Tuesday, October 13, 2026
Tuesday, October 13, 2026

ಡಾ. ಸುಧಾ ಯಾದವ್ ಕರ್ನಾಟಕದ ನೂತನ ರಾಜ್ಯಪಾಲೆ

ಡಾ. ಸುಧಾ ಯಾದವ್ ಕರ್ನಾಟಕದ ನೂತನ ರಾಜ್ಯಪಾಲೆ

Date:

ಬೆಂಗಳೂರು, ಅ.12: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಾ. ಸುಧಾ ಯಾದವ್ ಅವರನ್ನು ಕರ್ನಾಟಕದ ನೂತನ ರಾಜ್ಯಪಾಲರನ್ನಾಗಿ ನೇಮಿಸಿದ್ದಾರೆ.

ಡಾ. ಸುಧಾ ಯಾದವ್ ಅಕ್ಟೋಬರ್ 16, 1965 ಜನಸಿದರು. ಅವರು ಭಾರತೀಯ ಜನತಾ ಪಕ್ಷದ ಸಂಸದೀಯ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಹರಿಯಾಣದ ಮಹೇಂದ್ರಗಢ ಕ್ಷೇತ್ರದಿಂದ ಆಯ್ಕೆಯಾಗಿ, 1994 ರಿಂದ 2004 ರವರೆಗೆ 13ನೇ ಲೋಕಸಭೆಯ ಸದಸ್ಯರಾಗಿ ಕಾರ್ಯನಿರ್ವಹಿಸಿದರು.

3 ಜುಲೈ 2015 ರಂದು, ಅವರನ್ನು ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಉಸ್ತುವಾರಿಯಾಗಿ ನೇಮಕ ಮಾಡಲಾಯಿತು. ಇವರು 2019 ರಿಂದ 2022 ರವರೆಗೆ ಭಾರತ ಸರ್ಕಾರದ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಸದಸ್ಯರಾಗಿ ಸೇವೆ ಸಲ್ಲಿಸಿದರು.

17 ಆಗಸ್ಟ್ 2022 ರಂದು, ಅವರು ಬಿಜೆಪಿಯ ಸಂಸದೀಯ ಮಂಡಳಿಯ ಸದಸ್ಯರಾದರು. ಸುಷ್ಮಾ ಸ್ವರಾಜ್ ಅವರ ನಂತರ ಈ ಹುದ್ದೆಯನ್ನು ಅಲಂಕರಿಸಿದ ಎರಡನೇ ಮಹಿಳೆ ಇವರಾಗಿದ್ದಾರೆ.

ಸುಧಾ ಯಾದವ್ ಅವರು 1987 ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ರೂರ್ಕಿ (ಐಐಟಿ ರೂರ್ಕಿ) ಯಿಂದ ರಸಾಯನಶಾಸ್ತ್ರದಲ್ಲಿ ಎಂ.ಎಸ್.ಸಿ ಪದವಿಯನ್ನು ಪಡೆದರು ಮತ್ತು ನಂತರ 1992 ರಲ್ಲಿ ಅದೇ ಸಂಸ್ಥೆಯಿಂದ ರಸಾಯನಶಾಸ್ತ್ರದಲ್ಲಿ ಪಿಎಚ್‌ಡಿ ಪದವಿಯನ್ನು ಪಡೆದರು. ಇವರು ‘ಪ್ರೆಸಿಡೆಂಟ್ಸ್ ಗೈಡ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇವರ ಪತಿ, ಗಡಿ ಭದ್ರತಾ ಪಡೆಯ ಡೆಪ್ಯುಟಿ ಕಮಾಂಡೆಂಟ್ ಸುಖಬೀರ್ ಸಿಂಗ್ ಯಾದವ್ ಅವರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅಮೇರಿಕನ್ ಅರ್ಥಶಾಸ್ತ್ರಜ್ಞರಾದ ರಾಬರ್ಟ್ ಇ. ಹಾಲ್ ಮತ್ತು ಮೈಕೆಲ್ ವುಡ್‌ಫೋರ್ಡ್ ಅವರಿಗೆ 2026 ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ

ಯು.ಬಿ.ಎನ್.ಡಿ., ಅ.12: 2026 ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಅಮೇರಿಕನ್ ಅರ್ಥಶಾಸ್ತ್ರಜ್ಞರಾದ...

ಅ.17-18: ಬ್ರಹ್ಮಾವರದಲ್ಲಿ ಕೃಷಿ ಮತ್ತು ತೋಟಗಾರಿಕೆ ಮೇಳ

ಉಡುಪಿ, ಅ.12: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ...

ಕ್ರಿಯೇಟಿವ್ ಗ್ಲೋಬಲ್ ಶಾಲೆಯಲ್ಲಿ ಅಂಚೆ ದಿನಾಚರಣೆ

ಕಾರ್ಕಳ, ಅ.12: ಮೊಬೈಲ್ ಸಂದೇಶಗಳ ಭರಾಟೆಯಲ್ಲಿ ಪತ್ರದ ಮಧುರತೆಯನ್ನು ಮರೆತಿರುವ ಇಂದಿನ...

‘ಮತ್ತು’ ಬರಿಸಿ ಪ್ರಯಾಣಿಕರ ಲೂಟಿ- ರಕ್ಷಣಾ ದಳದ ಮುಖ್ಯಸ್ಥರನ್ನು ಭೇಟಿಯಾದ ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ, ಅ.12: ಮತ್ಸ್ಯಗಂಧ ಮತ್ತು ಸಿಎಸ್‌ಟಿ ರೈಲುಗಳಲ್ಲಿ ಕಳೆದ ಹಲವಾರು ದಶಕಗಳಿಂದ...
error: Content is protected !!