Saturday, August 29, 2026
Saturday, August 29, 2026

ಉಡುಪಿ ಅಂಚೆ ವಿಭಾಗದಿಂದ ಸ್ವಚ್ಛ ಭಾರತ- ಸ್ವಚ್ಛ ನಡಿಗೆ

ಉಡುಪಿ ಅಂಚೆ ವಿಭಾಗದಿಂದ ಸ್ವಚ್ಛ ಭಾರತ- ಸ್ವಚ್ಛ ನಡಿಗೆ

Date:

ಉಡುಪಿ: ಜನಸಾಮಾನ್ಯರಿಗೆ ಹತ್ತಿರವಾದ ಭಾರತೀಯ ಅಂಚೆ ಇಲಾಖೆ ಜನಮಾನಸದಲ್ಲಿ ಉಳಿಯುವಂತಹ ಜನಜಾಗೃತಿ ಕೆಲಸವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅಭಿಪ್ರಾಯಪಟ್ಟರು. ಸ್ವಚ್ಛತಾ ಪಾಕ್ಷಿಕದ ಅಂಗವಾಗಿ ಭಾರತೀಯ ಅಂಚೆ ಇಲಾಖೆ, ಉಡುಪಿ ಅಂಚೆ ವಿಭಾಗ ಹಮ್ಮಿಕೊಂಡ ಸ್ವಚ್ಛ ಭಾರತ- ಸ್ವಚ್ಛತಾ ನಡಿಗೆ ಕಾರ್ಯಕ್ರಮವನ್ನು ಶಾಂತಿಯ ದೂತ, ಸಂದೇಶ ರವಾನೆಯ ಸಂಕೇತ ಪಾರಿವಾಳಗಳನ್ನು ಹಾರಿಸಿ ಬಿಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸಂವಹನ ಕ್ಷೇತ್ರದಲ್ಲಿ ಅಂದಿಗೂ ಇಂದಿಗೂ ಮನೆ ಮಾತಾಗಿರುವ ಭಾರತೀಯ ಅಂಚೆ ಇಲಾಖೆ ಹಾಗೂ ಅಂಚೆ ಅಣ್ಣನ ಘನತೆ ಇಂದಿಗೂ ಪ್ರಸ್ತುತ.

ಹಾಗಾಗಿ ಆಧುನಿಕ ಕಾಲಮಾನಕ್ಕೆ ತಕ್ಕಂತೆ ಬದಲಾಗುತ್ತಾ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿರುವ ಅಂಚೆ ಇಲಾಖೆ ಸ್ತುತ್ಯರ್ಹ ಎಂದು ಶುಭ ಹಾರೈಸಿದರು.

ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ಸ್ವಾಗತಿಸಿ, ಸಹಾಯಕ ಅಂಚೆ ಅಧೀಕ್ಷಕರಾದ ಜಯರಾಮ ಶೆಟ್ಟಿ ವಂದಿಸಿದರು. ಪೂರ್ಣಿಮಾ ಜನಾರ್ದನ್ ಹಾಗೂ ಸವಿತಾ ಶೆಟ್ಟಿಗಾರ್ ನಿರೂಪಿಸಿದರು.

ಉಡುಪಿ ಪ್ರಧಾನ ಅಂಚೆ ಕಚೇರಿಯಿಂದ ಕವಿ‌ಮುದ್ದಣ ಮಾರ್ಗವಾಗಿ ಸ್ವಚ್ಚತಾ ಜಾಥಾ ಮುಂದುವರೆದು ಮತ್ತೆ ಉಡುಪಿ ಪ್ರಧಾನ ಅಂಚೆ ಕಚೇರಿಯಲ್ಲಿ ಸಮಾಪನಗೊಂಡಿತು. ಉಡುಪಿ ಪ್ರಧಾನ ಅಂಚೆ ಕಚೇರಿ, ಮಣಿಪಾಲ ಅಂಚೆ ಕಚೇರಿ, ಕುಂದಾಪುರ ಅಂಚೆ ಕಚೇರಿ, ರೇಲ್ವೇ ಮೇಲ್ ಸರ್ವಿಸ್, ವಿಭಾಗೀಯ ಅಂಚೆ ಕಚೇರಿ ಮತ್ತು ಉಡುಪಿ ಅಂಚೆ ವಿಭಾಗದ ಇತರ ಅಂಚೆ ಕಚೇರಿಯ ಸಿಬ್ಬಂದಿಗಳು ಜಾಥಾದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವರ್ತಮಾನದ ಸಂಕಟಗಳನ್ನು ಮೀರುವ ಶಕ್ತಿ ಸಾಹಿತ್ಯಕ್ಕಿದೆ: ಡಾ. ಸಂತೋಷ್ ಆಳ್ವ

ವಾಮದಪದವು. ಆ.28: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ...

ಗಂಗೊಳ್ಳಿ: ಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

ಗಂಗೊಳ್ಳಿ, ಆ.28: ಶ್ರೀ ನಾರಾಯಣ ಗುರು ಜನ ಸೇವಾ ಬಳಗ ಗಂಗೊಳ್ಳಿ...

ಯಕ್ಷಶಿಕ್ಷಣ ಟ್ರಸ್ಟಿನ ವಿಶ್ವಸ್ತರ ಸಭೆ

ಉಡುಪಿ, ಆ.28: ಯಕ್ಷಶಿಕ್ಷಣ ಟ್ರಸ್ಟಿನ ವಿಶ್ವಸ್ತರ ಸಭೆ ಶುಕ್ರವಾರ ಟ್ರಸ್ಟಿನ ಗೌರವಾಧ್ಯಕ್ಷರು,...

ಕಾರ್ಕಳ: ಮಾಳ ಕೋಟೆ ಬಸದಿಯಲ್ಲಿ 5 ಅಪರೂಪದ ಜಿನ ಶಾಸನಗಳ ಪತ್ತೆ; ಸಂಶೋಧಕ ಶ್ರುತೇಶ್ ಆಚಾರ್ಯರಿಂದ ಅಧ್ಯಯನ

ಕಾರ್ಕಳ, ಆ.27: ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಸ್ವಸ್ತಿ ಶ್ರೀ ಲಲಿತಕೀರ್ತಿ...
error: Content is protected !!