Thursday, November 19, 2026
Thursday, November 19, 2026

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಶಾಸಕ ಶಿವರಾಮ್ ಹೆಬ್ಬಾರ್ ಭೇಟಿ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಶಾಸಕ ಶಿವರಾಮ್ ಹೆಬ್ಬಾರ್ ಭೇಟಿ

Date:

ಕಾಪು, ಅ.29: ಉತ್ತರ ಕನ್ನಡ ಜಿಲ್ಲೆಯ ಎಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಅರೆಬೈಲ್ ಶಿವರಾಮ್ ಹೆಬ್ಬಾರ್ ಅವರು ಕುಟುಂಬಸ್ಥರೊಂದಿಗೆ ಅಕ್ಟೋಬರ್ 28 ರಂದು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಆಗಮಿಸಿ, ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ ದರ್ಶನ ಪಡೆದರು.

ದೇವಳದ ವ್ಯವಸ್ಥಾಪನ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಗೌರವಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಲಾಯಿತು.

ಶಾಸಕರು ವಿಶೇಷ ಅನ್ನದಾನ ಸೇವೆಯನ್ನು ಮತ್ತು ಮಗಳ ಪರವಾಗಿ ಶಾಶ್ವತ ಅನ್ನದಾನ ಸೇವೆಯನ್ನು ನೀಡಿದರು ಹಾಗೂ ಕುಟುಂಬದ ಸದಸ್ಯರು ಕಾಪುವಿನ ಅಮ್ಮನಿಗೆ ಅಕ್ಷರ ನಮನ ಸಲ್ಲಿಸಲು ನವದುರ್ಗಾ ಲೇಖನ ಪುಸ್ತಕವನ್ನು ಪಡೆದುಕೊಂಡರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ನವದುರ್ಗಾ ಲೇಖನ ಯಜ್ಞ ಸಮಿತಿಯ ಪ್ರಧಾನ ಕಾರ್ಯದರ್ಶಿ ಗೀತಾಂಜಲಿ ಎಂ. ಸುವರ್ಣ, ಪ್ರಚಾರ ಸಮಿತಿಯ ಸಂಚಾಲಕ ಕಾಪು ಜಯರಾಮ ಆಚಾರ್ಯ, ಪ್ರಬಂಧಕ ಗೋವರ್ಧನ್ ಸೇರಿಗಾರ್ ಮತ್ತು ಸಿಬ್ಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಮುಂತಾದವರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಶತಮಾನದ ಸಂಭ್ರಮಕ್ಕೆ ಸಜ್ಜಾದ ಪುತ್ತೂರು ಎಲ್.ವಿ.ಪಿ. ಶಾಲೆ; ನ. 20 ಮತ್ತು 21ರಂದು ಶತಮಾನೋತ್ಸವ ಆಚರಣೆ

ಉಡುಪಿ, ನ.19: ಉಡುಪಿಯ ಪುತ್ತೂರಿನ ಎಲ್.ವಿ.ಪಿ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯು...

ಪೇಶ್ ಇಮಾಮ್ ಹಾಗೂ ಮುಅಝಿನ್‌ರವರ ಬಾಕಿ ಗೌರವಧನ ಕೂಡಲೇ ಬಿಡುಗಡೆಗೊಳಿಸಿ: ಅಸ್ಗರ್ ಮುಡಿಪು ಆಗ್ರಹ

ಮಂಗಳೂರು, ನ.19: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ಮುಸ್ಲಿಂ...

ಕಾವೇರಿ 2.0: ಆಸ್ತಿ ನೋಂದಣಿಗೆ ಡಿಜಿಟಲ್ ಸ್ಪರ್ಶ

ಬೆಂಗಳೂರು, ನ.19: ಆಸ್ತಿ ನೋಂದಣಿಗಾಗಿ ಕಚೇರಿಗಳಿಗೆ ತೆರಳಿ ಭೌತಿಕ ದಾಖಲೆಗಳನ್ನು ಸಲ್ಲಿಸುವ...
error: Content is protected !!