Friday, November 6, 2026
Friday, November 6, 2026

ಸ್ನೇಹಪೂರ್ಣ ವ್ಯಕ್ತಿತ್ವದಿಂದ ಸಮಾಜದಲ್ಲಿ ಸೌಹಾರ್ದ ಸಂಬಂಧದ ಸೇತುವೆ ಕಟ್ಟಿದ ಎಂ. ಗಂಗಾಧರ ರಾವ್: ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು

ಸ್ನೇಹಪೂರ್ಣ ವ್ಯಕ್ತಿತ್ವದಿಂದ ಸಮಾಜದಲ್ಲಿ ಸೌಹಾರ್ದ ಸಂಬಂಧದ ಸೇತುವೆ ಕಟ್ಟಿದ ಎಂ. ಗಂಗಾಧರ ರಾವ್: ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು

Date:

ಉಡುಪಿ, ನ.6: ನಂದಕುಮಾರ್ ಅಸೋಸಿಯೇಟ್ಸ್ ನ ವರಿಷ್ಠರಾದ ಎಂ. ಗಂಗಾಧರ ರಾವ್ ತಮ್ಮ ವೃತ್ತಿ ಬದುಕಿನ 40ನೆ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ನವೆಂಬರ 4ರಂದು ಜರುಗಿದ ಸಮಾರಂಭದಲ್ಲಿ ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಗಂಗಾಧರರ ಕುರಿತು ನಾರಾಯಣ ಎಂ. ಹೆಗಡೆಯವರು ಬರೆದ ‘ಕರ್ಮಯೋಗಿ-ಕಲಾಪ್ರೇಮಿ’ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ, ತಮ್ಮ ಅನುಗ್ರಹ ಸಂದೇಶದಲ್ಲಿ ನಂದಕುಮಾರರು ಪರೋಪಕಾರ, ಕೃತಜ್ಞತಾ ಗುಣ, ಸರಳತೆ ಹಾಗೂ ಗುಣಮಟ್ಟದ ಕಟ್ಟಡ ನಿರ್ಮಾಣದಿಂದ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಕೇವಲ ಕಟ್ಟಡವನ್ನಷ್ಟೇ ಕಟ್ಟಿದ್ದಲ್ಲ ತಮ್ಮ ಸ್ನೇಹಪೂರ್ಣ ವ್ಯಕ್ತಿತ್ವದಿಂದ ಸಮಾಜದಲ್ಲಿ ಸೌಹಾರ್ದ ಸಂಬಂಧದ ಸೇತುವೆಯನ್ನೂ ಕಟ್ಟಿದ್ದಾರೆ. ದುಡಿಮೆಯ ದೊಡ್ಡ ಪಾಲನ್ನು ಸಮಾಜಕ್ಕೆ ಸಮರ್ಪಿಸಿ ಆದರ್ಶ ಮೆರೆದಿದ್ದಾರೆ ಎಂದರು. ಅವರ ಅಧ್ಯಕ್ಷತೆಯಲ್ಲಿ ಯಕ್ಷಗಾನ ಕಲಾರಂಗ ಬಡ ವಿದ್ಯಾಥಿಗಳಿಗೆ, ಕಲಾವಿದರಿಗೆ ಮನೆ ನಿರ್ಮಿಸಿಕೊಡುವ ಯೋಜನೆಯೂ ಸೆರಿದಂತೆ ಹಲವು ಕಾರ್ಯಕ್ರಮಗಳನ್ನು ಬಹಳ ಸಮರ್ಥವಾಗಿ ನಿರ್ವಹಿಸುತ್ತಿದೆ, ಅವರಿಗೆ ಉತ್ತರೋತ್ತರ ಶ್ರೇಯಸ್ಸಾಗಲೆಂದು ಹರಸಿದರು.

ವೇದಿಕೆಯಲ್ಲಿ ಮಾಜಿ ಶಾಸಕ ಕೆ. ರಘುಪತಿ ಭಟ್, ಕರ್ಣಾಟಕ ಬ್ಯಾಂಕ್‍ನ ಜಿ.ಎಂ.ಬಿ. ಗೋಪಾಲಕೃಷ್ಣ ಸಾಮಗ, ಉಜ್ವಲ್ ಡೆವೆಲಪರ್ಸ್ ನ ಪಿ. ಪುರುಷೋತ್ತಮ ಶೆಟ್ಟಿ, ಸಹಕಾರಿ ಧುರೀಣ ಇಂದ್ರಾಳಿ ಜಯಕರ್ ಶೆಟ್ಟಿ,ಕೃಡೖ ಅಧ್ಯಕ್ಷ ಕೆ.ಸುಧೀರ್ ಶೆಟ್ಟಿ, ಇಂಜಿನಿಯರ್ಸ ಅಸೋಸಿಯೇಷನ್ ಅಧ್ಯಕ್ಷ ಭಗವಾನ್‍ದಾಸ, ಇಂಜಿನಿಯರ್ ಎಂ.ಗೋಪಾಲ ಭಟ್, ಆರ್ಕಿಟೆಕ್ಟ್ ಯೋಗೀಶ್ಚಂದ್ರಾಧರ್, ಗಾಂಧಿ ಆಸ್ಪತ್ರೆಯ ಡಾ.ಹರಿಶ್ಚಂದ್ರ, ಸೀತಾರಾಮ ತೋಳ್ಪಾಡಿತ್ತಾಯ, ಎಂ.ಗೋಪಿಕೃಷ್ಣ ರಾವ್ ಅಭ್ಯಾಗತರಾಗಿ ಭಾಗವಹಿಸಿದ್ದರು.

ವೇದಿಕೆಯಲ್ಲಿ ಗಂಗಾಧರ ರಾವ್ ಅವರ ತಾಯಿ ಕುಸುಮಾ ಎಂ.ರಾವ್ ಉಪಸ್ಥಿತರಿದ್ದರು. ಎಂ.ಗಂಗಾಧರ ರಾಯರು ತಮ್ಮ ವಿದ್ಯಾ ಗುರುಗಳು, ಸಹಕರಿಸಿದ ಗಣ್ಯರು, ಗ್ರಾಹಕರು, ವೃತ್ತಿಸ್ನೇಹಿತರು ಹಾಗೂ ಕಟ್ಟಡ ನಿರ್ಮಾಣದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಕಾರ್ಮಿಕ ಮುಖ್ಯಸ್ಥರು, ಸಂಸ್ಥೆಯ ನಿವೃತ್ತ ಮತ್ತು ಹಾಲಿ ಸಿಬ್ಬಂಧಿಗಳು ಸೇರಿದಂತೆ ಸುಮಾರು 120 ಜನರಿಗೆ ಶಾಲು, ಅಭಿನಂದನಾ ಪತ್ರ, ಸ್ಮರಣಿಕೆ ಪೂಜ್ಯ ಸ್ವಾಮೀಜಿಯವರ ಅನುಗ್ರಹ ಮಂತ್ರಾಕ್ಷತೆಯೊಂದಿಗೆ ಗೌರವಿಸಿದರು. ವೇದಿಕೆಯಲ್ಲಿರುವ ಗಣ್ಯರು ಮಾತನಾಡಿ ಗಂಗಾಧರ ರಾಯರ ವಿಶಿಷ್ಟವ್ಯಕ್ತಿತ್ವವನ್ನು, ಸಮಾಜ ಪ್ರೀತಿಯನ್ನು ಕಟ್ಟಡ ಕ್ಷೇತ್ರದಲ್ಲಿಯ ಅವರ ಸಾಮರ್ಥ್ಯ ಮತ್ತು ವಿಶ್ವಾಸಾರ್ಹತೆಯನ್ನು ತಮ್ಮ ಅನುಭವದ ಹಿನ್ನಲೆಯಲ್ಲಿ ಅನಿಸಿಕೆ ವ್ಯಕ್ತಪಡಿಸಿದರು. ಎಂ.ಗಂಗಾಧರ ರಾವ್ ಪ್ರಸ್ತಾವನೆಯ ಮಾತುಗಳೊಂದಿಗೆ ಸ್ವಾಗತಿಸಿದರು. ಸರಸ್ವತಿ ಜಿ. ರಾವ್ ವಂದಿಸಿದರು. ಪಾವನಿ ಪ್ರಾರ್ಥಿಸಿದರು. ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಡುಪಿ: ಗುಡುಗು ಸಹಿತ ಮಳೆ

ಉಡುಪಿ, ನ.6: ಉಡುಪಿ ಜಿಲ್ಲೆಯ ಕೆಲವೆಡೆ ಶುಕ್ರವಾರ ಸಂಜೆ ಗುಡುಗು ಸಹಿತ...

ಗೃಹಲಕ್ಷ್ಮಿ ಫಲಾನುಭವಿಗಳೊಂದಿಗೆ ಸಿಎಂ ಸಂವಾದ

ಬೆಂಗಳೂರು, ನ.6: ಗೃಹಕಚೇರಿ ಕೃಷ್ಣಾದಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳೊಂದಿಗೆ ಮುಖ್ಯಮಂತ್ರಿ ಡಿ.ಕೆ....

ಉಡುಪಿ ಶ್ರೀ ಕೃಷ್ಣ ಮಠ: ಕನಕದಾಸರ ಶಿಲಾಮಯ ಗುಡಿಗೆ ಶಿಲಾನ್ಯಾಸ

ಉಡುಪಿ, ನ.6: ಕೃಷ್ಣ ಮಠದ ರಥಬೀದಿಯಲ್ಲಿರುವ ಕನಕದಾಸರ ಶಿಲಾಮಯ ಗುಡಿಗೆ ಶಿಲಾನ್ಯಾಸವನ್ನು...
error: Content is protected !!