Friday, July 24, 2026
Friday, July 24, 2026

ಸೇವಾಂಜಲಿ ಚ್ಯಾರಿಟೇಬಲ್ ಟ್ರಸ್ಟ್- ಆರೋಗ್ಯ ಸುರಕ್ಷಾ ಯೋಜನೆ

ಸೇವಾಂಜಲಿ ಚ್ಯಾರಿಟೇಬಲ್ ಟ್ರಸ್ಟ್- ಆರೋಗ್ಯ ಸುರಕ್ಷಾ ಯೋಜನೆ

Date:

ಮಂಗಳೂರು: ಸಮಾಜಮುಖಿ ಸೇವಾಸಂಸ್ಥೆ ಸೇವಾಂಜಲಿ ಚ್ಯಾರಿಟೇಬಲ್ ಟ್ರಸ್ಟ್ (ರಿ) ಕೆಎಂಸಿ ಆಸ್ಪತ್ರೆ ಹಾಗೂ ಮಣಿಪಾಲ್ ಸಿಗ್ನಾ ಹೆಲ್ತ್ ಇನ್ಸೂರೆನ್ಸ್ ಕಂಪೆನಿ ಲಿಮಿಟೆಡ್ ಸಹಯೋಗದೊಂದಿಗೆ ಸೇವಾಂಜಲಿ ಆರೋಗ್ಯ ಸುರಕ್ಷಾ ಯೋಜನೆಯನ್ನು ಜಾರಿಗೆ ತರುತ್ತಿದೆ.

ಪ್ರತಿ ಕುಟುಂಬಕ್ಕೆ ವಿಮಾ ಮೊತ್ತ 50000/- ರೂಪಾಯಿಗಳಾಗಿದ್ದು, ಒಳರೋಗಿ ಸೌಲಭ್ಯಗಳು, ಹೆರಿಗೆ ಸೌಲಭ್ಯಗಳು, ವೈಯಕ್ತಿಕ ಅಪಘಾತ ವಿಮೆ ಪ್ರತಿ ಸದಸ್ಯರಿಗೆ ರೂಪಾಯಿ 50000/- ರವರೆಗೆ ಸೌಲಭ್ಯ ಲಭ್ಯ ಇದೆ. ಪ್ರತಿ ಕುಟುಂಬದಲ್ಲಿ ಗರಿಷ್ಟ ಐದು ಜನ ಸದಸ್ಯರು ಇರಬಹುದಾಗಿದ್ದು, ವಿಮಾ ಪಾಲಿಸಿಗೆ 91 ದಿನದ ಹಸುಳೆಯಿಂದ 85 ವರ್ಷಗಳ ತನಕ ಹಿರಿಯ ಸದಸ್ಯರನ್ನು ಕೂಡ ನಮೂದಿಸಬಹುದಾಗಿದೆ.

ಈ ಪಾಲಿಸಿಯಡಿ ನಗದುರಹಿತ ಸೇವೆ ದೊರೆಯಲಿದೆ. ಡಯಾಲೀಸಿಸ್, ಕೀಮೋಥೆರಪಿ, ರೆಡಿಯೋಥೆರಪಿ, ಕಣ್ಣಿನಪೊರೆ, ಅಪಘಾತದಿಂದಾಗಿ ಹಲ್ಲಿನ ಚಿಕಿತ್ಸೆ, ಮೂತ್ರಪಿಂಡದ ಕಲ್ಲು ತೆಗೆಯುವ ಶಸ್ತ್ರಚಿಕಿತ್ಸೆ ಈ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಮಣಿಪಾಲ್ ಸಿಗ್ನಾ ಹೆಲ್ತ್ ಇನ್ಸೂರೆನ್ಸ್ ಕಂಪೆನಿಯವರು ಕೆಲವೇ ಸಂಘಟನೆಗಳಿಗೆ ಈ ಪಾಲಿಸಿಯನ್ನು ನೀಡಿದ್ದು, ಅದರಲ್ಲಿ ಜನಪರ ಕೆಲಸ ಮಾಡುವ ಸೇವಾಂಜಲಿ ಚ್ಯಾರಿಟೇಬಲ್ ಟ್ರಸ್ಟ್ ಕೂಡ ಸೇರಿದೆ.

ಒಳರೋಗಿಗಳು ಜನರಲ್ ವಾರ್ಡಿನಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ. ಟಿಎಂಎ ಪೈ ಆಸ್ಪತ್ರೆ ಉಡುಪಿ ಮತ್ತು ಕಾರ್ಕಳ, ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಈ ಪಾಲಿಸಿಯನ್ನು ಮಾಡಿಸಲು ಅರ್ಜಿಯೊಂದಿಗೆ, ಆಧಾರ ಕಾರ್ಡ್ ಕೂಡ ಅಗತ್ಯ ಇದೆ.

ಅರ್ಜಿಗಳು ದೊರೆಯುವ ಸ್ಥಳ: ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಅಟಲ್ ಸೇವಾ ಕೇಂದ್ರದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತ್ತು ಮಂಗಳೂರಿನ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸಂಜೆ 5.30 ರಿಂದ 7.30 ರ ತನಕ ದೊರೆಯಲಿದೆ. ಅರ್ಜಿಯನ್ನು ಪಡೆದು ಆಯಾಯ ಕೇಂದ್ರಗಳಲ್ಲಿ 10.12.2021 ರ ಒಳಗೆ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ 7795069777

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ರೂಮಿನೊಳಗಿಂದ’ ಬಿಡುಗಡೆ

ಗಂಗೊಳ್ಳಿ, ಜು.24: ನರೇಂದ್ರ ಅವರ ಸಾಹಿತ್ಯದಲ್ಲಿನ ವೈವಿಧ್ಯತೆ ಮತ್ತು ಆಕರ್ಷಣೆ ಅಭಿನಂದನೀಯ....

ಜು.27: ಅಜ್ಜರಕಾಡಿನಲ್ಲಿ ನೇರ ಸಂದರ್ಶನ

ಉಡುಪಿ, ಜು.24: ಉಡುಪಿಯ ಅಜ್ಜರಕಾಡು ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಧನಂಜಯ...

ಅಂಚೆ ಜೀವ ವಿಮಾ ಪ್ರತಿನಿಧಿಗಳ ಆಯ್ಕೆಗೆ ನೇರ ಸಂದರ್ಶನ

ಉಡುಪಿ, ಜು.24: ಉಡುಪಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ...

ನಾಟಾ ಪರೀಕ್ಷೆ- ಕ್ರಿಯೇಟಿವ್ ಸಂಸ್ಥೆಯ 4 ವಿದ್ಯಾರ್ಥಿಗಳಿಗೆ 100 ರ‍್ಯಾಂಕ್‌ನೊಳಗೆ ಸ್ಥಾನ

ಉಡುಪಿ, ಜು.24: ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನವರು ನಡೆಸಿದ ನಾಟಾ ಪರೀಕ್ಷೆ...
error: Content is protected !!