Tuesday, November 24, 2026
Tuesday, November 24, 2026

ಬಿ.ಬಿ. ಹೆಗ್ಡೆ ಕಾಲೇಜಿನ ಕಿರಣ್ ಕುಮಾರ್ ಎನ್ ಅವರಿಗೆ ರಾಜ್ಯದ ಅತ್ಯುತ್ತಮ ಎನ್.ಎಸ್.ಎಸ್ ಸ್ವಯಂಸೇವಕ ಪ್ರಶಸ್ತಿ

ಬಿ.ಬಿ. ಹೆಗ್ಡೆ ಕಾಲೇಜಿನ ಕಿರಣ್ ಕುಮಾರ್ ಎನ್ ಅವರಿಗೆ ರಾಜ್ಯದ ಅತ್ಯುತ್ತಮ ಎನ್.ಎಸ್.ಎಸ್ ಸ್ವಯಂಸೇವಕ ಪ್ರಶಸ್ತಿ

Date:

ಉಡುಪಿ, ನ.23: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸ್ವಯಂಸೇವಕ ಕಿರಣ್ ಕುಮಾರ್ ಎನ್. ಅವರು ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ 2023-24ನೇ ಸಾಲಿನ ಕರ್ನಾಟಕ ರಾಜ್ಯದ ಅತ್ಯುತ್ತಮ ಎನ್.ಎಸ್.ಎಸ್. ಸ್ವಯಂಸೇವಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಹಿಂದೆ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿ ಅತ್ಯುತ್ತಮ ಸಾಂಸ್ಕೃತಿಕ ಪ್ರತಿಭೆ ಎಂಬ ಮನ್ನಣೆ ಪಡೆದ ಇವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವಳಗೆರೆ ಗ್ರಾಮದ ಹಿನ್ಸೋಡಿಯ ನಾಗರಾಜ ಮತ್ತು ಲಕ್ಷ್ಮೀ ದಂಪತಿಯ ಪುತ್ರ. ಇವರಿಗೆ ಕಾಲೇಜಿನ ಅಧ್ಯಕ್ಷ ಬಿ.ಎಮ್ . ಸುಕುಮಾರ್ ಶೆಟ್ಟಿ, ಪ್ರಾಂಶುಪಾಲ ಡಾ. ಕೆ. ಉಮೇಶ್ ಶೆಟ್ಟಿ, ಮಾರ್ಗದರ್ಶನ ನೀಡಿದ ಎನ್.ಎಸ್.ಎಸ್  ಕಾರ್ಯಕ್ರಮಾಧಿಕಾರಿಗಳಾದ ಡಾ. ಚೇತನ್ ಶೆಟ್ಟಿ ಕೋವಾಡಿ ಹಾಗೂ ದೀಪಾ ಪೂಜಾರಿ ಅಭಿನಂದನೆ ಸಲ್ಲಿಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾರ್ತಿಕದ ಹುಣ್ಣಿಮೆ ಚಂದಿರ ಸೂಪರ್ ಮೂನ್

ಅದೇನು ಕಾಕತಾಳೀಯವೋ.. ಕಾರ್ತಿಕದ ದೀಪೋತ್ಸವಕ್ಕೆ ಹುಣ್ಣಿಮೆ ಚಂದಿರ ತನ್ನದೂ ಒಂದು ದೀಪವಿರಲಿ...

ಗ್ಯಾರಂಟಿ ಯೋಜನೆಗಳ ಕುರಿತು ಟೀಕೆ ಹಾಗೂ ವಿರೋಧ ಮಾಡುತ್ತಿರುವ ಬಿಜೆಪಿ ಪಕ್ಷ ಹಾಗೂ ಬಿಜೆಪಿ ಶಾಸಕರ ಮುಖವಾಡ ಬಯಲಾಗಿದೆ: ರಮೇಶ್ ಕಾಂಚನ್

ಉಡುಪಿ, ನ.23: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಚುನಾವಣಾಪೂರ್ವದಲ್ಲಿ ಜನರಿಗೆ ನೀಡಿದ...

ಯಕ್ಷಗಾನ ಕಲಾರಂಗದ 110ನೇ ಮನೆ ಹಸ್ತಾಂತರ

ಉಡುಪಿ, ನ.23: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‍ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ರಶ್ಮಿತಾ...

ಜ್ಞಾನಸುಧಾ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಸಂಸ್ಕಾರವನ್ನು ನೀಡಿ ಸಮಾಜಕ್ಕೆ ಧಾರೆಯೆರೆಯುತ್ತಿರುವ ಕಾರ್ಯ ಪ್ರಶಂಸನೀಯ

ಗಣಿತನಗರ, ನ.23: ಏಕಲವ್ಯನಿಂದ ಶ್ರದ್ಧೆಯನ್ನು, ಕೃಷ್ಣ- ಸುಧಾಮರ ಗೆಳೆತನದ ಪ್ರಜ್ಞೆಯನ್ನು ಹಾಗೂ...
error: Content is protected !!