ಮಣಿಪಾಲ, ಏ.30: ಮಣಿಪಾಲ ರಜತಾದ್ರಿ ಜಿಲ್ಲಾಡಳಿತ ಕಚೇರಿ ಸಂಕೀರ್ಣದಲ್ಲಿ ಅಕ್ಕಾ ಕೆಫೆ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಈ ಅಕ್ಕಾ ಕೆಫೆ ನಿರ್ವಹಿಸಲು ಅರ್ಹ ಸಂಜೀವಿನಿ ಸ್ವ ಸಹಾಯ ಗುಂಪುಗಳಿಗೆ ನೇರ ಸಂದರ್ಶನ ಏರ್ಪಡಿಸಲಾಗಿದೆ. ನೆಡೆಸುವ ಗುಂಪುಗಳು ಕಡ್ಡಾಯವಾಗಿ ಗ್ರಾಮೀಣ / ನಗರ ಸಂಜೀವಿನಿ ಸ್ವ ಸಹಾಯ ಗುಂಪುಗಳಾಗಿರಬೇಕು. ಈಗಾಗಲೇ ಹೋಟೆಲ್ ಅಥವಾ ಕ್ಯಾಟಾರಿಂಗ್ ಉದ್ಯಮದಲ್ಲಿ ಅನುಭವ ಹೊಂದಿರಬೇಕು. ಸ್ಥಳೀಯ ಸ್ವ ಸಹಾಯ ಗುಂಪುಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಆಸಕ್ತ ಸ್ವ ಸಹಾಯ ಗುಂಪುಗಳು ಅಗತ್ಯ ದಾಖಲೆ ಗಳೊಂದಿಗೆ ದಿನಾಂಕ 03.05.2025 ರಂದು ಪೂರ್ವಹ್ನ 10. 00 ಗಂಟೆಗೆ ಜಿಲ್ಲಾ ಪಂಚಾಯತ್ ಕಚೇರಿ ರಜತಾದ್ರಿ ಮಣಿಪಾಲ ಇಲ್ಲಿ ಆಯೋಜಿಸುವ ಅಕ್ಕಾ ಕೆಫೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಅವಿನಾಶ್ ಜಿಲ್ಲಾ ವ್ಯವಸ್ಥಾಪಕರು ಸಂಜೀವಿನಿ ಯೋಜನೆ 9844234080 ಇವರನ್ನು ಸಂಪರ್ಕಿಸಬಹುದಾಗಿದೆ.
ಮಣಿಪಾಲದ ಅಕ್ಕ ಕೆಫೆಗೆ ನೇರ ಸಂದರ್ಶನ
ಮಣಿಪಾಲದ ಅಕ್ಕ ಕೆಫೆಗೆ ನೇರ ಸಂದರ್ಶನ
Date:




By
ForthFocus™