Thursday, October 29, 2026
Thursday, October 29, 2026

ವಿಶ್ವ ಪಾರ್ಶ್ವವಾಯು ದಿನ- ಆರೋಗ್ಯ ಶಿಬಿರ

ವಿಶ್ವ ಪಾರ್ಶ್ವವಾಯು ದಿನ- ಆರೋಗ್ಯ ಶಿಬಿರ

Date:

ಕಾಪು, ಅ. 29: ವಿಶ್ವ ಪಾರ್ಶ್ವವಾಯು ದಿನ-2026ರ ಅಂಗವಾಗಿ “ಪ್ರತಿ ನಿಮಿಷವೂ ಅಮೂಲ್ಯ” ಎಂಬ ಸಂದೇಶದೊಂದಿಗೆ ಕಾಪುವಿನಲ್ಲಿ ಆರೋಗ್ಯ ಶಿಬಿರವನ್ನು ಆಯೋಜಿಸಲಾಯಿತು.

ಕೆಎಂಸಿ ಮಣಿಪಾಲದ ಸಮುದಾಯ ವೈದ್ಯಕೀಯ ವಿಭಾಗ ಮತ್ತು ಕುಟುಂಬ ವೈದ್ಯಕೀಯ ವಿಭಾಗದ ನೇತೃತ್ವದಲ್ಲಿ ಹಾಗೂ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಕೆಎಂಸಿ ಮಣಿಪಾಲದ ಸಮಗ್ರ ಪಾರ್ಶ್ವವಾಯು ಪುನರ್ವಸತಿ ಮತ್ತು ಸಂಶೋಧನಾ ಕೇಂದ್ರ ಹಾಗೂ ಜೆಸಿಐ ಕಾಪು ಅವರ ಸಹಯೋಗದೊಂದಿಗೆ ಶಿಬಿರ ನಡೆಯಿತು.

ಕೆಎಂಸಿ ಮಣಿಪಾಲದ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಅಶ್ವಿನಿ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ದಿವ್ಯ ಅರವಿಂದ ಪ್ರಭು ಅವರು ಪಾರ್ಶ್ವವಾಯುವಿನ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಕುರಿತು ಹಾಗೂ ಮಣಿಪಾಲ ಎಂಸಿಎಚ್‌ಪಿಯ ಸಹ ಡೀನ್ ಹಾಗೂ ಫಿಸಿಯೋಥೆರಪಿ ಪ್ರಾಧ್ಯಾಪಕರಾದ ಡಾ. ಜಾನ್ ಸೊಲೊಮನ್ ಎಂ. ಅವರು ಪುನರ್ವಸತಿ ಚಿಕಿತ್ಸೆಯ ಮಹತ್ವದ ಕುರಿತು ಮಾಹಿತಿ ನೀಡಿದರು.

ಕಾಪು ಪುರಸಭೆಯ ಸದಸ್ಯರಾದ ಅರುಣ್ ಶೆಟ್ಟಿ ಪಾದೂರು, ಜೆಸಿಐ ಅಧ್ಯಕ್ಷ ವಿಕ್ಕಿ ಪೂಜಾರಿ ಹಾಗೂ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಬಿಂದು ಭಟ್ ಉಪಸ್ಥಿತರಿದ್ದರು. ಫಿಸಿಯೋಥೆರಪಿ ವಿಭಾಗದ ಮುಖ್ಯಸ್ಥ ಡಾ. ಮಣಿಕಂದನ್ ನಟರಾಜನ್ ಸೇರಿದಂತೆ ವಿವಿಧ ವಿಭಾಗಗಳ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಭಾಗವಹಿಸಿದ್ದರು.

ಕುಟುಂಬ ವೈದ್ಯಕೀಯ ವಿಭಾಗದ ಡಾ. ಮೇರಿ ಡೆಲ್ಲೊ ರೆಬೆಲ್ಲೊ, ಡಾ. ಅನುನಾ ವಿನೋದ್, ಡಾ. ಶ್ರೀರಕ್ಷಾ ನಾಯಕ್ ಹಾಗೂ ಕರ್ನಾಟಕ ಮೆದುಳು ಮತ್ತು ಆರೋಗ್ಯ ಉಪಕ್ರಮದ (ಕೆಎಬಿಐ) ಉಡುಪಿ ಜಿಲ್ಲಾ ಸಂಯೋಜಕರಾದ ಶ್ರೀಮತಿ ಅರ್ಪಿತಾ ಬ್ರಹ್ಮಾವರ ಉಪಸ್ಥಿತರಿದ್ದರು.

ಪಾರ್ಶ್ವವಾಯುವಿನ ಲಕ್ಷಣಗಳನ್ನು ಆರಂಭದಲ್ಲೇ ಗುರುತಿಸಿ ತಕ್ಷಣ ಚಿಕಿತ್ಸೆ ಪಡೆಯುವುದು, ಅಪಾಯಕಾರಿ ಅಂಶಗಳನ್ನು ನಿಯಂತ್ರಿಸುವುದು ಮತ್ತು ನಿರಂತರ ಪುನರ್ವಸತಿ ಚಿಕಿತ್ಸೆಯ ಮೂಲಕ ಜೀವನಮಟ್ಟ ಸುಧಾರಿಸುವ ಕುರಿತು ಶಿಬಿರದಲ್ಲಿ ಜಾಗೃತಿ ಮೂಡಿಸಲಾಯಿತು. ಪಾರ್ಶ್ವವಾಯು ಪೀಡಿತರ ಆರೈಕೆಯಲ್ಲಿ ಕುಟುಂಬದ ಸದಸ್ಯರ ಪಾತ್ರದ ಮಹತ್ವವನ್ನೂ ತಿಳಿಸಲಾಯಿತು.

ಶಿಬಿರದಲ್ಲಿ ಒಟ್ಟು 70 ಫಲಾನುಭವಿಗಳಿಗೆ ರಕ್ತದೊತ್ತಡ ಮತ್ತು ರಕ್ತದ ಸಕ್ಕರೆ ಪರೀಕ್ಷೆಹಾಗೂ ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಲಾಯಿತು. 18 ಮಂದಿಗೆ ಫಿಸಿಯೋಥೆರಪಿ ಸೇವೆ ಹಾಗೂ 15 ಮಂದಿಗೆ ಇಸಿಜಿ ಪರೀಕ್ಷೆ ಒದಗಿಸಲಾಯಿತು.

ಶಿಬಿರದ ಆಯೋಜನೆಯಲ್ಲಿ ಫಿಸಿಯೋಥೆರಪಿ ವಿಭಾಗದ ಪಿಎಚ್‌ಡಿ ಸಂಶೋಧಕರಾದ ಡಾ. ಅಖಿಲಾ ಜಗದೀಶ್, ಅಪರ್ಣಾ ಸೆಲ್ವಂ, ಸಿದ್ಧಾರ್ಥ್ ಸವಾಡಿಯಾ, ನಿಸ್ತಾರಾ ಚಾವ್ಲಾ ಹಾಗೂ ನಿಧಿ ಮಿಸ್ಲಂಕರ್, ಸಮುದಾಯ ವೈದ್ಯಕೀಯ ವಿಭಾಗದ ವೈದ್ಯರು ಹಾಗೂ ಶುಶ್ರೂಷಕಿಯರಾದ ಸುಶೀಲಾ, ಸುಲೋಚನಾ ಮತ್ತು ಜಯಶ್ರೀ, ವೈದ್ಯಕೀಯ ಸಮಾಜ ಕಾರ್ಯಕರ್ತೆ ಚಿತ್ರಲೇಖಾ, ಪ್ರಯೋಗಾಲಯ ತಂತ್ರಜ್ಞ ಸುಕೇತ್ ಸಾಲ್ಯಾನ್, ಆಶಾ ಕಾರ್ಯಕರ್ತೆಯರು, ಕ್ಷೇತ್ರ ಕಾರ್ಯಕರ್ತೆ ಲಕ್ಷ್ಮಿ, ಸಿಬ್ಬಂದಿಗಳಾದ ಸುಜನ್ ಮತ್ತು ಕಾರ್ತಿಕ್ ಹಾಗೂ ಸಹಾಯಕ ಸಿಬ್ಬಂದಿಗಳಾದ ಮಲ್ಲಿಕಾ ಮತ್ತು ಆಶಾ ಸಹಕರಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಶಾಸಕ ಶಿವರಾಮ್ ಹೆಬ್ಬಾರ್ ಭೇಟಿ

ಕಾಪು, ಅ.29: ಉತ್ತರ ಕನ್ನಡ ಜಿಲ್ಲೆಯ ಎಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ...

‘ರಂಗ್ ತರಂಗ್ 2026’ – ರೋಟರಿ ಉಡುಪಿ ಮತ್ತು ರೋಟರಿ ಮಣಿಪಾಲ್ ಟೌನ್’ಗೆ ಜಂಟಿಯಾಗಿ ಜೋನಲ್ ಚಾಂಪಿಯನ್ಸ್ ಪ್ರಶಸ್ತಿ

ಉಡುಪಿ, ಅ.29: ಡಾ.ಟಿ.ಎಂ.ಎ ಪೈ ಸಭಾಭವನ ಮಾಹೆ ಮಣಿಪಾಲದಲ್ಲಿ ಭಾನುವಾರ ಜರಗಿದ...

ದಕ್ಷಿಣ ಕನ್ನಡ ಜಿಲ್ಲಾ ತಮಿಳು ಮರುತ್ತುವರ್ ಸಮಾಜದ ದಶಮಾನೋತ್ಸವ

ತೊಕ್ಕೊಟ್ಟು, ಅ.29: ದಕ್ಷಿಣ ಕನ್ನಡ ಜಿಲ್ಲಾ ತಮಿಳು ಮರುತ್ತುವರ್ ಸಮಾಜದ ದಶಮಾನೋತ್ಸವ...

ತೆಂಕ ಗ್ರಾಮ: ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ

ಕಾಪು, ಅ.29: ಕಾಪು ವಿಧಾನಸಭಾ ಕ್ಷೇತ್ರದ ತೆಂಕ ಗ್ರಾಮ ಪಂಚಾಯತ್ ವ್ಯಾಪ್ತಿಯ...
error: Content is protected !!