Thursday, September 24, 2026
Thursday, September 24, 2026

ಜಗತ್ತಿಗೆ ಪ್ರಬುದ್ಧ ಚಿಂತನೆಯನ್ನು ನೀಡಿದವರು ಡಾ. ಬಿ. ಆರ್ ಅಂಬೇಡ್ಕರ್: ಡಾ. ಗಣನಾಥ ಎಕ್ಕಾರು

ಜಗತ್ತಿಗೆ ಪ್ರಬುದ್ಧ ಚಿಂತನೆಯನ್ನು ನೀಡಿದವರು ಡಾ. ಬಿ. ಆರ್ ಅಂಬೇಡ್ಕರ್: ಡಾ. ಗಣನಾಥ ಎಕ್ಕಾರು

Date:

ಉಡುಪಿ, ಸೆ.22: ಡಾ ಬಿ ಆರ್ ಅಂಬೇಡ್ಕರ್ ತಮ್ಮ ಜೀವನದ ಪ್ರತಿ ಹಂತದಲ್ಲಿ ಅಸಮಾನತೆ ಯನ್ನು ಎದುರಿಸಿದವರು. ಅವರ ಪ್ರಬುದ್ಧ ಚಿಂತನೆಯ ಮೂಲಕ ಸಂವಿಧಾನ ವನ್ನು ರಚಿಸಿ ದೇಶದ ಪ್ರಜಾಪ್ರಭುತ್ವ ಕ್ಕೆ ಭದ್ರ ಅಡಿಪಾಯವನ್ನು ಹಾಕಿದರು ಎಂದು ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ. ಗಣನಾಥ ಎಕ್ಕಾರು ಹೇಳಿದರು. ಅವರು ಸರಕಾರಿ ಪದವಿ ಪೂರ್ವ ಕಾಲೇಜು (ಕೆ.ಪಿ.ಎಸ್.) ಪಡುಬಿದ್ರಿ ಇಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಜಿಲ್ಲೆ ವತಿಯಿಂದ ನಡೆದ ಡಾ. ಬಿ. ಆರ್. ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್ ಕುರಿತು ಓದುವಿಕೆ ಚಿಂತನೆಯನ್ನು ಬದಲಾಯಿಸುತ್ತದೆ. ಜ್ಞಾನವನ್ನು ವೃದ್ಧಿಸುತ್ತದೆ. ಸಂವಿದಾನದ ಮೌಲ್ಯಗಳನ್ನು ಅರಿತು ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಮಂಗಳೂರು ಆಟೋಮೊಬೈಲ್ ಇಂಜಿನಿಯರಿಂಗ ವಿಭಾಗ ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಭಾಸ್ಕರ್ ವಿಟ್ಲ ಉಪನ್ಯಾಸ ನೀಡಿ ಮಾತನಾಡಿ, ಸಂವಿಧಾನ ದ ಮೂಲಕ ಹೆಣ್ಣು ಮಕ್ಕಳಿಗೆ ಗೌರವ ಸ್ವತಂತ್ರ ಸಮಾನತೆ ಒದಗಿಸಿದವರು ಡಾ. ಬಿ ಆರ್. ಅಂಬೇಡ್ಕರ್. ಸಂವಿಧಾನ ದಂತೆ ಇಂದಿನ ಪೀಳಿಗೆಯು ಮಹಿಳೆಯರಿಗೆ ಸಮಾನ ಅವಕಾಶ ಗೌರವ ಸ್ವತಂತ್ರ ನೀಡಬೇಕು ಎಂದರು.

ಕರ್ನಾಟಕ ಪಬ್ಲಿಕ್ ಸ್ಕೂಲ್, ಪಡುಬಿದ್ರಿ ಪ್ರಾಂಶುಪಾಲೆ ಡಾ. ಸುಮಾ ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಹೇಮಚಂದ್ರ ಸಾಲಿಯಾನ, ಕೆ.ಪಿ.ಎಸ್., ಪಡುಬಿದ್ರಿ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ ಬಂಗೇರ, ಪ್ರೌಢಶಾಲಾ ವಿಭಾಗ ಹಿರಿಯ ಸಹಶಿಕ್ಷಕಿ ಸರಿಟ ಡಿಸೋಜಾ, ಪ್ರಾಥಮಿಕ ವಿಭಾಗ ಮುಖ್ಯೋಪಾಧ್ಯಾಯಿನಿ ಶೈಲಜಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಶಾಲೆಯ ಶಿಕ್ಷಕಿ ಸುಜಾತಾ ನಿರೂಪಿಸಿ, ಅಜಯ್ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಂದಾಪುರದ ಇಂಪನಾ ಆರ್. ಅವರಿಗೆ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಕುಂದಾಪುರ, ಸೆ.22: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ...

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರಕ್ಕೆ ಶೈಕ್ಷಣಿಕ ಭೇಟಿ

ಕುಂದಾಪುರ, ಸೆ.22: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು,...

ಎನ್ಎಸ್ಎಸ್ ಸ್ವಯಂಸೇವಕರಿಂದ ತ್ರಾಸಿ ಬೀಚ್ ಕ್ಲೀನಿಂಗ್

ಕುಂದಾಪುರ, ಸೆ.22: ಅಂತಾರಾಷ್ಟ್ರೀಯ ಕೊಸ್ಟಲ್ ಕ್ಲೀನ್ ಆಫ್ ಡೇ ಆಚರಣೆ ಪ್ರಯುಕ್ತ...

ಸೆ. 23(ನಾಳೆ) ಉಡುಪಿ ನಗರದಲ್ಲಿ ಕಸ ಸಂಗ್ರಹಣೆಯಲ್ಲಿ ವ್ಯತ್ಯಯ

ಉಡುಪಿ, ಸೆ.22: ನಗರದ ಪುರಭವನದಲ್ಲಿ ಸೆಪ್ಟಂಬರ್ 23 ರಂದು ಪೌರಕಾರ್ಮಿಕರ ದಿನಾಚರಣೆ...
error: Content is protected !!