ಉಡುಪಿ, ಅ.29: ಡಾ.ಟಿ.ಎಂ.ಎ ಪೈ ಸಭಾಭವನ ಮಾಹೆ ಮಣಿಪಾಲದಲ್ಲಿ ಭಾನುವಾರ ಜರಗಿದ ರೋಟರಿ ಜಿಲ್ಲೆ 3182ರ ವಲಯ 4ರ ಸಾಂಸ್ಕೃತಿಕ ಸ್ಪರ್ಧೆ “ರಂಗ್ ತರಂಗ್” 2026-27ರಲ್ಲಿ ರೋಟರಿ ಉಡುಪಿ ಮತ್ತು ರೋಟರಿ ಕ್ಲಬ್ ಮಣಿಪಾಲ ಟೌನ್ ತಂಡಗಳು ಜಂಟಿಯಾಗಿ ಜೋನಲ್ ಚಾಂಪಿಯನ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿವೆ. ರೋಟರಿ ಉಡುಪಿ ಗಾಯನ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಪ್ರಕಾಶ್ ಕಾಮತ್ ಪ್ರಥಮ, ಗಾಯನ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ವಿದ್ಯಾ ಶೆಣೈ ದ್ವಿತೀಯ, ಗೀತೆಯಲ್ಲಿ ವಿದ್ಯಾ ಶೆಣೈ ಮತ್ತು ಗೌರವ ಕಾಮತ ಪ್ರಥಮ, ಏಕಪಾತ್ರಾಭಿನಯದಲ್ಲಿ ಡಾ. ಸುರೇಶ ಶೆಣೈ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಚಾಂಪಿಯನ್ಸ್ ಪ್ರಶಸ್ತಿಯನ್ನು ವಲಯ-4ರ ಸಹಾಯಕ ಗವರ್ನರ್ ಹೇಮಂತ್ .ಯು.ಕಾಂತ್ ಮತ್ತು ಜೋನಲ್ ಕಲ್ಚರಲ್ ಕೋಆರ್ಡಿನೇಟರ್ ಡಾ.ದೀಪಕ್ ರಾಮ್ ಬಾಯಾರಿ, ರೋಟರಿ ಉಡುಪಿ ಅಧ್ಯಕ್ಷರಾದ ಜೆ. ಗೋಪಾಲಕೃಷ್ಣ ಪ್ರಭು ಮತ್ತು ರೋಟರಿ ಉಡುಪಿ ಸದಸ್ಯರಿಗೆ ನೀಡಲಾಯಿತು.
‘ರಂಗ್ ತರಂಗ್ 2026’ – ರೋಟರಿ ಉಡುಪಿ ಮತ್ತು ರೋಟರಿ ಮಣಿಪಾಲ್ ಟೌನ್’ಗೆ ಜಂಟಿಯಾಗಿ ಜೋನಲ್ ಚಾಂಪಿಯನ್ಸ್ ಪ್ರಶಸ್ತಿ
‘ರಂಗ್ ತರಂಗ್ 2026’ – ರೋಟರಿ ಉಡುಪಿ ಮತ್ತು ರೋಟರಿ ಮಣಿಪಾಲ್ ಟೌನ್’ಗೆ ಜಂಟಿಯಾಗಿ ಜೋನಲ್ ಚಾಂಪಿಯನ್ಸ್ ಪ್ರಶಸ್ತಿ
Date:




By
ForthFocus™