ಕೋಟ, ಏ.30: ಕೊಡುಗೈದಾನಿ, ನೊಂದವರ ಪಾಲಿನ ಆಶಾಕಿರಣ ಆನಂದ್ ಸಿ ಕುಂದರ್ ಅವರ ೭೭ ನೇ ಜನ್ಮದಿನಾಚರಣೆಯನ್ನು ಕರಾವಳಿಯ ಪಾರಂಪರಿಕ ತಿಂಡಿಯಾದ ಮಣ್ಣಿಯನ್ನು ಕತ್ತರಿಸುವುದರ ಮೂಲಕ ಆಚರಿಸಲಾಯಿತು. ಕೋಟಾದ ಕಾರಂತ ಥೀಮ್ ಪಾರ್ಕ್ ನಲ್ಲಿ ನಡೆಯುತ್ತಿರುವ, ಕೆ.ಸಿ. ಕುಂದರ್ ಸ್ಮಾರಕ ವಿಕಸನ 2025 ಬೇಸಿಗೆ ಶಿಬಿರದ ೨೫ನೇ ವರ್ಷದ ಉದ್ಘಾಟನಾ ಸಮಾರಂಭದಲ್ಲಿ ಆನಂದ್ ಸಿ. ಕುಂದರವರ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಳ್ಳಲಾಯಿತು. ಮುಖ್ಯ ಅಬ್ಯಾಗತರಾಗಿ ಆಗಮಿಸಿದ ವಿದ್ವಾನ್ ವಿಜಯ ಮಂಜರ್ ಇವರು ಅನಂದ್ ಸಿ. ಕುಂದರ್ ಅವರ ವ್ಯಕ್ತಿತ್ವ ಸದಾ ಅನುಕರಣೆಯ ವ್ಯಕ್ತಿತ್ವ ನೊಂದವರ ಬಾಳಿನ ಆಶಾಕಿರಣವಾದ ಇವರ ಈ ಹುಟ್ಟುಹಬ್ಬ ಆಚರಣೆ ಎಲ್ಲರಿಗೂ ಅನುಕರಣೀಯ. ಮೈದಾದಿಂದ ತಯಾರಾಗುವ ಕೇಕ್ ಗಳನ್ನು ಬಿಟ್ಟು ನಮ್ಮ ಕರಾವಳಿಯ ಪಾರಂಪರಿಕ ತಿಂಡಿಯಾದ ಮಣ್ಣಿ ಅಥವಾ ಹಾಲ್ಬಾಯ್ ಎಂದು ಕರೆಯುವ ಈ ತಿಂಡಿಯನ್ನು ಕತ್ತರಿಸುವುದರ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವುದು ನಾವೆಲ್ಲರೂ ಸಂಭ್ರಮಿಸಬೇಕಾಗಿದೆ ಎಂದು ಹೇಳಿದರು.
ಕೋಟತಟ್ಟು ಪಂಚಾಯತ್ ನ ಅಧ್ಯಕ್ಷರಾಗಿರುವಂತಹ ಸತೀಶ್ ಕುಂದರ್ ಬಾರಿಕೆರೆ ವಿಕಸನ ೨೦೨೫ರ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಟ್ರಸ್ಟಿಗಳಾದ ಸುಬ್ರಾಯ ಆಚಾರ್ಯ ಕೋಟ ಮತ್ತು ಸುಶೀಲಾ ಸೋಮಶೇಖರ್ ಉಪಸ್ಥಿತರಿದ್ದರು . ಕೋಟತಟ್ಟು ಗ್ರಾಮ ಪಂಚಾಯತ್ ನ ಎಲ್ಲಾ ಪಂಚಾಯತ್ ಪ್ರತಿನಿಧಿಗಳು ಉಪಸ್ಥಿತರಿದ್ದು ಆನಂದ್ ಸಿ ಕುಂದರ್ ಅವರಿಗೆ ಜನ್ಮದಿನಾಚರಣೆಯ ಶುಭಾಶಯ ಸಲ್ಲಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರರಾವ್ ಹಾಗೂ ಕಾರ್ಯದರ್ಶಿ ಸುಮತಿ ಅಂಚನ್ ಅವರು ಉಪಸ್ಥಿತರಿದ್ದರು. ಆನಂದ್ ಸಿ ಕುಂದರವರು ಈ ವಿಶಿಷ್ಟ ಹುಟ್ಟುಹಬ್ಬ ಆಚರಣೆಯನ್ನು ಸಂಯೋಜನೆ ಮಾಡಿದ ವಿಕಸನ 2025 ರ ಸಂಯೋಜಕ ರಾದ ನರೇಂದ್ರ ಕುಮಾರ್ ಕೋಟ ಹಾಗೂ ಸತೀಶ್ ವಡ್ಡರ್ಸೆಯವರಿಗೆ ಅಭಿನಂದನೆಯನ್ನು ಸಲ್ಲಿಸಿದರು ಆನಂದ ಸಿ ಕುಂದರ್ ಅವರ ಜೊತೆ ಶಿಬಿರಾರ್ಥಿ ಅನುಷ್ಕಾ ಇವರು ಜನ್ಮದಿನಾಚರಣೆಯನ್ನು ಆಚರಿಸಿಕೊಂಡರು. ಶಿಬಿರಾರ್ಥಿ ಆತ್ಮಿಕಾ ಇವರು ಪ್ರಾರ್ಥಿಸಿದರು. ಶಿಬಿರಾರ್ಥಿ ಚಿನ್ಮಯಿಇವರು ಸ್ವಾಗತಿಸಿ, ಶಿಬಿರಾಧಿಕಾರಿ ನರೇಂದ್ರ ಕುಮಾರ್ ಕೋಟ ಇವರು ಪ್ರಸ್ತಾವನೆಯನ್ನು ಮಾಡಿದರು. ಉನ್ನತಿ ಸ್ವಾಗತಿಸಿ, ಶ್ರೀದೇವಿ ವಂದಿಸಿದರು.




By
ForthFocus™