Thursday, November 19, 2026
Thursday, November 19, 2026

ಬಂಟ್ವಾಳ: ಹೊಂಡ-ಗುಂಡಿಗಳ ವರದಿ ಬಗ್ಗೆ ಸಿಎಂ ಕಛೇರಿ ಸ್ಪಂದನೆ

ಬಂಟ್ವಾಳ: ಹೊಂಡ-ಗುಂಡಿಗಳ ವರದಿ ಬಗ್ಗೆ ಸಿಎಂ ಕಛೇರಿ ಸ್ಪಂದನೆ

Date:

ಬಂಟ್ವಾಳ, ನ.19: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂಲಕ ಹಾದುಹೋಗುವ ಕಟಪಾಡಿ ಅಬ್ಬಕ್ಕ ವೃತ್ತ ರಸ್ತೆಯಲ್ಲಿ ಭಾರಿ ಹೊಂಡ-ಗುಂಡಿಗಳು ಬಿದ್ದು ವಾಹನ ಸವಾರರು ಪರದಾಡುತ್ತಿರುವ ಕುರಿತು ದಿನಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಮುಖ್ಯಮಂತ್ರಿಗಳ ಸಚಿವಾಲಯ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಸಿಎಂ ಸಚಿವಾಲಯದ ನಿರ್ದೇಶನದ ಮೇರೆಗೆ ಕಾರ್ಯಪ್ರವೃತ್ತರಾದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತ್ವರಿತ ಕ್ರಮ ಕೈಗೊಂಡಿದ್ದಾರೆ. ಮಳೆಗಾಲದ ಹಿನ್ನೆಲೆಯಲ್ಲಿ ಈ ಹಿಂದೆ ತಾತ್ಕಾಲಿಕವಾಗಿ ಮುಚ್ಚಲಾಗಿದ್ದ ರಸ್ತೆಯ ಗುಂಡಿಗಳನ್ನು ಇದೀಗ ಡಾಂಬರ್ ಪ್ಯಾಚ್ ಕಾಮಗಾರಿಯ ಮೂಲಕ ವ್ಯವಸ್ಥಿತವಾಗಿ ಮುಚ್ಚಲಾಗಿದ್ದು, ಬಂಟ್ವಾಳ ಪೇಟೆಗೆ ಸಂಪರ್ಕಿಸುವ ಭಾಗ ಸೇರಿದಂತೆ ಸಂಪೂರ್ಣ ರಸ್ತೆಯನ್ನು ವಾಹನ ಸಂಚಾರಕ್ಕೆ ಯೋಗ್ಯಗೊಳಿಸಲಾಗಿದೆ. ಅತಿಯಾದ ಭಾರ ಹೊತ್ತ ಲಾರಿಗಳ ನಿರಂತರ ಓಡಾಟದಿಂದ ಹಾನಿಗೊಳಗಾಗುತ್ತಿರುವ ಈ ರಸ್ತೆಯ ಸಂಚಾರ ನಿಯಂತ್ರಣಕ್ಕೆ ಆರ್‌ಟಿಒ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಬಂಟ್ವಾಳ ಕ್ಷೇತ್ರಕ್ಕೆ ಒಟ್ಟು ರೂ.12 ಕೋಟಿ ಅನುದಾನದ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ಋತು ತಾರೆ’ ವಿನೂತನ ಕಾರ್ಯಕ್ರಮ

ಬೆಂಗಳೂರು, ನ.೧೯: ಮಹಿಳೆಯರ ಮಧ್ಯವಯಸ್ಸಿನಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ, ಸೂಕ್ತ...

ಮುರಳಿ ಕಡೆಕಾರ್ ಇವರಿಗೆ ಶಾರದಾಕೃಷ್ಣ ಪ್ರಶಸ್ತಿ-2027

ಉಡುಪಿ, ನ.18: ಹೆಬ್ರಿಯ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಸಂಸ್ಕೃತಿ ವಿಶ್ವ...

ಸನ್ಮತಿ ಮಾಸಿಕ ಸಂಚಿಕೆ ಬಿಡುಗಡೆ, ತಿಂಗಳ ಅಂಗಳ ಸಂವಾದ

ಉಡುಪಿ, ನ.18: ಎಲ್‌ನಿನೋ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ಕಾಡುವ ಕುಡಿಯುವ ನೀರಿನ ಸಮಸ್ಯೆ...

ಕಡೆಕಾರು: ಉಚಿತ ಕಣ್ಣಿನ ತಪಾಸಣಾ ಶಿಬಿರ

ಉಡುಪಿ, ನ.18: ಕೆ.ಎಂ.ಸಿ. ಮಣಿಪಾಲದ ಕಣ್ಣಿನ ವಿಭಾಗ, ಆಪ್ಟೋಮಿಟ್ರಿ ವಿಭಾಗ ಹಾಗೂ...
error: Content is protected !!