Monday, November 23, 2026
Monday, November 23, 2026

ಜ್ಞಾನಸುಧಾ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಸಂಸ್ಕಾರವನ್ನು ನೀಡಿ ಸಮಾಜಕ್ಕೆ ಧಾರೆಯೆರೆಯುತ್ತಿರುವ ಕಾರ್ಯ ಪ್ರಶಂಸನೀಯ

ಜ್ಞಾನಸುಧಾ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಸಂಸ್ಕಾರವನ್ನು ನೀಡಿ ಸಮಾಜಕ್ಕೆ ಧಾರೆಯೆರೆಯುತ್ತಿರುವ ಕಾರ್ಯ ಪ್ರಶಂಸನೀಯ

Date:

ಗಣಿತನಗರ, ನ.23: ಏಕಲವ್ಯನಿಂದ ಶ್ರದ್ಧೆಯನ್ನು, ಕೃಷ್ಣ- ಸುಧಾಮರ ಗೆಳೆತನದ ಪ್ರಜ್ಞೆಯನ್ನು ಹಾಗೂ ಶಬರಿಯ ಭಕ್ತಿ ನಮಗೆ ಮಾದರಿಯಾದುದು. ಇಂತಹ ಮಾದರಿಗಳು ನಮ್ಮಲ್ಲಿ ಭಾವಾನಾತ್ಮಕವಾದ ಬೆಸುಗೆ ಒದಗಿಸಿದೆ. ಆದರೆ ಹಿಂದಿನ ಕೆಲವು ಸಂಶೋಧನೆಗಳು ಇಂದು ಮಾರಕವಾಗುತ್ತಿರುವಾಗ, ಭಾವಾನಾತ್ಮಕ ಸಂಬಂಧಗಳು ದೂರವಾಗುತ್ತಿರುವ ಈ ಹೊತ್ತಿನಲ್ಲಿ ಜ್ಞಾನದೊಂದಿಗೆ ವಿವೇಕ ಬಹಳ ಮುಖ್ಯ. ಜ್ಞಾನಸುಧಾ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಸಂಸ್ಕಾರವನ್ನು ನೀಡಿ ಸಮಾಜಕ್ಕೆ ಧಾರೆಯೆರೆಯುತ್ತಿರುವ ಕಾರ್ಯ ಪ್ರಶಂಸನೀಯ ಎಂದು ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲ ಶರಣ ಕುಮಾರ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಜ್ಞಾನಸಂಭ್ರಮ -೨೦೨೬ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದ ಕಾರ್ಕಳದ ಹಿತ ಆಯುರ್ವೇದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಎಂ. ರವಿರಾಜ ಶೆಟ್ಟಿಯವರು, ಮಾತನಾಡಿ ಆಟ-ಪಾಠ-ಊಟ ಇವೆಲ್ಲದರ ಒಳ್ಳೆಯ ಅಬ್ಯಾಸವು ಜೀವನೋತ್ಸಾಹವನ್ನು ತರುತ್ತದೆ. ವಿದ್ಯಾರ್ಥಿ ದೆಸೆಯಲ್ಲಿಯೇ ದೈಹಿಕ- ಮಾನಸಿಕವಾದ ಆರೋಗ್ಯವನ್ನು ಸಧೃಢವಾಗಿರಿಸಿಕೊಂಡವರು ಶೈಕ್ಷಣಿಕವಾಗಿ ಸಹಿತ ಸರ್ವ ಕ್ಷೇತ್ರದಲ್ಲಿಯೂ ಯಶಸ್ವಿಯಾಗಲು ಸಾಧ್ಯ. ಡಾ.ಸುಧಾಕರ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಸಾಧನೆಯ ಜೊತೆಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಕ್ಷೇತ್ರದೊಂದಿಗೆ ಮೌಲ್ಯಯುತವಾಗಿ ಸಾಗಿ ಬರುತ್ತಿರುವುದು ಶ್ಲಾಘನೀಯ ಎಂದರು. ಇದೇ ಸಂದರ್ಭ ಸಂಸ್ಥೆಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ
ಆಯೋಜಿಸಿದ್ದ ಬಿಸ್‌ನೆಸ್ ಫೇರ್ – ರ‍್ನ್ ಮತ್ತು ರ‍್ನ್ನಿಂದ ಗಳಿಸಿದ ಲಾಭಾಂಶ ರೂ ೨೦ಸಾವಿರವನ್ನು ಆನೆಕೆರೆ ಸಮೀಪದ ನಿವಾಸಿ ಅನಾರೋಗ್ಯ ಪೀಡಿತ ವಿಘ್ನೇಶ್‌ರವರಿಗೆ ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.

ಸಾಧಕರಿಗೆ ಗೌರವ: 2026ನೇ ಸಾಲಿನ ರಾಷ್ಟ್ರ, ರಾಜ್ಯಮಟ್ಟದಲ್ಲಿ ಸಾಧನೆಗೈದ ಕ್ರೀಡಾ ಸಾಧಕರನ್ನು, ಕಾಲೇಜು ಹಂತದಲ್ಲಿ ನಡೆಸಿದ ಸಾಂಸ್ಕೃತಿಕ ಸ್ಪರ್ಧೆಯ ವಿಜೇತರನ್ನು ಗುರುತಿಸಿ ಗೌರವಿಸಲಾಯಿತು. ಸಮಗ್ರ ಕ್ರೀಡಾ ಪ್ರಶಸ್ತಿಯನ್ನು ಪ್ರಥಮ ಪಿಯುಸಿಯ ಬಿ-೧ ತನ್ನದಾಗಿಸಿಕೊಂಡಿತು. ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ಸಾಹಿತ್ಯ ಹಾಗೂ ಉಷಾ ರಾವ್ ಯು., ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯ ಉಪಪ್ರಾಂಶುಪಾಲೆ ವಾಣಿ ಕೆ., ಡೀನ್ ಅಕಾಡೆಮಿಕ್ ಡಾ. ಮಿಥುನ್ ಯು., ಡೀನ್ ಸ್ಟೂಡೆಂಟ್ ಅಫೈರ್ ಶಕುಂತಳಾ ಎಂ ಸುವರ್ಣ, ಜ್ಞಾನಸುಧಾ ಎಂಟ್ರನ್ಸ್ ಅಕಾಡೆಮಿ ಸಂಯೋಜಕ ಸಂದೀಪ, ವಿದ್ಯಾರ್ಥಿ ನಾಯಕರಾದ ವಿಶ್ವನಾಥ್ ಎಸ್ ಎನ್ ಹಾಗೂ ಗ್ರೀಷ್ಮಾ ಎಸ್ ಉಪಸ್ಥಿತರಿದ್ದರು.

ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲ ದಿನೇಶ್ ಎಂ ಕೊಡವೂರ್ ಸ್ವಾಗತಿಸಿ, ಪಿ.ಆರ್.ಒ ಜ್ಯೋತಿ ಪದ್ಮನಾಭ ಭಂಡಿ ವಂದಿಸಿದರು. ವಾರ್ಷಿಕ ವರದಿಯನ್ನು ಭೌತಶಾಸ್ತ್ರ ವಿಭಾಗದ ಶರತ್ ಆಚಾರ್ಯ, ಸಾಧಕರ ಪಟ್ಟಿಯನ್ನು ಆಂಗ್ಲಭಾಷಾ ವಿಭಾಗದ ಕು.ದಿವ್ಯ, ಜೀವಶಾಸ್ತ್ರ ವಿಭಾಗದ ಸಹನ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕಿ ಸೌಜನ್ಯ ಹೆಗ್ಡೆ ವಾಚಿಸಿದರು. ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಸಂಗೀತ ಕುಲಾಲ್ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಯಕ್ಷಗಾನ ಕಲಾರಂಗದ 110ನೇ ಮನೆ ಹಸ್ತಾಂತರ

ಉಡುಪಿ, ನ.23: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‍ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ರಶ್ಮಿತಾ...

ನ.24: ಕಾರ್ಕಳ ಜ್ಞಾನಸುಧಾದಲ್ಲಿ ಮೌಲ್ಯಸುಧಾ

ಗಣಿತನಗರ, ನ.23: ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ...

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ

ಉಡುಪಿ, ನ.23: ಕರ್ನಾಟಕ ಸರಕಾರದ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ...
error: Content is protected !!