Monday, October 26, 2026
Monday, October 26, 2026

ಮಾಹೆಯಲ್ಲಿ ಸುಧಾರಿತ ಬಿಎಸ್‌ಎಲ್‌–3 ಸೌಲಭ್ಯ ಆರಂಭ- ಜೈವಿಕ ಸುರಕ್ಷತೆಯೊಂದಿಗೆ ಸಂಶೋಧನೆ

ಮಾಹೆಯಲ್ಲಿ ಸುಧಾರಿತ ಬಿಎಸ್‌ಎಲ್‌–3 ಸೌಲಭ್ಯ ಆರಂಭ- ಜೈವಿಕ ಸುರಕ್ಷತೆಯೊಂದಿಗೆ ಸಂಶೋಧನೆ

Date:

ಮಣಿಪಾಲ, ಅ.26: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಪರಿಗಣಿತ ವಿಶ್ವವಿದ್ಯಾಲಯವಾಗಿರುವ ಉತ್ಕೃಷ್ಟ ಸಂಸ್ಥೆಯಾಗಿರುವ ಮಾಹೆಯು, ಇತ್ತೀಚೆಗೆ ಅತ್ಯಾಧುನಿಕ ಜೈವಿಕ ಸುರಕ್ಷತಾ ಹಂತ–3 (ಬಿಎಸ್‌ಎಲ್‌–3) ಸೌಲಭ್ಯವನ್ನು ಆರಂಭಿಸಿದ್ದು, ಕಟ್ಟುನಿಟ್ಟಿನ ಜೈವಿಕ ಸುರಕ್ಷತಾ ನಿಯಂತ್ರಣದಡಿ ನಡೆಯುವ ಜೀವವೈದ್ಯಕೀಯ ಸಂಶೋಧನೆ, ಸಾಂಕ್ರಾಮಿಕ ರೋಗಗಳ ಪತ್ತೆ ಹಾಗೂ ಸಾರ್ವಜನಿಕ ಆರೋಗ್ಯ ಸುರಕ್ಷೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಇದು ಮಹತ್ವದ ಮೈಲಿಗಲ್ಲಾಗಿದೆ. ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಅವರು, ಈ ಸೌಲಭ್ಯವನ್ನು ಅಧಿಕೃತವಾಗಿ ಅನಾವರಣಗೊಳಿಸಿದ್ದು. ಈ ಸಾಂಸ್ಥಿಕ ಉಪಕ್ರಮವು ಶೈಕ್ಷಣಿಕ, ಸಂಶೋಧನಾತ್ಮಕ, ಸಾಮಾಜಿಕ- ಈ ಮೂರು ನೆಲೆಗಳಲ್ಲಿ ಉಪಯುಕ್ತವೆನಿಸಲಿದೆ ಎಂದು ಅಭಿಪ್ರಾಯ ಪಟ್ಟರು. ಕೆಎಂಸಿ ಮೆಕ್ರೋಬಯಾಲಜಿ ವಿಭಾಗದ ಪ್ರಾಧ್ಯಾಪಕರಾದ ಡಾ. ಚಿರಂಜಯ್ ಮುಖೋಪಾಧ್ಯಾಯ ಅವರು ಸಂಶೋಧನ ಕ್ಷೇತ್ರದಲ್ಲಿ ಜೈವಿಕ ಸುರಕ್ಷತಾ ಹಂತ–3 (ಬಿಎಸ್‌ಎಲ್‌–3) ರ ಅನ್ವಯ ಸಾಧ್ಯತೆಗಳ ಬಗ್ಗೆ ವಿವರಿಸಿದರು.

ಸುಧಾರಿತ ಸುರಕ್ಷತಾ ನಿಯಂತ್ರಣ ಅಗತ್ಯವಿರುವ ಸೋಂಕುಕಾರಕಗಳ ಕುರಿತು ಸಂಶೋಧನೆ ನಡೆಸಲು ಅನುಕೂಲವಾಗುವಂತೆ ಈ ಬಿಎಸ್‌ಎಲ್‌–3 ಸೌಲಭ್ಯವನ್ನು ವಿನ್ಯಾಸಗೊಳಿಸಲಾಗಿದ್ದು, ವಿಶೇಷ ಮೂಲಸೌಕರ್ಯ, ನಿಯಂತ್ರಿತ ಪ್ರವೇಶ, ತಾಂತ್ರಿಕ ಸುರಕ್ಷತಾ ವ್ಯವಸ್ಥೆಗಳು ಹಾಗೂ ಕಟ್ಟುನಿಟ್ಟಿನ ಜೈವಿಕ ಸುರಕ್ಷತಾ ಕ್ರಮಗಳನ್ನು ಇದು ಒಳಗೊಂಡಿದೆ. ಸಾಂಕ್ರಾಮಿಕ ರೋಗಗಳ ಸಂಶೋಧನೆ, ರೋಗಪತ್ತೆ, ರೋಗಗಳ ನಿಯಂತ್ರಣ ಹಾಗೂ ಸಂಶೋಧನಾ ಫಲಿತಾಂಶಗಳ ಕುರಿತು ವೈದ್ಯಕೀಯ ಕ್ರಮವನ್ನು ಕೈಗೊಳ್ಳುವಲ್ಲಿ ಈ ಸೌಲಭ್ಯ ನೆರವಾಗಲಿದೆ.

ಬಿಎಸ್‌ಎಲ್‌–3 ಸೌಲಭ್ಯಕ್ಕೆ ಸಂಬಂಧಿಸಿ ಆಡಳಿತ ಮತ್ತು ಜೈವಿಕ ಸುರಕ್ಷತಾ ಮೇಲ್ವಿಚಾರಣ ತಂಡವನ್ನು ರಚಿಸಲಾಗಿದ್ದು, ಮಾಹೆಯ ವಿವಿಧ ಘಟಕಗಳ ಪ್ರತಿನಿಧಿಗಳು ಹಾಗೂ ಸಾಂಸ್ಥಿಕ ಜೈವಿಕ ಸುರಕ್ಷತಾ ಸಮಿತಿಯ (ಐಬಿಎಸ್‌ಸಿ) ಸದಸ್ಯರು ಈ ಹೊಸ ತಂಡದಲ್ಲಿದ್ದಾರೆ. ಪ್ರಸ್ತುತ ಮಾಹೆಯಲ್ಲಿ ಆರಂಭಗೊಂಡಿರುವ ಬಿಎಸ್‌ಎಲ್‌–3 ಸೌಲಭ್ಯವು ಮಾರ್ಚ್-2026ರಲ್ಲಿ ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯ (ಡಿಬಿಟಿ) ಜೆನೆಟಿಕ್ ಮ್ಯಾನಿಪ್ಯುಲೇಷನ್ ಪರಿಶೀಲನಾ ಸಮಿತಿಯಿಂದ (ಆರ್‌ಸಿಜಿಎಂ) ಪ್ರಮಾಣೀಕರಣ ಪಡೆದಿದೆ. ಪ್ರಸ್ತುತ ಉಪಕ್ರಮವು ಜೀವವೆದ್ಯಕೀಯ ಸಂಶೋಧನ ಕ್ಷೇತ್ರದಲ್ಲಿ ಸುರಕ್ಷಿತ, ಹೊಣೆಯರಿತ, ಹಾಗೂ ಉನ್ನತ ಗುಣಮಟ್ಟದ ಕ್ರಮಗಳನ್ನು ಅನುಸರಿಸುವ ಮಾಹೆಯ ಬದ್ಧತೆಯ ಪ್ರತೀಕವಾಗಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಗುರ್ಮೆ ಫೌಂಡೇಶನ್: ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ

ಕಾಪು, ಅ.26: ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಸೇವೆಯಲ್ಲಿ 25 ವರ್ಷ...

ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಸಿಎಂ ಸಭೆ

ಬೆಳಗಾವಿ, ಅ.26: ಬೆಳಗಾವಿಯ ಸುವರ್ಣಸೌಧದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಮುಖ್ಯಮಂತ್ರಿ ಡಿ.ಕೆ....
error: Content is protected !!