Tuesday, September 22, 2026
Tuesday, September 22, 2026

ಅಮೈ ಮಹಾಲಿಂಗ ನಾಯ್ಕರ ಸಾಧನೆ ಜಗತ್ತಿಗೆ ಸ್ಫೂರ್ತಿ: ಪೇಜಾವರ ಶ್ರೀ

ಅಮೈ ಮಹಾಲಿಂಗ ನಾಯ್ಕರ ಸಾಧನೆ ಜಗತ್ತಿಗೆ ಸ್ಫೂರ್ತಿ: ಪೇಜಾವರ ಶ್ರೀ

Date:

ಬಂಟ್ವಾಳ: ಭಾರತ ಸರ್ಕಾರದಿಂದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಸಾಹಸಿ ರೈತ ಅಮೈ ಮಹಾಲಿಂಗ ನಾಯ್ಕರ ತೋಟಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಭೇಟಿ ನೀಡಿದರು.

ನಾಯ್ಕರ ತೋಟಕ್ಕೆ ತೆರಳಿದ ಶ್ರೀಗಳು ಭಗೀರಥ ಯತ್ನದಿಂದ ಕೊರೆದ ಸುರಂಗದ ಒಳಹೊಕ್ಕು ಮೆಚ್ಚುಗೆ ವ್ಯಕ್ತಪಡಿಸಿದರು. ಸುರಂಗ ಕೊರೆದು ಗಂಗೆಯನ್ನು ಪಡೆದ ಯಶೋಗಾಥೆಯನ್ನು ನಾಯ್ಕರಿಂದಲೇ ಕೇಳಿ, ತುಂಬಿರುವ ಸಮೃದ್ದ ಜಲಸೆಲೆಯನ್ನು ಕಂಡು ಸಂತಸ ವ್ಯಕ್ತಪಡಿಸಿದರು.

ತೋಟದಲ್ಲಿ ಸಮೃದ್ಧವಾಗಿ ಬೆಳೆದು ನಿಂತು ನಾಯ್ಕರ ಸಾರ್ಥಕ ಶ್ರಮದ ಫಲಕ್ಕೆ ಸಾಕ್ಷಿ ಹೇಳುತ್ತಿರುವ ತೆಂಗು, ಕಂಗು, ಬಾಳೆ, ಮಾವು, ಹಲಸು ಮೊದಲಾದವುಗಳನ್ನು ವೀಕ್ಷಿಸಿದ ಬಳಿಕ ಮನೆಗೆ ಮರಳಿದ ಶ್ರೀಗಳವರಿಗೆ ನಾಯ್ಕರು ಮತ್ತವರ ಮನೆ ಮಂದಿ ಗೌರವಾರ್ಪಣೆಗೈದರು.

ನಾಯ್ಕರ ಕೃಷಿಯ ಅವಿರತ ಸಾಧನೆಯನ್ನು ಮನಸಾರೆ ಬಣ್ಣಿಸಿದ ಶ್ರೀಗಳು ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ಅತ್ಯಂತ ಅಭಿನಂದನೀಯ ಎಂದರು. ಅಮೈ ಮಹಾಲಿಂಗ ನಾಯ್ಕರಿಗೆ ಶಾಲು, ಶ್ರೀಕೃಷ್ಣನ ವಿಗ್ರವಿರುವ ಕಾಷ್ಠ ಮಂಟಪದ ಸ್ಮರಣಿಕೆ, ನಗದು, ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಸ್ಥಳೀಯರಾದ ಜನಾರ್ದನ ಭಟ್, ಪಂಚಾಯತ್ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರಕ್ಕೆ ಶೈಕ್ಷಣಿಕ ಭೇಟಿ

ಕುಂದಾಪುರ, ಸೆ.22: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು,...

ಎನ್ಎಸ್ಎಸ್ ಸ್ವಯಂಸೇವಕರಿಂದ ತ್ರಾಸಿ ಬೀಚ್ ಕ್ಲೀನಿಂಗ್

ಕುಂದಾಪುರ, ಸೆ.22: ಅಂತಾರಾಷ್ಟ್ರೀಯ ಕೊಸ್ಟಲ್ ಕ್ಲೀನ್ ಆಫ್ ಡೇ ಆಚರಣೆ ಪ್ರಯುಕ್ತ...

ಸೆ. 23(ನಾಳೆ) ಉಡುಪಿ ನಗರದಲ್ಲಿ ಕಸ ಸಂಗ್ರಹಣೆಯಲ್ಲಿ ವ್ಯತ್ಯಯ

ಉಡುಪಿ, ಸೆ.22: ನಗರದ ಪುರಭವನದಲ್ಲಿ ಸೆಪ್ಟಂಬರ್ 23 ರಂದು ಪೌರಕಾರ್ಮಿಕರ ದಿನಾಚರಣೆ...
error: Content is protected !!