Monday, October 12, 2026
Monday, October 12, 2026

ಕ್ರಿಯೇಟಿವ್ ಗ್ಲೋಬಲ್ ಶಾಲೆಯಲ್ಲಿ ಅಂಚೆ ದಿನಾಚರಣೆ

ಕ್ರಿಯೇಟಿವ್ ಗ್ಲೋಬಲ್ ಶಾಲೆಯಲ್ಲಿ ಅಂಚೆ ದಿನಾಚರಣೆ

Date:

ಕಾರ್ಕಳ, ಅ.12: ಮೊಬೈಲ್ ಸಂದೇಶಗಳ ಭರಾಟೆಯಲ್ಲಿ ಪತ್ರದ ಮಧುರತೆಯನ್ನು ಮರೆತಿರುವ ಇಂದಿನ ಕಾಲಘಟ್ಟದಲ್ಲಿ, ಕ್ರಿಯೇಟಿವ್ ಗ್ಲೋಬಲ್ ಶಾಲೆಯ ವಿದ್ಯಾರ್ಥಿಗಳು ಅಂಚೆ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದರು. ವಿದ್ಯಾರ್ಥಿಗಳು ತಮ್ಮ ಕೈಬರಹದಲ್ಲಿ ಅಪ್ಪ-ಅಮ್ಮನಿಗೆ ಹಬ್ಬದ ಶುಭಾಶಯಗಳನ್ನು ಕೋರಿ, ಪ್ರೀತಿ ಮತ್ತು ಭಾವನೆಗಳನ್ನು ತುಂಬಿದ ಪತ್ರಗಳನ್ನು ಬರೆದರು. ಬಳಿಕ ಅಂಚೆ ಕಚೇರಿಗೆ ಭೇಟಿ ನೀಡಿ, ಅಂಚೆ ವ್ಯವಸ್ಥೆಯ ಕಾರ್ಯವೈಖರಿ, ಪತ್ರಗಳ ವಿಂಗಡಣೆ ಮತ್ತು ಅವುಗಳನ್ನು ಮನೆಮನೆಗೆ ತಲುಪಿಸುವ ಪ್ರಕ್ರಿಯೆಯ ಕುರಿತು ಮಾಹಿತಿ ಪಡೆದರು. ತಾವೇ ಬರೆದ ಪತ್ರಗಳನ್ನು ಅಂಚೆ ಪೆಟ್ಟಿಗೆಯಲ್ಲಿ ಹಾಕುವ ಮೂಲಕ ತಮ್ಮ ಪ್ರೀತಿಯ ಸಂದೇಶಗಳು ಮನೆಯವರನ್ನು ತಲುಪುವಂತೆ ಮಾಡಿದರು. ಮಕ್ಕಳಿಗೆ ಇದೊಂದು ಹೊಸ ಅನುಭವ, ಕುತೂಹಲಕಾರಿ ಕಲಿಕೆ ಮತ್ತು ಮರೆಯಲಾಗದ ಸಂಭ್ರಮವಾಯಿತು. ಮನೆಗೆ ಪತ್ರ ತಲುಪಿದಾಗ ಅನೇಕ ಪೋಷಕರು ವ್ಯಕ್ತಪಡಿಸಿದ ಸಂತೋಷ ಮತ್ತು ಭಾವನಾತ್ಮಕ ಪ್ರತಿಕ್ರಿಯೆಗಳು ಈ ಪ್ರಯತ್ನದ ಸಾರ್ಥಕತೆಯನ್ನು ಸಾರಿದವು. ಮೊಬೈಲ್ ಸಂದೇಶಗಳು ಕ್ಷಣಾರ್ಧದಲ್ಲಿ ತಲುಪುವ ಈ ಡಿಜಿಟಲ್ ಯುಗದಲ್ಲಿ, ಮಕ್ಕಳ ಮುಗ್ಧ ಮನಸ್ಸಿನ ಪ್ರೀತಿ, ತಮ್ಮ ಕೈಬರಹದ ಅಕ್ಷರಗಳ ಮೂಲಕ ಅಪ್ಪ-ಅಮ್ಮನ ಹೃದಯ ತಲುಪಿದ ಕ್ಷಣ ನಿಜಕ್ಕೂ ಅದ್ಭುತ! ತಂತ್ರಜ್ಞಾನವು ವೇಗವನ್ನು ನೀಡಬಹುದು; ಆದರೆ ಕೈಬರಹದ ಪತ್ರವು ಭಾವನೆಗಳಿಗೆ ಜೀವ ತುಂಬುತ್ತದೆ. ಕ್ರಿಯೇಟಿವ್ ಗ್ಲೋಬಲ್ ಶಾಲೆಯ ಈ ವಿಶಿಷ್ಟ ಆಚರಣೆ ಮಕ್ಕಳಲ್ಲಿ ಪತ್ರ ಬರೆಯುವ ಸಂಸ್ಕೃತಿಯನ್ನು ಬೆಳೆಸುವುದರ ಜೊತೆಗೆ, ಕುಟುಂಬದ ಪ್ರೀತಿ ಮತ್ತು ಭಾವನಾತ್ಮಕ ಸಂಬಂಧಗಳ ಮೌಲ್ಯವನ್ನು ಸಾರುವ ಅರ್ಥಪೂರ್ಣ ಪ್ರಯತ್ನವಾಯಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅ.17-18: ಬ್ರಹ್ಮಾವರದಲ್ಲಿ ಕೃಷಿ ಮತ್ತು ತೋಟಗಾರಿಕೆ ಮೇಳ

ಉಡುಪಿ, ಅ.12: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ...

‘ಮತ್ತು’ ಬರಿಸಿ ಪ್ರಯಾಣಿಕರ ಲೂಟಿ- ರಕ್ಷಣಾ ದಳದ ಮುಖ್ಯಸ್ಥರನ್ನು ಭೇಟಿಯಾದ ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ, ಅ.12: ಮತ್ಸ್ಯಗಂಧ ಮತ್ತು ಸಿಎಸ್‌ಟಿ ರೈಲುಗಳಲ್ಲಿ ಕಳೆದ ಹಲವಾರು ದಶಕಗಳಿಂದ...

ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ

ಮೈಸೂರು, ಅ.11: ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿಯ ಅಗ್ರಪೂಜೆಯೊಂದಿಗೆ 2026ರ ಮೈಸೂರು...

ತಮಿಳುನಾಡಿನಲ್ಲಿ 13,000 ಕೋಟಿ ರೂ. ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ಚೆನ್ನೈ, ಅ.11: ಚೆನ್ನೈನ ಐಐಟಿ-ಮದ್ರಾಸ್‌ನಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ, ಪ್ರಧಾನಿ ನರೇಂದ್ರ...
error: Content is protected !!