Friday, November 6, 2026
Friday, November 6, 2026

ಕುಂದಾಪುರದ ಇಂಪನಾ ಆರ್. ಅವರಿಗೆ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಕುಂದಾಪುರದ ಇಂಪನಾ ಆರ್. ಅವರಿಗೆ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

Date:

ಕುಂದಾಪುರ, ಸೆ.22: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ 21ನೇ ರಾಜ್ಯಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿತ್ಮೇಟಿಕ್ ಸ್ಪರ್ಧೆ–2026 ಸೆಪ್ಟೆಂಬರ್ 20ರಂದು ಕುಂದಾಪುರದ ಯುವ ಮೆರಿಡಿಯನ್‌ನಲ್ಲಿ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 2,000 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯ B/L ವಿಭಾಗದಲ್ಲಿ ಕುಂದಾಪುರದ ಇಂಪನಾ ಆರ್. ಅವರು ಪ್ರಥಮ ಸ್ಥಾನ ಪಡೆದಿದ್ದಾರೆ. ಇಂಪನಾ ಅವರು ಐಡಿಯಲ್ ಪ್ಲೇ ಅಬಾಕಸ್ ಕುಂದಾಪುರ ಕೇಂದ್ರದ ಮುಖ್ಯಸ್ಥರಾದ ಪ್ರಸನ್ನ ಕೆ. ಬಿ. ಅವರಿಂದ ತರಬೇತಿ ಪಡೆದಿದ್ದು, ಶಿಕ್ಷಕರಾದ ಮಹಾಲಕ್ಷ್ಮಿ ಹಾಗೂ ದೀಪಾ ಅವರು ಮಾರ್ಗದರ್ಶನ ನೀಡಿರುತ್ತಾರೆ. ಇಂಪನಾ ಅವರು ಕುಂದಾಪುರದ ನಿವಾಸಿಗಳಾದ ದೀಪಿಕಾ ಜಿ. ಮತ್ತು ರಾಘವೇಂದ್ರ ಶೇರೆಗಾರ್ ಅವರ ಪುತ್ರಿ. ಪ್ರಸ್ತುತ ಅವರು ಕುಂದಾಪುರದ ಶ್ರೀ ವೆಂಕಟರಮಣ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ 4ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನಾಲ್ಕು ರಾಷ್ಟ್ರಗಳ ನೌಕಾಪಡೆಗಳೊಂದಿಗೆ ಐಎನ್ಎಸ್ ಸಹ್ಯಾದ್ರಿ

ನವದೆಹಲಿ, ನ.5: ಭಾರತೀಯ ನೌಕಾಪಡೆಯ ಸ್ಥಳೀಯ ಮಾರ್ಗದರ್ಶಿ ಕ್ಷಿಪಣಿ ಸ್ಟೆಲ್ತ್ ಫ್ರಿಗೇಟ್,...

ಗಯಾನಾದಲ್ಲಿ ರಸ್ತೆ, ಆರೋಗ್ಯ ಮತ್ತು ರಕ್ಷಣಾ ಯೋಜನೆಗಳಿಗಾಗಿ 500 ಮಿಲಿಯನ್ ಡಾಲರ್ ಸಾಲ ಸೌಲಭ್ಯವನ್ನು ಘೋಷಿಸಿದ ಭಾರತ

ನವದೆಹಲಿ, ನ.5: ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್....

ಮಕ್ಕಳ ದಿನಾಚರಣೆ ಅಂಗವಾಗಿ ವಿವಿಧ ಸ್ಫರ್ಧೆ

ಉಡುಪಿ, ನ.5: ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಅಂಗವಾಗಿ ಉಡುಪಿಯ ಬ್ರಹ್ಮಗಿರಿಯ...

ತೆಂಗಿನ ತೋಟಗಳ ಪುನಶ್ಚೇತನ ಕಾರ್ಯಕ್ರಮದಡಿ ಸಹಾಯಧನ

ಉಡುಪಿ, ನ.5: ಉಡುಪಿ ತೋಟಗಾರಿಕೆ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಅನುತ್ಪಾದಕ...
error: Content is protected !!