Thursday, October 29, 2026
Thursday, October 29, 2026

ತೆಂಕ ಗ್ರಾಮ: ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ

ತೆಂಕ ಗ್ರಾಮ: ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ

Date:

ಕಾಪು, ಅ.29: ಕಾಪು ವಿಧಾನಸಭಾ ಕ್ಷೇತ್ರದ ತೆಂಕ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ 40 ಲಕ್ಷ ರೂಪಾಯಿ ಅನುದಾನದ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆಯನ್ನು ಅ.29 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.

ತೆಂಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೂಂದಾಡು ಯಶೋಧ ಮುಖಾರ್ತಿ ಮನೆಯಿಂದ ಸದಾಶಿವ ಬಂಗೇರ ಮನೆ ತನಕ ರಸ್ತೆ ಅಭಿವೃದ್ಧಿ – 20 ಲಕ್ಷ, ಹೈಸ್ಕೂಲ್ ರಸ್ತೆ ಬಳಿ ಶಾರದಾ ಕರ್ಕೇರರವರ ಮನೆಯಿಂದ ವಿನೋದ ರವರ ಮನೆ ತನಕ ರಸ್ತೆ ಅಭಿವೃದ್ಧಿ – 20 ಲಕ್ಷ, ಸೇರಿದಂತೆ ಒಟ್ಟು 40 ಲಕ್ಷ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಶಾರದಾ ಪೂಜಾರಿ, ತೆಂಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಯಶ್ರೀ ಪೂಜಾರಿ, ವಿನಯ್ ಶೆಟ್ಟಿ, ಸಂತೋಷ, ಮನೋಜ್ ಶೆಟ್ಟಿ, ರತ್ನಾಕರ, ಶಕ್ತಿ ಕೇಂದ್ರ ಪ್ರಮುಖ್ ಕೇಶವ ಮೊಯಿಲಿ, ಧರ್ಮರಾಜ್, ಪ್ರೀತಮ್, ರೇಣುಕಾ, ಸುನೀತಾ ಮುಂತಾದವರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಶಾಸಕ ಶಿವರಾಮ್ ಹೆಬ್ಬಾರ್ ಭೇಟಿ

ಕಾಪು, ಅ.29: ಉತ್ತರ ಕನ್ನಡ ಜಿಲ್ಲೆಯ ಎಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ...

‘ರಂಗ್ ತರಂಗ್ 2026’ – ರೋಟರಿ ಉಡುಪಿ ಮತ್ತು ರೋಟರಿ ಮಣಿಪಾಲ್ ಟೌನ್’ಗೆ ಜಂಟಿಯಾಗಿ ಜೋನಲ್ ಚಾಂಪಿಯನ್ಸ್ ಪ್ರಶಸ್ತಿ

ಉಡುಪಿ, ಅ.29: ಡಾ.ಟಿ.ಎಂ.ಎ ಪೈ ಸಭಾಭವನ ಮಾಹೆ ಮಣಿಪಾಲದಲ್ಲಿ ಭಾನುವಾರ ಜರಗಿದ...

ದಕ್ಷಿಣ ಕನ್ನಡ ಜಿಲ್ಲಾ ತಮಿಳು ಮರುತ್ತುವರ್ ಸಮಾಜದ ದಶಮಾನೋತ್ಸವ

ತೊಕ್ಕೊಟ್ಟು, ಅ.29: ದಕ್ಷಿಣ ಕನ್ನಡ ಜಿಲ್ಲಾ ತಮಿಳು ಮರುತ್ತುವರ್ ಸಮಾಜದ ದಶಮಾನೋತ್ಸವ...

ವಿಶ್ವ ಪಾರ್ಶ್ವವಾಯು ದಿನ- ಆರೋಗ್ಯ ಶಿಬಿರ

ಕಾಪು, ಅ. 29: ವಿಶ್ವ ಪಾರ್ಶ್ವವಾಯು ದಿನ-2026ರ ಅಂಗವಾಗಿ “ಪ್ರತಿ ನಿಮಿಷವೂ...
error: Content is protected !!