Wednesday, September 23, 2026
Wednesday, September 23, 2026

ಸಾಯ್ಬ್ರಕಟ್ಟೆ: ಗ್ರೀನ್ ಬೋರ್ಡ್ ವಿತರಣೆ

ಸಾಯ್ಬ್ರಕಟ್ಟೆ: ಗ್ರೀನ್ ಬೋರ್ಡ್ ವಿತರಣೆ

Date:

ಬ್ರಹ್ಮಾವರ: ರೋಟರಿ ಕ್ಲಬ್ ಸಾಯ್ಬ್ರಕಟ್ಟೆ ಇದರ ವತಿಯಿಂದ ಮಧುವನದ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಗೆ ಕಲಿಕೆಗಾಗಿ ಗ್ರೀನ್ ಬೋರ್ಡ್ ವಿತರಣೆ ಮಾಡಲಾಯಿತು. ಸಾಯ್ಬ್ರಕಟ್ಟೆ ರೋಟರಿ ಮಾಜಿ ಅಧ್ಯಕ್ಷ ಮಧುವನ ಮಾಧವ ಹೆಗ್ಡೆ, ಮಧುವನ ಮೋಹನದಾಸ್ ಹೆಗ್ಡೆ, ಹಾಗೂ ಶಿರಿಯಾರ ಗಣೇಶ ನಾಯಕ್ ಅವರ ಪ್ರಾಯೋಜಕತ್ವದಲ್ಲಿ ಕೊಡುಗೆಗಳನ್ನು ರೋಟರಿ ವತಿಯಿಂದ ಹಸ್ತಾಂತರಿಸಲಾಯಿತು.

ರೋಟರಿ ಸಾಯ್ಬ್ರಕಟ್ಟೆ ಅಧ್ಯಕ್ಷ ಯು ಪ್ರಸಾದ್ ಆರ್ ಭಟ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಾನವು ಸದ್ವಿನಿಯೋಗವಾದಾಗ ಅದು ಸಾರ್ಥಕ್ಯ ಕಂಡುಕೊಳ್ಳುತ್ತದೆ. ಸೇವೆಗೊಂದು ಮೌಲ್ಯ ಬಂದಂತಾಗುತ್ತದೆ ಎಂದರು. ಸಮಾರಂಭದಲ್ಲಿ ರೋಟರಿ ಕಾರ್ಯದರ್ಶಿ ಅಣ್ಣಯ್ಯದಾಸ್, ಪದಾಧಿಕಾರಿಗಳಾದ ನೀಲಕಂಠ ರಾವ್, ರಾಮಪ್ರಕಾಶ್, ಕಿರಣ ಕಾಜ್ರಲ್ಲಿ ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳಾದ ಮಧುವನ ಸಂದೇಶ್ ಹೆಗ್ಡೆ, ಶಿರಿಯಾರ ಗಣೇಶ ನಾಯಕ್ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕ ಲಚ್ಚು ನಾಯ್ಕ್ ಸ್ವಾಗತಿಸಿ ವಂದಿಸಿದರು. ಬೋಧಕ ಬೋಧಕೇತರರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಂದಾಪುರದ ಇಂಪನಾ ಆರ್. ಅವರಿಗೆ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಕುಂದಾಪುರ, ಸೆ.22: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ...

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರಕ್ಕೆ ಶೈಕ್ಷಣಿಕ ಭೇಟಿ

ಕುಂದಾಪುರ, ಸೆ.22: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು,...

ಎನ್ಎಸ್ಎಸ್ ಸ್ವಯಂಸೇವಕರಿಂದ ತ್ರಾಸಿ ಬೀಚ್ ಕ್ಲೀನಿಂಗ್

ಕುಂದಾಪುರ, ಸೆ.22: ಅಂತಾರಾಷ್ಟ್ರೀಯ ಕೊಸ್ಟಲ್ ಕ್ಲೀನ್ ಆಫ್ ಡೇ ಆಚರಣೆ ಪ್ರಯುಕ್ತ...
error: Content is protected !!