ಉಡುಪಿ, ನ.18: ಎಲ್‌ನಿನೋ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ಕಾಡುವ ಕುಡಿಯುವ ನೀರಿನ ಸಮಸ್ಯೆ ಈ ಬಾರಿ ಬೇಸಿಗೆಗೆ ಮೊದಲೇ ತಲೆದೋರುವ ಸಾಧ್ಯತೆಯಿದೆ ಎಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥೆ ಭೂಮಿಕಾ ಎಚ್. ಆರ್. ಎಚ್ಚರಿಸಿದ್ದಾರೆ.
ಅವರು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದಲ್ಲಿ ಸಂಘದ ಸನ್ಮತಿ ಮಾಸಿಕ ಸಂಚಿಕೆ ಬಿಡುಗಡೆ ಹಾಗೂ ತಿಂಗಳ ಅಂಗಳ ಸಂವಾದ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.

ವಾತಾವರಣದಲ್ಲಾದ ಬದಲಾವಣೆ, ಬಿಸಿಯಿಂದ ರಸ ಹೀರುವ ಕೀಟಗಳ ಹಾವಳಿ ಹೆಚ್ಚಿದೆ, ವೃದ್ಧಿಯಾಗಿದೆ. ಮಳೆ ಕಡಿಮೆಯಾದರೆ, ಹೆಚ್ಚಾದರೆ, ಕೀಟ ಬಾಧೆ-ರೋಗ ಹಾವಳಿಯಿಂದ ಗಿಡ, ಮರಗಳು ಒತ್ತಡಕ್ಕೊಳಗಾಗುತ್ತವೆ. ಚುರುಕಾಗುವ ಹಿನ್ನೆಲೆಯಲ್ಲಿ ಕಾಯಿಗಳು ಬೇಗ ಹಣ್ಣಾಗಿ ಉದುರುತ್ತಿವೆ ಎಂದು ಹೇಳಿದರು.
ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಮಳೆ ಶೇ. 27ರಷ್ಟು ಕೊರತೆಯಾಗಿದ್ದು ಕೀಟ-ರೋಗ ಹಾವಳಿ ಹೆಚ್ಚಿದೆ. ತೆಂಗು ಕಪ್ಪು ತಲೆ ಹುಳ ಪತ್ತೆಯಾಗಿದ್ದು ನಿಯಂತ್ರಣ ಕ್ರಮ ಕೈಗೊಳ್ಳಲಾಗಿದೆ. ಬೆಳೆ ನಿರ್ವಹಣೆ, ಉತ್ಪಾದಕತೆ ಮೇಲೆ ದೀರ್ಘಾವ ಪರಿಣಾಮವಾಗಲಿದೆ. ರೈತರಲ್ಲಿ ತಿಳುವಳಿಕೆ ಮೂಡಿಸದಿದ್ದರೆ ಪರಿಣಾಮ ತೀವ್ರವಾಗಲಿದೆ. ಅಡಕೆ ಬೇಗ ಹಣ್ಣಾಗುತ್ತಿದೆ, ಉದುರುತ್ತಿದೆ, ಗಾತ್ರ ಸಣ್ಣದಾಗಿದೆ ಎಂದ ಕ್ಷಮಾ ಪಾಟೀಲ್, ಮಳೆ ಕಡಿಮೆಯಾಗಿದ್ದರಿಂದ ಅಂತರ್ಜಲ ಮರುಪೂರಣ ಕಡಿಮೆಯಾಗಿದೆ, ಆವಿ ಹೆಚ್ಚಾಗುತ್ತಿದೆ. ಹೀಗಾಗಿ ನೀರಿನ ಮಿತ ವ್ಯಯ ಅತಿ ಮುಖ್ಯ ಎಂದರು.
ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನ ಕೇಂದ್ರದ ತಾಂತ್ರಿಕ ಅಕಾರಿ ಕೆ. ಎಂ. ಪ್ರವೀಣ್ ಮಾತನಾಡಿ, 2027ರ ಜನವರಿ-ಫೆಬ್ರವರಿ ತನಕ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ. ಕಡಲ ಮೇಲ್ಮೆ ತಾಪಮಾನ ಹೆಚ್ಚಳವಾಗಿದೆ. ನೀರ ಮಿತ ಬಳಕೆ, ಮಲ್ಚಿಂಗ್(ಹೊದಿಕೆ) ಅಂತರ್ ಬೆಳೆ ಮುಖ್ಯವಾಗಲಿದೆ ಎಂದು ಹೇಳಿದರು.
ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಹೇಮಂತ್ ಕುಮಾರ್ ಎಲ್. ಮಾತನಾಡಿ, ತುಂತುರು/ಹನಿ ನೀರಾವರಿ ಪದ್ಧತಿ ಅಳವಡಿಕೆಗೆ ಪ್ರಧಾನಿ ಕೃಷಿ ಸಿಂಚಯಿ ಯೋಜನೆಯಡಿ ಶೇ. 90ರಷ್ಟು ಸಹಾಯಧನ ಲಭ್ಯವಿದೆ. ಎಲ್ ನಿನೋ ಹಿನ್ನೆಲೆಯಲ್ಲಿ ಜನವರಿಯಿಂದಲೇ ನೀರಿನ ಅಭಾವದ ಅಪಾಯವಿದೆ. ಮಣ್ಣ ರಸಸಾರ ನಿರ್ವಹಣೆ ಸವಾಲಾಗಿದ್ದು ಮಣ್ಣು ಪರೀಕ್ಷೆ ಮಾಡಿಸಿ, ಪೋಷಕಾಂಶ ಕೊಡಿ ಎಂದು ನುಡಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. ವಾರ್ತಾಕಾರಿ ಮಂಜುನಾಥ್, ಉಡುಪಿ ಪತ್ರಿಕಾ ಭವನ ಸಮಿತಿ ಸಹ ಸಂಚಾಲಕ ಗಣೇಶ್ ಕಲ್ಯಾಣಪುರ, ಸಹಾಯಕ ತೋಟಗಾರಿಕಾ ನಿರ್ದೇಶಕ ನೀಶ್ ಹೊಳ್ಳ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಪುಂಡಲೀಕ ಮರಾಠೆ ಕಾರ್ಯಕ್ರಮ ನಿರೂಪಿಸಿದರು.




By
ForthFocus™