Wednesday, November 4, 2026
Wednesday, November 4, 2026

ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರ

ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರ

Date:

ಉಡುಪಿ, ನ.4: ರೋಟರಿ ಕ್ಲಬ್ ಆಫ್ ಮಣಿಪಾಲ್, ರೋಟರಿ ಹೊಂಗಿರಣ ಸಮಗ್ರ ಮಕ್ಕಳ ಮಾರ್ಗದರ್ಶನ ಮತ್ತು ಬೆಳವಣಿಗೆ ಕೇಂದ್ರ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಡಾ. ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆ, ಆಟಿಸಂ ಸೊಸೈಟಿ ಆಫ್ ಉಡುಪಿ ಹಾಗೂ ವಿದ್ಯೋದಯ ಪಬ್ಲಿಕ್ ಸ್ಕೂಲ್ ಇವರ ಸಂಯುಕ್ತ ಆಶ್ರಯದಲ್ಲಿ ಸಮಗ್ರ ಶಿಕ್ಷಣ ಕುರಿತು ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರ ವಿದ್ಯೋದಯ ಪಬ್ಲಿಕ್ ಸ್ಕೂಲ್ ಸಭಾಂಗಣದಲ್ಲಿ ನಡೆಯಿತು.

ತರಗತಿಗಳಲ್ಲಿ ಎಲ್ಲ ಮಕ್ಕಳಿಗೂ ಸಮಾನ ಮತ್ತು ಒಳಗೊಳ್ಳುವಿಕೆಯ ಆಧಾರಿತ ಕಲಿಕೆಯನ್ನು ಒದಗಿಸುವ ಉದ್ದೇಶದಿಂದ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಡಾ. ಅಶೋಕ ಕಾಮತ್, ಪ್ರಾಂಶುಪಾಲರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಡುಪಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪಿ.ವಿ. ಭಂಡಾರಿ, ನಿರ್ದೇಶಕರು, ಡಾ. ಎ.ವಿ. ಬಾಳಿಗ ಸಮೂಹ ಸಂಸ್ಥೆಗಳು ಉಡುಪಿ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ ಪ್ರದೀಪ್ ಪ್ರೆಸಿಡೆಂಟ್ ರೋಟರಿ ಕ್ಲಬ್ ಮಣಿಪಾಲ, ಡಾ. ಗಿರಿಜಾ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರು, ಸೋನಿಯಾ ಕ್ಲಿನಿಕ್ ಮಣಿಪಾಲ, ಮತ್ತು ಅನಿತಾ ರಾಜ್, ಪ್ರಾಂಶುಪಾಲರು, ವಿದ್ಯೋದಯ ಪಬ್ಲಿಕ್ ಸ್ಕೂಲ್ ಹಾಗೂ ಅನೂಪ್ ಸಿಂಹ, ಪ್ರಾಜೆಕ್ಟ್ ಡೈರೆಕ್ಟರ್, ಇಶಾನ್ಯ ಇಂಡಿಯಾ ಫೌಂಡೇಶನ್, ಬೆಂಗಳೂರು ಇವರು ಆಗಮಿಸಿದ್ದರು.

ಡಾ. ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ವೃತ್ತಿಪರ ಚಿಕಿತ್ಸಕರಾದ ಪೂರ್ಣಿಮಾ ಪ್ರಾರ್ಥಿಸಿದರು. ಆಸ್ಪತ್ರೆಯ ಆಡಳಿತಾಧಿಕಾರಿಯಾದ ಸೌಜನ್ಯ ಶೆಟ್ಟಿ ಸ್ವಾಗತಿಸಿದರು, ನಾಗರಾಜ ಶೆಟ್ಟಿ ಕಮ್ಯುನಿಟಿ ಸರ್ವೀಸ್ ಡೈರೆಕ್ಟರ್ ವಂದಿಸಿದರು, ಆಸ್ಪತ್ರೆಯ ಆಪ್ತ ಸಮಾಲೋಚಕರಾದ ದೀಪಶ್ರೀ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಡಾ. ಪಿ.ವಿ. ಭಂಡಾರಿ, ನಿರ್ದೇಶಕರು, ಡಾ. ಎ.ವಿ. ಬಾಳಿಗ ಸಮೂಹ ಸಂಸ್ಥೆಗಳು ಉಡುಪಿ, ಡಾ. ಅಶೋಕ ಕಾಮತ್, ಪ್ರಾಂಶುಪಾಲರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಡುಪಿ, ನಾಗರಾಜ್ ಮೂರ್ತಿ ಮನಶಾಸ್ತ್ರಜ್ಞರು ಡಾ ಎ ವಿ ಬಾಳಿಗ ಸ್ಮಾರಕ ಅಸ್ಪತ್ರೆ ಉಡುಪಿ, ಅನೂಪ್ ಸಿಂಹ, ಪ್ರಾಜೆಕ್ಟ್ ಡೈರೆಕ್ಟರ್, ಇಶಾನ್ಯ ಇಂಡಿಯಾ ಫೌಂಡೇಶನ್, ಬೆಂಗಳೂರು ಇವರು ಮಕ್ಕಳ ಭಾವನಾತ್ಮಕ ಮತ್ತು ವರ್ತನಾ ಸಮಸ್ಯೆಗಳು, ಕಲಿಕೆಯಲ್ಲಿ ಸಮಾನ ಅವಕಾಶಗಳು, ನಿರ್ದಿಷ್ಟ ಕಲಿಕಾ ನ್ಯೂನತೆ, ತರಗತಿ ನಿರ್ವಹಣೆ ಹಾಗೂ ವಿವಿಧ ರೀತಿಯ ಕಲಿಕಾರ್ಥಿಗಳ ಅಗತ್ಯತೆಗಳ ಕುರಿತು ಮಾಹಿತಿಯನ್ನು ನೀಡಿದರು. 200 ಕ್ಕೂ ಹೆಚ್ಚಿನ ಶಿಕ್ಷಕರು ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಐದು ವಿಕೆಟ್‌ಗಳ ಜಯ

ಯು.ಬಿ.ಎನ್.ಡಿ., ನ.4: ಆಕ್ಲೆಂಡ್‌ನಲ್ಲಿ ನಡೆದ ಮಳೆಯಿಂದ ಬಾಧಿತವಾದ ಮೊದಲ ಏಕದಿನ ಪಂದ್ಯದಲ್ಲಿ,...

ಭರತನಾಟ್ಯ ವಿದ್ವತ್ ಪೂರ್ವ ಪರೀಕ್ಷೆ: ಸಾತ್ವಿಕ್ ಕೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ

ಉಡುಪಿ, ನ.4: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು...

ಯಕ್ಷಗಾನ ಕಲಾರಂಗದ 107ನೇ ಮನೆ ಹಸ್ತಾಂತರ

ಉಡುಪಿ, ನ.4: ಯಕ್ಷಗಾನ ಕಲಾರಂಗವು ಹತ್ತನೆ ತರಗತಿಯ ವಿದ್ಯಾರ್ಥಿನಿ ವಿನಿಷಾ ಮತ್ತು...
error: Content is protected !!