ಕಾಪು, ಅ.26: ಕಾಪು ವಿಧಾನಸಭಾ ಕ್ಷೇತ್ರದ ಮಣಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ 70 ಲಕ್ಷ ರೂಪಾಯಿ ಅನುದಾನದ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆ ಅಕ್ಟೋಬರ್ ೨೬ ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.
ಮಣಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮರ್ಣೆ ದಿ ವಿಠರ್ ದಾಸ್ ಭಟ್ ಮನೆಯಿಂದ ಬೀರಬೆಟ್ಟು ಗೋಪಾಲ್ ನಾಯಕ್ ಮನೆ ವರೆಗೆ ರಸ್ತೆ ಅಭಿವೃದ್ಧಿ – 20 ಲಕ್ಷ, ಮರ್ಣೆ ಮುಖ್ಯರಸ್ತೆಯಿಂದ ಸಂಜೀವ ನಾಯಕ್ ಮನೆ ವರೆಗೆ ರಸ್ತೆ ಅಭಿವೃದ್ಧಿ – 20 ಲಕ್ಷ, ದೆಂದೂರು ಗಣೇಶ್ ಶೆಟ್ಟಿ ರಸ್ತೆ ಅಭಿವೃದ್ಧಿ – 20 ಲಕ್ಷ, ಪಟ್ಲ-ಮರ್ಣೆ ಮುಖ್ಯರಸ್ತೆಯಿಂದ ಶ್ರೀನಿವಾಸ್ ನಾಯಕ್ ಮನೆ ತನಕ ರಸ್ತೆ ಅಭಿವೃದ್ಧಿ – 10 ಲಕ್ಷ ಸೇರಿದಂತೆ ಒಟ್ಟು 70 ಲಕ್ಷ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಮಣಿಪುರ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಸಂತೋಷ ಶೆಟ್ಟಿ, ಆಶಾ ಪೂಜಾರಿ, ಪ್ರಜ್ವಲ್ ಹೆಗ್ಡೆ, ಡೆನ್ಸಿಲ್, ವಾಣಿ, ಸುರೇಖಾ, ಪದ್ಮನಾಭ, ಸ್ಥಳೀಯರಾದ ಸೀತಾರಾಮ ಭಟ್, ಕರುಣಾಕರ ಶೆಟ್ಟಿ, ಹರಿದಾಸ್ ಭಟ್, ರವೀಂದ್ರ ಹಾಲ್ದಂಕರ್, ಗಣಪತಿ ನಾಯಕ್, ಮುಂತಾದವರು ಉಪಸ್ಥಿತರಿದ್ದರು.




By
ForthFocus™