Wednesday, November 11, 2026
Wednesday, November 11, 2026

ಸಮಾನತೆಯ ಸಮಾಜ ನಿರ್ಮಾಣಕ್ಕೆ ಸಂವಿಧಾನ ಭದ್ರ ಬುನಾದಿ: ಡಾ.ಶ್ರೀಪಾದ್ ಭಟ್

ಸಮಾನತೆಯ ಸಮಾಜ ನಿರ್ಮಾಣಕ್ಕೆ ಸಂವಿಧಾನ ಭದ್ರ ಬುನಾದಿ: ಡಾ.ಶ್ರೀಪಾದ್ ಭಟ್

Date:

ಉಡುಪಿ, ಸೆ.29: ಅಂಬೇಡ್ಕರ್ ರವರು ಶಿಕ್ಷಣಕ್ಕೆ ಅತ್ಯಂತ ಮಹತ್ವವನ್ನು ನೀಡಿದವರು. ಶಿಕ್ಷಣ ಎಂದರೆ ನಾವು ಎಂಬ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದ ಅವರು ದೇಶದಲ್ಲಿದ್ದ ಮೌಢ್ಯ, ಜಾತಿ ಪದ್ದತಿ ಅಸ್ಪೃಶ್ಯತೆ ಹಾಗೂ ಅಸಮಾನತೆ ಅಂಧಕಾರವನ್ನು ಹೋಗಲಾಡಿಸಿ ಸಮಾನತೆಯನ್ನು ರೂಪಿಸಲು ಶ್ರಮಿಸಿದರು. ಅಂಬೇಡ್ಕರ್ ರವರು ದೇಶದ ಸಂವಿಧಾನವನ್ನು ರಚಿಸುವ ಮೂಲಕ ದೇಶದಲ್ಲಿ ಸಮಾನತೆ ಮತ್ತು ಅಭಿವೃದ್ಧಿಗಾಗಿ ಭದ್ರ ಬುನಾದಿಯನ್ನು ಹಾಕಿದರು ಎಂದು ರಂಗ ತಜ್ಞ ಡಾ.ಶ್ರೀಪಾದ್ ಭಟ್ ಹೇಳಿದರು. ಅವರು ಮಂಗಳವಾರ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿ ನಡೆದ ಡಾ. ಬಿ. ಆರ್. ಅಂಬೇಡ್ಕರ್ ಓದು ಕಾರ್ಯಕ್ರಮವದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ಡಾ. ಬಿ. ಆರ್ ಅಂಬೇಡ್ಕರ್ ರವರು ತಮ್ಮ ಬಾಲ್ಯದಿಂದಲೂ ಸಮಾಜದಲ್ಲಿ ಅನೇಕ ತಾರತಮ್ಯಗಳನ್ನು ಎದುರಿಸಿಕೊಂಡು ಬಂದಿದ್ದರು ಸಹ ತಮ್ಮ ಛಲದಿಂದಾಗಿ ಶಿಕ್ಷಣವನ್ನು ಪಡೆದ ಅವರು ಶಿಕ್ಷಣದ ಮೂಲಕ ದೇಶದಲ್ಲಿ ಅನೇಕ ಬದಲಾವಣೆಯನ್ನು ತಂದರು. ನೊಂದವರಿಗೆ ಬೆಳಕಾದ ಅಂಬೇಡ್ಕರ್ ಅವರ ಬದುಕು ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಮೀದಾ ಬಾನು, ದೇಶದ ಅಭಿವೃದ್ಧಿಗಾಗಿ ಅಪಾರ ಕೊಡುಗೆಯನ್ನು ನೀಡಿದ ಅಂಬೇಡ್ಕರ್ ಹಾಗೂ ಸಂವಿಧಾನದ ಕುರಿತು ವಿದ್ಯಾರ್ಥಿಗಳು ಜ್ಞಾನವನ್ನು ಪಡೆದುಕೊಳ್ಳಬೇಕು ಎಂದರು. ಪ್ರಬಂಧ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯಕ್ರಮ ಸಂಚಾಲಕಿ ರತ್ನಮಾಲ ನಿರೂಪಿಸಿ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಮಾರುತಿ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತುಳು ಸಂಸ್ಕೃತಿ ಬೆಳಗಿದ ಆಕಾಶದೀಪ; ಇತಿಹಾಸ ನೆನಪಿಸಿದ ಪರ್ಕಳ ವಾಲಿಬಾಲ್​ ಫ್ರೆಂಡ್ಸ್​

ಕ್ರೀಡಾ ಕ್ಷೇತ್ರದೊಂದಿಗೆ ಸಾಮಾಜಿಕ ಕಾರ್ಯಗಳ ಮೂಲಕವೂ ನಾಡಿನ ಗಮನ ಸೆಳೆಯುವ ಪರ್ಕಳದ...

ಹಿಂದಿನ ಎಲ್ಲಾ ಸಾಧಕರು ಮಾತೃಭಾಷೆಯಲ್ಲೇ ಶಿಕ್ಷಣ ಪಡೆದಿದ್ದಾರೆ: ಸಾಹಿತಿ ಇಂದಿರಾ ಹಾಲಂಬಿ

ಉಡುಪಿ, ನ.9: ದೇಶ ಬಹಳಷ್ಟು ಪ್ರಗತಿ ಸಾಧಿಸಿದೆ. ಶೈಕ್ಷಣಿಕ, ತಾಂತ್ರಿ​ಕ ಕ್ಷೇತ್ರದಲ್ಲಿ...

ಶ್ರೀಕೃಷ್ಣ ಮಠದಲ್ಲಿ ಗೋಪೂಜೆ ಸಂಭ್ರಮ; ರಥಬೀದಿಯಲ್ಲಿ ವೈಭವದ ಗೋ-ಮೆರವಣಿಗೆ

ಉಡುಪಿ, ನ.9: ಶ್ರೀಕೃಷ್ಣ ಮಠದಲ್ಲಿ ದೀಪಾವಳಿ ಸಂದರ್ಭದಲ್ಲಿ ಗೋಪೂಜೆ ವೈಭವದಿಂದ ನಡೆಯಿತು....

ದೀಪಾವಳಿ: ಬೆಳಕಿನ ಹಬ್ಬದ ಸಮಗ್ರ ಇತಿಹಾಸ, ಪೌರಾಣಿಕ ಹಿನ್ನೆಲೆ ಮತ್ತು ಆಚರಣೆಗಳು

ದೀಪಾವಳಿ ಅಥವಾ ದೀಪಾವಳೀ ಎಂದರೆ ಸಂಸ್ಕೃತದಲ್ಲಿ 'ದೀಪಗಳ ಆವಳಿ' (ಸಾಲು ಸಾಲು...
error: Content is protected !!