Wednesday, September 30, 2026
Wednesday, September 30, 2026

ʼಕಬ್ಬದುಳುಮೆʼ ಕಾವ್ಯಲೋಕದ ಓದಿನ ಹೊಸಪರಿ

ʼಕಬ್ಬದುಳುಮೆʼ ಕಾವ್ಯಲೋಕದ ಓದಿನ ಹೊಸಪರಿ

Date:

ಹಿರಿಯಡಕ, ಸೆ.30: ಹಳಗನ್ನಡ ಪಠ್ಯಗಳ ಸಂಧಿಬಂಧಗಳನ್ನು ಒಡೆದು ಒಳಗಿನ ತಿಳಿವನ್ನು ಅರಗಿಸಿಕೊಳ್ಳುವ ನಿರಂತರ ಬೇಸಾಯವಾದ ʼಕಬ್ಬದುಳುಮೆʼ ಕನ್ನಡ ಕಾವ್ಯಲೋಕದ ಓದಿನ ಹೊಸಪರಿಯ ಪ್ರಾಯೋಗಿಕತೆಯನ್ನು ಪರಿಚಯಿಸುವ ಅನನ್ಯಪ್ರಯತ್ನವಾಗಿದೆ ಎಂದು ಕರಾವಳಿ ರಂಗಾಯಣದ ನಿರ್ದೇಶಕ ಬಿ. ಆರ್‌. ವೆಂಕಟರಮಣ ಐತಾಳರು ಹೇಳಿದರು. ಹಿರಿಯಡಕ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸ್ನಾತಕೋತ್ತರ ಕನ್ನಡ ವಿಭಾಗವು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಸಾಹಿತ್ಯ ವಿಚಾರ ವೇದಿಕೆ ಉಡುಪಿ ಜೊತೆಗೆ ಆಯೋಜಿಸಿದ ಪ್ರಾಚೀನ ಕನ್ನಡ ಕಾವ್ಯದೋದು ನಿರಂತರ ಕಮ್ಮಟ ʼಕಬ್ಬದುಳುಮೆʼಯನ್ನು ಉದ್ಘಾಟಿಸಿ ಅವರು ಮಾತಾಡಿದರು. ಹಳಗನ್ನಡ ಕಾವ್ಯಗಳ ಮೇಲಿರಿಸಿದ ಉಳುಮೆಯ ಸಾಧನವಾದ ನೇಗಿಲಿಗೆ ಮಾವು-ಹಲಸುಗಳ ಗೊಂಚಲನ್ನು ಕಟ್ಟಿ ಚಾಲನೆ ನೀಡಿ ಉಳುಮೆಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೋಟ ಪಡುಕೆರೆ ಸರ್ಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ರಮೇಶ್‌ ಆಚಾರ್‌, ʼಕಾವ್ಯಗಳ ಓದು ವರ್ಣನಾ ಜಗತ್ತಿಗಷ್ಟೇ ಸೀಮಿತವಾಗದೆ ವಾಸ್ತವಿಕ ಬದುಕಿನ ನಿತ್ಯ-ಸತ್ಯಗಳನ್ನು ಹುಡುಕುವ ದಾರಿಯಾಗಬೇಕುʼ ಎಂದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಸೌಮ್ಯಲತಾ ಪಿ., ʼಕಬ್ಬದುಳುಮೆʼ ಪರಿಕಲ್ಪನೆ ರೂಪಿತವಾದ ಹಿನ್ನೆಲೆ ಮತ್ತು ಅದರ ಪ್ರಯೋಗದ ವಿಸ್ತರಣೆಯನ್ನು ಪರಿಚಯಿಸಿದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಮತ್ತು ಪ್ರಾಂಶುಪಾಲ ಡಾ. ಜಯಪ್ರಕಾಶ್‌ ಶೆಟ್ಟಿ ಹೆಚ್‌ ಅವರು, ʼಹಳಗನ್ನಡ ಪಠ್ಯಗಳ ಓದೆಂದರೆ ಕೇವಲ ಸದ್ದು ಮಾಡುವುದಲ್ಲ, ಬದಲಾಗಿ ಸೈದ್ದಾಂತಿಕ ಹಾಗೂ ತಾತ್ವಿಕ ನೆಲೆಗಟ್ಟಿನಲ್ಲಿ ಪಠ್ಯದ ಒಳಗಿರುವ ರಾಜಕೀಯನಡೆಯನ್ನು ಗ್ರಹಿಸುವ ಮೂಲಕ ನಮ್ಮ ಕಾಲವನ್ನು ನಾವು ಸರಿಯಾಗಿ ಓದಿಕೊಳ್ಳುವ ಬಗೆಯಾಗಿದೆʼ ಎಂದರು. ಐಕ್ಯುಎಸಿ ಸಂಚಾಲಕ ಡಾ. ಲಿತಿನ್‌ ಬಿ.ಎಂ. ಹಾಗೂ ಉಡುಪಿ ಜಿಲ್ಲಾ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾ ಸಂಚಾಲಕಿ ಶಾಲಿನಿ ಯು.ಬಿ. ಉಪಸ್ಥಿತರಿದ್ದರು. ಭೀಮಾಂಭಿಕ ಸ್ವಾಗತಿಸಿ ಅನುಶ್ರೀ ವಂದಿಸಿದರು, ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕೆ.ಎಸ್.ಆರ್.ಟಿ.ಸಿ: ಅ. 11 -20- ಉಡುಪಿಯಿಂದ ನವರಾತ್ರಿ ವಿಶೇಷ ಪ್ಯಾಕೇಜ್ ಪ್ರವಾಸ

ಉಡುಪಿ, ಸೆ.30: ಕ.ರಾ.ರ.ಸಾ.ನಿಗಮ ಮಂಗಳೂರು ವಿಭಾಗವು ದಸರಾ ಪ್ರಯುಕ್ತ ಉಡುಪಿ ಘಟಕದಿಂದ...

ಕೋಟೇಶ್ವರ: ವಿದ್ಯಾರ್ಥಿ ಸಂಘ ಉದ್ಘಾಟನೆ

ಕೋಟೇಶ್ವರ, ಸೆ.30: ಯುವಕರಲ್ಲಿ ನಾಯಕತ್ವ ಗುಣವನ್ನು ಬೆಳೆಸುವಲ್ಲಿ ಕಾಲೇಜು ಹಂತದಲ್ಲಿ ವಿದ್ಯಾರ್ಥಿ...

ಹಿರಿಯ ನಾಗರಿಕರು ಹಿಂಜರಿಕೆಯಿಲ್ಲದೆ ಮುಕ್ತವಾಗಿ ಸ್ಪರ್ಧೆಗಳಲ್ಲಿ ಭಾಗವಹಿಸಿ: ನ್ಯಾ. ನಿತಿನ್ ಯಶ್ವಂತ್ ರಾವ್

ಉಡುಪಿ, ಸೆ.30: ವಯಸ್ಸು ಕೇವಲ ದೇಹಕ್ಕೆ ಮಾತ್ರ ಮನಸ್ಸಿಗಲ್ಲ ಎಂಬ ಚಿಂತನೆಯೊಂದಿಗೆ...

ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ

ಕುಂದಾಪುರ, ಸೆ.30: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿಗೆ...
error: Content is protected !!