗ , ಸುಮಾರು 25 ಸಾವಿರ ಕಿಮೀ ಭೂಮಿಗೆ ಹತ್ತಿರದಲ್ಲಿ ಕಂಡು 14 ಅಂಶ ದೊಡ್ಡದ್ದಾಗಿ ಕಾಣುವುದು. ಹಾಗೆಯೇ ಹುಣ್ಣಿಮೆಯ ಬೆಳದಿಂಗಳ ಪ್ರಭೆ ಸುಮಾರು 30 ಅಂಶ ಹೆಚ್ಚಾಗಲಿದೆ.

24 ನೇ ತಾರೀಕು ಚಂದ್ರ ಭೂಮಿಯಿಂದ 3ಲಕ್ಷದ 60 ಸಾವಿರ ಕಿಮೀ ದೂರದಲ್ಲಿರುತ್ತದೆ.
ಹಾಗಾಗಿ ಹುಣ್ಣಿಮೆ ದಿನ ಚಂದ್ರ ದೀಪೋತ್ಸವಗಳ ಜೊತೆ ಸೂಪರ್ ಆಕಾಶ ದೀಪವಾಗಿ ಕಾಣಲಿದೆ.
ಸಂಭ್ರಮದ ಸೂಪರ್ಮೂನ್ ನ ದೀಪೋತ್ಸವ ಆಚರಿಸೋಣ. ಅದರಲ್ಲೂ ಚಂದ್ರೋದಯ ಬಲು ಸುಂದರ. ನೋಡಿ ಆನಂದಿಸೋಣ

-ಡಾ. ಎ ಪಿ ಭಟ್ ಉಡುಪಿ

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಗ್ಯಾರಂಟಿ ಯೋಜನೆಗಳ ಕುರಿತು ಟೀಕೆ ಹಾಗೂ ವಿರೋಧ ಮಾಡುತ್ತಿರುವ ಬಿಜೆಪಿ ಪಕ್ಷ ಹಾಗೂ ಬಿಜೆಪಿ ಶಾಸಕರ ಮುಖವಾಡ ಬಯಲಾಗಿದೆ: ರಮೇಶ್ ಕಾಂಚನ್

ಉಡುಪಿ, ನ.23: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಚುನಾವಣಾಪೂರ್ವದಲ್ಲಿ ಜನರಿಗೆ ನೀಡಿದ...

ಯಕ್ಷಗಾನ ಕಲಾರಂಗದ 110ನೇ ಮನೆ ಹಸ್ತಾಂತರ

ಉಡುಪಿ, ನ.23: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‍ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ರಶ್ಮಿತಾ...

ಜ್ಞಾನಸುಧಾ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಸಂಸ್ಕಾರವನ್ನು ನೀಡಿ ಸಮಾಜಕ್ಕೆ ಧಾರೆಯೆರೆಯುತ್ತಿರುವ ಕಾರ್ಯ ಪ್ರಶಂಸನೀಯ

ಗಣಿತನಗರ, ನ.23: ಏಕಲವ್ಯನಿಂದ ಶ್ರದ್ಧೆಯನ್ನು, ಕೃಷ್ಣ- ಸುಧಾಮರ ಗೆಳೆತನದ ಪ್ರಜ್ಞೆಯನ್ನು ಹಾಗೂ...

ನ.24: ಕಾರ್ಕಳ ಜ್ಞಾನಸುಧಾದಲ್ಲಿ ಮೌಲ್ಯಸುಧಾ

ಗಣಿತನಗರ, ನ.23: ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ...
error: Content is protected !!