Wednesday, September 30, 2026
Wednesday, September 30, 2026

ಕ್ರಿಯೇಟಿವ್ ಸಂಸ್ಥೆಯ 9 ವಿದ್ಯಾರ್ಥಿಗಳು ಎನ್.ಡಿ.ಎ ಮತ್ತು ಎನ್.ಎ. ಪರೀಕ್ಷೆಯಲ್ಲಿ ತೇರ್ಗಡೆ

ಕ್ರಿಯೇಟಿವ್ ಸಂಸ್ಥೆಯ 9 ವಿದ್ಯಾರ್ಥಿಗಳು ಎನ್.ಡಿ.ಎ ಮತ್ತು ಎನ್.ಎ. ಪರೀಕ್ಷೆಯಲ್ಲಿ ತೇರ್ಗಡೆ

Date:

ಉಡುಪಿ, ಏ.30: ಕೇಂದ್ರ ಲೋಕಸೇವಾ ಆಯೋಗ (ಯು.ಪಿ.ಎಸ್.ಸಿ) ನಡೆಸುವ ಎನ್.ಡಿ.ಎ ಮತ್ತು ಎನ್.ಎ. ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್ ಸಂಸ್ಥೆಯ ಒಂಬತ್ತು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿಗಳಾದ ಟಿ. ಪ್ರದೀಪ್, ಸಾಚಿ ಶಿವಕುಮಾರ್ ಕಡಿ., ಸಮೃದ್ದ್ ಕೆ., ಚೇತನ್ ಗೌಡ ಎನ್. ಎಸ್., ತ್ರಿಶ್ಲಾ ಗಾಂಧಿ, ತನಿಷಾ, ಸಂಗೀತಾ ಬಿ. ಎಮ್., ಮೊನಿಷಾ ಡಿ. ಮತ್ತು ಅಭಿಷೇಕ್ ಜೊಯಲ್ ಜಿ. ಯು. ಎಪ್ರಿಲ್ 13ರಂದು ನಡೆದ ಎನ್ ಡಿ ಎ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಮುಂದಿನ ಹಂತದಲ್ಲಿ ನಡೆಯುವ ಸರ್ವಿಸ್ ಸೆಲೆಕ್ಷನ್ ಬೋರ್ಡ್ (ಎಸ್.ಎಸ್.ಬಿ) ಸುತ್ತಿಗೆ ಅರ್ಹತೆ ಪಡೆದಿದ್ದಾರೆ.

ಪುಣೆಯ ಖಡಕ್ ವಾಸ್ಲಾದಲ್ಲಿರುವ ಎನ್.ಡಿ.ಎ ಮತ್ತು ಎನ್.ಎ. ತರಬೇತಿ ಸಂಸ್ಥೆಯಲ್ಲಿ ಬಿ.ಟೆಕ್ ಅಥವಾ ಬಿ.ಎಸ್ಸಿ ಪದವಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗಾಗಿ ನಡೆಯುವ ಎನ್.ಡಿ.ಎ ಮತ್ತು ಎನ್.ಎ. ಪರೀಕ್ಷೆ ಬಲು ಕಠಿಣ ಪರೀಕ್ಷೆಯಾಗಿದ್ದು ಪರೀಕ್ಷೆಗೆ ಕುಳಿತ 6 ಲಕ್ಷ ವಿದ್ಯಾರ್ಥಿಗಳಲ್ಲಿ 7800 ವಿದ್ಯಾರ್ಥಿ ಎಸ್. ಎಸ್. ಬಿ ಸುತ್ತಿಗೆ ತೇರ್ಗಡೆಯಾಗಿದ್ದಾರೆ. 900 ಅಂಕಗಳಿಗೆ ನಡೆಯುವ ಈ ಪರೀಕ್ಷೆಯಲ್ಲಿ 300 ಅಂಕಗಳಿಗೆ ಗಣಿತದ ಪ್ರಶ್ನೆಗಳೇ ಬರುವುದು ವಿದ್ಯಾರ್ಥಿಗಳಿಗಿರುವ ಬಹುದೊಡ್ಡ ಸವಾಲು. ಕ್ರಿಯೇಟಿವ್ ಸಂಸ್ಥೆಯ ನಿರಂತರ ಬೋಧನೆ ಹಾಗು ಎನ್.ಡಿ.ಎ ಮತ್ತು ಎನ್.ಎ.ಗಾಗಿ ನಡೆಯುವ ವಿಶೇಷ ತರಬೇತಿ ವಿದ್ಯಾರ್ಥಿಗಳ ಯಶಸ್ಸಿಗೆ ಕಾರಣವಾಗಿದೆ. ಎನ್.ಡಿ.ಎ ಮತ್ತು ಎನ್.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಸ್ಥಾಪಕರು, ಪ್ರಾಂಶುಪಾಲರು, ಎನ್.ಡಿ.ಎ ಪರೀಕ್ಷೆಯ ಸಂಯೋಜಕರಾದ ಸುಮಂತ್ ದಾಮ್ಲೆ, ರಕ್ಷಿತ್ ಬಿ ಎಸ್ ಮತ್ತು ಶರತ್ ಅಭಿನಂದಿಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ʼಕಬ್ಬದುಳುಮೆʼ ಕಾವ್ಯಲೋಕದ ಓದಿನ ಹೊಸಪರಿ

ಹಿರಿಯಡಕ, ಸೆ.30: ಹಳಗನ್ನಡ ಪಠ್ಯಗಳ ಸಂಧಿಬಂಧಗಳನ್ನು ಒಡೆದು ಒಳಗಿನ ತಿಳಿವನ್ನು ಅರಗಿಸಿಕೊಳ್ಳುವ...

ಕೋಟೇಶ್ವರ: ವಿದ್ಯಾರ್ಥಿ ಸಂಘ ಉದ್ಘಾಟನೆ

ಕೋಟೇಶ್ವರ, ಸೆ.30: ಯುವಕರಲ್ಲಿ ನಾಯಕತ್ವ ಗುಣವನ್ನು ಬೆಳೆಸುವಲ್ಲಿ ಕಾಲೇಜು ಹಂತದಲ್ಲಿ ವಿದ್ಯಾರ್ಥಿ...

ಹಿರಿಯ ನಾಗರಿಕರು ಹಿಂಜರಿಕೆಯಿಲ್ಲದೆ ಮುಕ್ತವಾಗಿ ಸ್ಪರ್ಧೆಗಳಲ್ಲಿ ಭಾಗವಹಿಸಿ: ನ್ಯಾ. ನಿತಿನ್ ಯಶ್ವಂತ್ ರಾವ್

ಉಡುಪಿ, ಸೆ.30: ವಯಸ್ಸು ಕೇವಲ ದೇಹಕ್ಕೆ ಮಾತ್ರ ಮನಸ್ಸಿಗಲ್ಲ ಎಂಬ ಚಿಂತನೆಯೊಂದಿಗೆ...

ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ

ಕುಂದಾಪುರ, ಸೆ.30: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿಗೆ...
error: Content is protected !!