ಉಡುಪಿ, ಆ.14: ಕರ್ನಾಟಕ ಸರಕಾರದ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ರಿಜ್ವಾನ್ ಅರ್ಷದ್ ಅವರು ಆ. 14 ಮತ್ತು 15 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಆ. 14 ರಂದು ರಾತ್ರಿ ಉಡುಪಿಗೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ. ಆ. 15 ರಂದು ಬೆಳಗ್ಗೆ 7.30 ಕ್ಕೆ ಸರ್ವೀಸ್ ಸ್ಟ್ಯಾಂಡ್‌ನಲ್ಲಿ ಜಿಲ್ಲಾ ಕಾಂಗ್ರೇಸ್ ಸೇವಾದಳದ ವತಿಯಿಂದ ಏರ್ಪಡಿಸಲಾದ ಧ್ವಜಾರೋಹಣ ಕಾರ್ಯಕ್ರಮ, 8 ಗಂಟೆಗೆ ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ಧ್ವಜಾರೋಹಣ, 8.30 ಕ್ಕೆ ಅಜ್ಜರಕಾಡು ಕ್ರೀಡಾಂಗಣದ ಬಳಿಯ ಹುತಾತ್ಮಕ ಸ್ಮಾರಕದಲ್ಲಿ ಹುತಾತ್ಮರಿಗೆ ಗೌರವ ನಮನ, 8.35 ಕ್ಕೆ ಅಜ್ಜರಕಾಡು ಕ್ರೀಡಾಂಗಣದ ಬಳಿ ಬಾಸ್ಕೆಟ್ ಬಾಲ್ ಅಂಗಣ ಶಂಕುಸ್ಥಾಪನಾ ಕಾರ್ಯಕ್ರಮ, 8.45 ಕ್ಕೆ ಅಜ್ಜರಕಾಡು ಕ್ರೀಡಾಂಗಣ ಮೇಲ್ಛಾವಣಿ ಕಾಮಗಾರಿ ಉದ್ಘಾಟನೆ, 9 ಗಂಟೆಗೆ ಅಜ್ಜರಕಾಡು ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮ. 12 ಗಂಟೆಗೆ ಎಲ್.ಐ.ಸಿ ಕಟ್ಟಡದಲ್ಲಿ ಸ್ಥಳೀಯ ಕಾರ್ಯಕ್ರಮ, 12.15 ಕ್ಕೆ ದೊಡ್ಡಣಗುಡ್ಡೆ ಶಿವಳ್ಳಿ ತೋಟಗಾರಿಕಾ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಉಡುಪಿ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿಯ ಇಲ್ಲು ಫುಡ್ಸ್ ಮಸಾಲಾ ಪುಡಿ ಘಟಕ ಉದ್ಘಾಟನೆ, 12.30 ಕ್ಕೆ ಬ್ರಹ್ಮಗಿರಿಯ ನಾಯರ್‌ಕೆರೆ ರಸ್ತೆಯ ಬಳಿ ಜಿಲ್ಲಾ ಪಂಚಾಯತ್ ವತಿಯಿಂದ ಅಕ್ಕ ಕೆಫೆ ಉದ್ಘಾಟನೆ ನೆರವೇರಿಸಿ ನಂತರ ಮಂಗಳೂರಿಗೆ ತೆರಳಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಉಡುಪಿ ಪ್ರವಾಸ ಕಾರ್ಯಕ್ರಮ
ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಉಡುಪಿ ಪ್ರವಾಸ ಕಾರ್ಯಕ್ರಮ
Date:




By
ForthFocus™