Thursday, October 29, 2026
Thursday, October 29, 2026

ಜೇಸಿಐ ಉಡುಪಿ ಸಿಟಿ ಪದಪ್ರಧಾನ ಸಮಾರಂಭ

ಜೇಸಿಐ ಉಡುಪಿ ಸಿಟಿ ಪದಪ್ರಧಾನ ಸಮಾರಂಭ

Date:

ಉಡುಪಿ: ಜೇಸಿಐ ವಲಯ 15 ಇದರ ಪ್ರತಿಷ್ಠಿತ ಘಟಕಗಳಲ್ಲಿ ಒಂದಾದ ಜೇಸಿಐ ಉಡುಪಿ ಸಿಟಿ ಇದರ 2022 ನೇ ಸಾಲಿನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭ ಡಿ.22 ರಂದು ಶಾರದ ಇಂಟರ್ನ್ಯಾಷನಲ್ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.

2021 ನೇ ಸಾಲಿನ ಅಧ್ಯಕ್ಷ ಉದಯ್ ನಾಯ್ಕ್ ರವರು ನೂತನ ಅಧ್ಯಕ್ಷ ಡಾ. ವಿಜಯ್ ನೆಗಳೂರು ರವರಿಗೆ ಅಧಿಕಾರ ಹಸ್ತಾಂತರಿಸಿದರು.

ಮುಖ್ಯ ಅತಿಥಿ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಸದಾನಂದ ನಾವಡ ಮಾತನಾಡಿ, ಜಗತ್ತಿನ ಅತ್ಯಂತ ದೊಡ್ಡ ವ್ಯಕ್ತಿತ್ವ ವಿಕಸನ ಸಂಸ್ಥೆಯಾದ ಜೇಸಿಐ, ವಿವಿಧ ದೇಶಗಳಿಗೆ ನಾಯಕರುಗಳನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಸಂಸ್ಥೆಯ ಮೂಲಕ ವ್ಯಕ್ತಿತ್ವ ವಿಕಸನದೊಂದಿಗೆ ನಮ್ಮ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದರು.

ವಲಯಾಧ್ಯಕ್ಷ ರೋಯನ್ ಉದಯ್ ಕ್ರಾಸ್ತಾ ಮಾತನಾಡಿ, ವಲಯದಲ್ಲಿ ವಿವಿಧ ರೀತಿಯ ವಿನೂತನ ಕಾರ್ಯಕ್ರಮಗಳು ನಡೆಯಲಿವೆ. ತರಬೇತಿ ಕಾಯ೯ಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಡೆಸುವ ಯೋಜನೆಯಿದೆ. ಇದಕ್ಕೆ ಘಟಕ ಸಹಕಾರ ನೀಡಬೇಕೆಂದರು.

ಮುಖ್ಯ ಅತಿಥಿಗಳಾದ ಉದ್ಯಮಿ ಪ್ರಭಾಕರ ಜಿ ಮತ್ತು ಗಿರಿಜಾ ಹೆಲ್ತ್ ಕೇರ್ ನ ರವೀಂದ್ರ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪೂರ್ವ ರಾಷ್ಟ್ರೀಯ ಉಪಾದ್ಯಕ್ಷ ಸಂದೀಪ್ ಕುಮಾರ್, ಪದ ಪ್ರಧಾನ ಅಧಿಕಾರಿ ವಲಯ ಉಪಾಧ್ಯಕ್ಷ ರವಿಚಂದ್ರ ಪಾಟಾಳಿ, ಕಾರ್ಯದರ್ಶಿ ಕಿರಣ್ ಭಟ್, ವೀಕ್ಷಿತ್, ನಯನ ಉದಯ್, ತನುಜಾ ಮಾಬೆನ್, ಯುವ ಜೇಸಿ ಅಧ್ಯಕ್ಷ ಸಮದುಡು ಮುಂತಾದವರಿದ್ದರು.

ನೂತನ ಅಧ್ಯಕ್ಷರು ತಮ್ಮ ಮುಂದಿನ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಸಮಾರಂಭದಲ್ಲಿ ಸದಸ್ಯರು ಮತ್ತು ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸೋಲಿನ ಕುರಿತು ಆತ್ಮಾವಲೋಕನ ಮಾಡುತ್ತೇವೆ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್

ಬೆಂಗಳೂರು, ಅ.29: ವಿಧಾನ ಪರಿಷತ್ತಿನ ನಾಲ್ಕೂ ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು...

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಶಾಸಕ ಶಿವರಾಮ್ ಹೆಬ್ಬಾರ್ ಭೇಟಿ

ಕಾಪು, ಅ.29: ಉತ್ತರ ಕನ್ನಡ ಜಿಲ್ಲೆಯ ಎಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ...

‘ರಂಗ್ ತರಂಗ್ 2026’ – ರೋಟರಿ ಉಡುಪಿ ಮತ್ತು ರೋಟರಿ ಮಣಿಪಾಲ್ ಟೌನ್’ಗೆ ಜಂಟಿಯಾಗಿ ಜೋನಲ್ ಚಾಂಪಿಯನ್ಸ್ ಪ್ರಶಸ್ತಿ

ಉಡುಪಿ, ಅ.29: ಡಾ.ಟಿ.ಎಂ.ಎ ಪೈ ಸಭಾಭವನ ಮಾಹೆ ಮಣಿಪಾಲದಲ್ಲಿ ಭಾನುವಾರ ಜರಗಿದ...

ದಕ್ಷಿಣ ಕನ್ನಡ ಜಿಲ್ಲಾ ತಮಿಳು ಮರುತ್ತುವರ್ ಸಮಾಜದ ದಶಮಾನೋತ್ಸವ

ತೊಕ್ಕೊಟ್ಟು, ಅ.29: ದಕ್ಷಿಣ ಕನ್ನಡ ಜಿಲ್ಲಾ ತಮಿಳು ಮರುತ್ತುವರ್ ಸಮಾಜದ ದಶಮಾನೋತ್ಸವ...
error: Content is protected !!