Sunday, October 25, 2026
Sunday, October 25, 2026

ಏಷ್ಯನ್ ಪ್ಯಾರಾ ಕ್ರೀಡಾಕೂಟ: 114 ಪದಕಗಳೊಂದಿಗೆ ಭಾರತದ ಭರ್ಜರಿ ಪ್ರದರ್ಶನ

ಏಷ್ಯನ್ ಪ್ಯಾರಾ ಕ್ರೀಡಾಕೂಟ: 114 ಪದಕಗಳೊಂದಿಗೆ ಭಾರತದ ಭರ್ಜರಿ ಪ್ರದರ್ಶನ

Date:

ಜಪಾನ್‌ನ ನಗೋಯಾದಲ್ಲಿರುವ ಮಿಜುಹೋ ಪಾರ್ಕ್ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ನಡೆದ 2026 ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ 45 ದೇಶಗಳು ಮತ್ತು ಪ್ರದೇಶಗಳಿಂದ ಸುಮಾರು 4,000 ಕ್ರೀಡಾಪಟುಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಭಾರತವು ಈ ಕ್ರೀಡಾಕೂಟದಲ್ಲಿ ಒಟ್ಟು 114 ಪದಕಗಳನ್ನು (30 ಚಿನ್ನ, 35 ಬೆಳ್ಳಿ ಮತ್ತು 49 ಕಂಚು) ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದೆ. ಇದು 2023ರಲ್ಲಿ ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಭಾರತ ಗಳಿಸಿದ್ದ 108 ಪದಕಗಳ ಹಿಂದಿನ ದಾಖಲೆಯನ್ನು ಮೀರಿಸಿದೆ.

ಪ್ಯಾರಾ ಅಥ್ಲೆಟಿಕ್ಸ್ ವಿಭಾಗವು ಭಾರತಕ್ಕೆ ಅತಿ ಹೆಚ್ಚು ಪದಕಗಳನ್ನು ತಂದುಕೊಟ್ಟಿದ್ದು, ಇದರಲ್ಲಿ 22 ಚಿನ್ನ, 19 ಬೆಳ್ಳಿ ಮತ್ತು 24 ಕಂಚು ಸೇರಿದಂತೆ ಒಟ್ಟು 65 ಪದಕಗಳು ಸೇರಿವೆ. ಪ್ಯಾರಾ ಬ್ಯಾಡ್ಮಿಂಟನ್ ವಿಭಾಗದಲ್ಲಿ 3 ಚಿನ್ನ, 5 ಬೆಳ್ಳಿ ಮತ್ತು 8 ಕಂಚು ಸೇರಿದಂತೆ ಒಟ್ಟು 16 ಪದಕಗಳು ಲಭಿಸಿವೆ. ಇದಲ್ಲದೆ, ಪ್ಯಾರಾ ಈಜು (ಸ್ವಿಮ್ಮಿಂಗ್) ವಿಭಾಗದಲ್ಲಿ 11, ಪ್ಯಾರಾ ಟೇಬಲ್ ಟೆನ್ನಿಸ್‌ನಲ್ಲಿ 7, ಪ್ಯಾರಾ ಆರ್ಚರಿಯಲ್ಲಿ 6, ಪ್ಯಾರಾ ಶೂಟಿಂಗ್‌ನಲ್ಲಿ 5, ಹಾಗೂ ಪ್ಯಾರಾ ಜೂಡೋ ಮತ್ತು ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ತಲಾ 2 ಪದಕಗಳನ್ನು ಭಾರತ ಗೆದ್ದುಕೊಂಡಿದೆ. ಏಷ್ಯನ್ ಪ್ಯಾರಾ ಕ್ರೀಡಾಕೂಟದ ಆರನೇ ಆವೃತ್ತಿಯು 2030ರಲ್ಲಿ ದೋಹಾದಲ್ಲಿ ನಡೆಯಲಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಫ್ರೆಂಚ್ ಓಪನ್: ಪಿ.ವಿ. ಸಿಂಧು ರನ್ನರ್-ಅಪ್

ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ, ಭಾರತದ ಎರಡು...

ಆರ್‌ಬಿಐ ಡೇಟಾ ಸೆಂಟರ್ ಮತ್ತು ಸೈಬರ್‌ ಭದ್ರತಾ ತರಬೇತಿ ಸಂಸ್ಥೆ ಉದ್ಘಾಟಿಸಿದ ಪ್ರಧಾನಿ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು (ಭಾನುವಾರ) ಒಡಿಶಾದ ಭುವನೇಶ್ವರದ...

ನ.1: ಗುಜ್ಜಾಡಿ ನಾಯಕವಾಡಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಗುಜ್ಜಾಡಿ, ಅ.25: ಕರ್ನಾಟಕ ಸರಕಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ಆಯುಷ್...

ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ಅನ್ಯಾಯವಾದರೆ ಸೂಕ್ತ ಕ್ರಮ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಬೆಂಗಳೂರು, ಅ.25: ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ಅನ್ಯಾಯವಾಗುತ್ತಿದೆ ಎಂಬ...
error: Content is protected !!