Monday, September 28, 2026
Monday, September 28, 2026

ವರ್ತಮಾನದ ಸಂಕಟಗಳನ್ನು ಮೀರುವ ಶಕ್ತಿ ಸಾಹಿತ್ಯಕ್ಕಿದೆ: ಡಾ. ಸಂತೋಷ್ ಆಳ್ವ

ವರ್ತಮಾನದ ಸಂಕಟಗಳನ್ನು ಮೀರುವ ಶಕ್ತಿ ಸಾಹಿತ್ಯಕ್ಕಿದೆ: ಡಾ. ಸಂತೋಷ್ ಆಳ್ವ

Date:

ವಾಮದಪದವು. ಆ.28: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಶಿವರಾಮ ಕಾರಂತ ಕನ್ನಡ ಸಂಘ ಏರ್ಪಡಿಸಿದ್ದ ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಮೂಹವನ್ನು ಉದ್ದೇಶಿಸಿ ಮಾತನಾಡಿದ ಸಂಪನ್ಮೂಲ ವ್ಯಕ್ತಿಗಳಾದ ಡಾ. ಸಂತೋಷ್ ಆಳ್ವ, ಮಕ್ಕಳಿಗೆ ಭಾಷೆ ಮತ್ತು ಸಾಹಿತ್ಯದ ಮಹತ್ವವನ್ನು ಕುರಿತು ಅರಿವು ಮೂಡಿಸಿದರು. ಭಾಷೆ ಮತ್ತು ಸಾಹಿತ್ಯ ಮನುಷ್ಯನನ್ನು ಜಂಗಮ ಜಗತ್ತಿನ ಇತರ ಜಂತುಗಳಿಗಿಂತ ಭಿನ್ನವಾಗಿಸಿದೆ.‌ ಇಂತಹ ಬಹಳ ದೊಡ್ಡ ಸಂಪನ್ಮೂಲವನ್ನು ಯಂತ್ರ ನಾಗರೀಕತೆಯಲ್ಲಿ ಕಳೆದು ಹೋಗಿ, ಮನುಷ್ಯ ಸಂಬಂಧವನ್ನು ಹಾಳುಗೆಡುತ್ತಿರುವ ನಮ್ಮ ಪೀಳಿಗೆ ಅರ್ಥಮಾಡಿಕೊಂಡು ಆ ವಿನಾಶದಿಂದ ಹೊರಗೆ ಬರುವ ನಿಟ್ಟಿನಲ್ಲಿ ಹಾಗೂ ವರ್ತಮಾನದ ಬಿಕ್ಕಟ್ಟುಗಳನ್ನು ಪರಿಹರಿಸಿಕೊಳ್ಳುವ ದಿಸೆಯಲ್ಲಿ ಸರಿಯಾಗಿ ಬಳಸಿಕೊಳ್ಳಬೇಕು ಕನ್ನಡದ ವಿವೇಕವು ಇದನ್ನೆ ಹೇಳಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಅಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಹೇಶ್ ಕೆ.ಬಿ. ಅವರು ಸಾಹಿತ್ಯದ ಓದು ಸಾಂಪ್ರದಾಯಿಕತೆಯನ್ನು ಬಿಡಿಸಿಕೊಂಡು ತಂತ್ರಜ್ಞಾನದೊಟ್ಟಿಗೆ ಬೆಸೆದು ಹೊಸ ಹಾದಿಯಲ್ಲಿ ಸಾಗಬೇಕಾದ ಅನಿವಾರ್ಯತೆ ಇದ್ದು ಭಾಷೆಯನ್ನು ಆ ನಿಟ್ಟಿನಲ್ಲಿ ದುಡಿಸಿಕೊಳ್ಳುವಬೇಕು ಎಂದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕರಾದ ಡಾ.ವಿಶಾಲ್ ಪಿಂಟೋ, ವಿದ್ಯಾರ್ಥಿ ಕ್ಷೇಮಪಾಲನಾ ವೇದಿಕೆಯ ಮುಖ್ಯ ಸಂಚಾಲಕರಾದ ಪ್ರೊ. ಕೋಕಿಲಾ. ಎಚ್.ಎಸ್. ಹಾಗೂ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ. ಸತೀಶ್ ಗೌಡ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಲೋಹಿತ್‌.ಕೆ.ಸಿ. ಸ್ವಾಗತಿಸಿ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ.‌ಪುಟ್ಟಲಕ್ಷ್ಮಮ್ಮ ವಂದಿಸಿದರು. ದ್ವಿತಿಯ ಬಿ.ಎಸ್.ಡಬ್ಲ್ಯೂ. ವಿದ್ಯಾರ್ಥಿನಿ ನಿತಿಕ್ಷಾ ಹಾಗೂ ತೃತೀಯ ಬಿ.ಕಾಂ. ವಿದ್ಯಾರ್ಥಿನಿ ಹರ್ಷಿತಾ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಟಾಟಾ ಏರಿಸ್ ಬಿಡುಗಡೆ: ಮಾರುತಿ ಡಿಜೈರ್‌ಗೆ ಹೊಸ ಪ್ರತಿಸ್ಪರ್ಧಿಯಾಗಲಿದೆಯೇ ಈ ಕಾರು?

ನವದೆಹಲಿ, ಸೆ.26: ಟಾಟಾ ಮೋಟಾರ್ಸ್ ಭಾರತದಲ್ಲಿ 'ಏರಿಸ್' ಅನ್ನು ರೂ. 5.29...

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನಕ್ಕಾಗಿ ಭಾರತದ ಪ್ರಯತ್ನಕ್ಕೆ ಪೋರ್ಚುಗಲ್ ಮತ್ತು ಮಾರಿಷಸ್ ಬೆಂಬಲ

ನವದೆಹಲಿ, ಸೆ.26: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನ ಪಡೆಯುವ ಭಾರತದ...

ಏಷ್ಯನ್ ಗೇಮ್ಸ್‌ ಕಬಡ್ಡಿ: ಭಾರತಕ್ಕೆ ಅವಳಿ ಚಿನ್ನ

ಯು.ಬಿ.ಎನ್.ಡಿ., ಸೆ.26: ಜಪಾನ್‌ನಲ್ಲಿ ನಡೆಯುತ್ತಿರುವ ಐಚಿ-ನಗೋಯಾ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ...

ಎಸ್.ಐ.ಆರ್ ಆದೇಶ ಸರ್ವಾನುಮತದಿಂದ ಅನುಮೋದನೆ: ಚುನಾವಣಾ ಆಯೋಗ

ನವದೆಹಲಿ, ಸೆ.26: ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಸ್.ಐ.ಆರ್ ಆದೇಶ...
error: Content is protected !!