ಉಡುಪಿ, ಆ.14: ಶ್ರೀ ಲಕ್ಷ್ಮೀ ವೆಂಕಟೇಶ ಕಲಾ ಸೇವಾ ಟ್ರಸ್ಟ್ (ರಿ). ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ, ತೆಂಕಪೇಟೆ, ಉಡುಪಿ. ಇದರ ವತಿಯಿಂದ ಆಗಸ್ಟ್ 20 ರಂದು ಶ್ರೀ ಭುವನೇಂದ್ರ ಮಂಟಪದಲ್ಲಿ ನಡೆಯುವ ‘ಕೊಂಕಣಿ ಭಾಷಾ ರಾಷ್ಟ್ರೀಯ ಮಾನ್ಯತಾ ದೀಸ್ – 2026’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಉಡುಪಿಯ ಎಸ್.ಎಲ್.ವಿ.ಟಿ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.
ವೇದಮೂರ್ತಿ ದಯಾಘನ್ ಭಟ್ ಶ್ರೀ ದೇವರಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ಪ್ರಸಾದವನ್ನು ನೀಡಿ ಶುಭ ಹಾರೈಸಿದರು. ಅರ್ಚಕರಾದ ವೇ. ಮೂ. ವಿನಾಯಕ ಭಟ್, ವೇ. ಮೂ ಗಿರೀಶ್ ಭಟ್, ಶ್ರೀ ಲಕ್ಷ್ಮೀ ವೆಂಕಟೇಶ ಕಲಾ ಸೇವಾ ಟ್ರಸ್ಟ್ ನ ಟ್ರಸ್ಟಿ ಹಾಗೂ ಈ ಕಾರ್ಯಕ್ರಮದ ಉಸ್ತುವಾರಿ ಯು. ದಿನೇಶ್ ಪೈ, ಆಯೋಜನ ಸಮಿತಿಯ ಗುರುನಾಥ್ ರಾವ್, ಶ್ಯಾಮಪ್ರಸಾದ್ ಕುಡ್ವ, ಮಹೇಶ್ ಪೈ, ಹರಿದಾಸ್ ನಾಯಕ್, ಶ್ವೇತ ಸುಧಾ ಪೈ ಪದ್ಮಾ ಕಿಣಿ, ಪದ್ಮಾ ಮಹೇಶ್ ಪೈ, ಚಿತ್ರಕಲಾ ಬಾಳಿಗಾ ಮುಂತಾದವರು ಉಪಸ್ಥಿತರಿದ್ದರು.




By
ForthFocus™