ಉಡುಪಿ, ಸೆ.24: ಅಮೇರಿಕಾ ನಿವಾಸಿ ದಿನೇಶ ಪೇಜಾವರ ಮತ್ತು ಅವರ ಪತ್ನಿ ವೃಂದಾ ಓರ್ವ ವಿದ್ಯಾಪೋಷಕ್ ವಿದ್ಯಾರ್ಥಿಗೆ ಮನೆ ನಿರ್ಮಿಸಿಕೊಡಲು ಸಂಕಲ್ಪಿಸಿ ಹತ್ತು ಸಾವಿರ ಡಾಲರ್ ಚೆಕ್ಕನ್ನು ಗುರುವಾರ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಅವರಿಗೆ ಹಸ್ತಾಂತರಿಸಿದರು.
ಉಪಾಧ್ಯಕ್ಷರುಗಳಾದ ಪಿ.ಕಿಶನ್ ಹೆಗ್ಡೆ, ವಿ. ಜಿ. ಶೆಟ್ಟಿ, ಜೊತೆ ಕಾರ್ಯದರ್ಶಿ ನಾರಾಯಣ ಎಂ.ಹೆಗಡೆ ಉಪಸ್ಥಿತರಿದ್ದರು. ಸಂಸ್ಥೆ ಸ್ಥಳ ಖರೀದಿಸುವಾಗ ದೊಡ್ಡ ಮೊತ್ತದ ದೇಣಿಗೆ ನೀಡಿ ನಿರಂತರವಾಗಿ ಪ್ರೋತ್ಸಾಹಿಸುತ್ತಾ ಬಂದ ಪೇಜಾವರ ದಂಪತಿಗಳ ಸಹಕಾರವನ್ನು ಮುರಲಿ ಕಡೆಕಾರ್ ಸ್ಮರಿಸಿಕೊಂಡರು.




By
ForthFocus™