Tuesday, October 27, 2026
Tuesday, October 27, 2026

ಕ್ರಿಯೇಟಿವ್ ಪಿಯು ಕಾಲೇಜು: ಶಿಕ್ಷಕ-ಪಾಲಕರ ಸಭೆ

ಕ್ರಿಯೇಟಿವ್ ಪಿಯು ಕಾಲೇಜು: ಶಿಕ್ಷಕ-ಪಾಲಕರ ಸಭೆ

Date:

ಕಾರ್ಕಳ, ಅ.26: ವಿದ್ಯಾರ್ಥಿಗಳ ಶೈಕ್ಷಣಿಕ ಯಶಸ್ಸಿನ ಹಾದಿಗೆ ಸೂಕ್ತ ಮಾರ್ಗದರ್ಶನ ಮತ್ತು ಸಮಯಪರಿಪಾಲನೆಯ ಉದ್ದೇಶದಿಂದ ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪಿಸಿಎಂಬಿ ವಿಭಾಗದ ವಿದ್ಯಾರ್ಥಿಗಳ ಶಿಕ್ಷಕ- ಪಾಲಕರ ಸಭೆ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ಅಕ್ಟೋಬರ್ 25 ರಂದು ನಡೆಯಿತು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್. ಮಾತನಾಅಡುತ್ತಾ, ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ತಕ್ಕಂತೆ ಉನ್ನತ ಶಿಕ್ಷಣದ ಆಯ್ಕೆಗಳನ್ನು ಗುರುತಿಸಿಕೊಂಡು ತಮ್ಮ ಗುರಿ ಸಾಧನೆಯತ್ತ ಆತ್ಮವಿಶ್ವಾಸದಿಂದ ಹೆಜ್ಜೆ ಇಟ್ಟು ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು. ಕಾಲೇಜಿನ ಸಹಸಂಸ್ಥಾಪಕರು ಹಾಗೂ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ರವರು, ಇಂದಿನ ಆಧುನಿಕ ಕಾಲಘಟ್ಟದಲ್ಲಿ ಮಕ್ಕಳ ಮನಸ್ಥಿತಿಯ ಬಗ್ಗೆ ನಾವು ಅರಿತುಕೊಳ್ಳದೆ ಹೋದರೆ ನಮ್ಮ ಉದ್ದೇಶ ಈಡೇರದು ಮಾತ್ರವಲ್ಲದೆ ವಿದ್ಯಾರ್ಥಿಗಳು ತಮ್ಮ ಕನಸನ್ನು ಈಡೇರಿಸಿಕೊಳ್ಳುವಲ್ಲಿ ಗುರು ಮತ್ತು ತಂದೆ ತಾಯಿಯ ಪಾತ್ರ ಪ್ರಮುಖವಾದುದು ಎಂದು ತಿಳಿಸಿದರು.

ಸಹ ಸಂಸ್ಥಾಪಕರಾದ ಗಣನಾಥ ಶೆಟ್ಟಿ ಬಿ. ರವರು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾದರೆ ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಅತಿ ಮುಖ್ಯ ಇದರ ಜೊತೆಗೆ ಗುರು ಹಾಗೂ ಪೋಷಕರು ಶ್ರಮಿಸಿದ್ದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ತಿಳಿಸಿದರು. ಸಹ ಸಂಸ್ಥಾಪಕರಾದ ಗಣಪತಿ ಭಟ್ ಕೆ.ಎಸ್. ರವರು, ಸ್ಪರ್ಧಾತ್ಮಕ ಯುಗದಲ್ಲಿ ಅಂಕಗಳ ಗಳಿಕೆಯೊಂದೇ ಯಶಸ್ಸಿನ ಮಾನದಂಡವಲ್ಲ ಸಂವಹನ ಕೌಶಲ್ಯ, ಆತ್ಮವಿಶ್ವಾಸ, ನಾಯಕತ್ವ ಗುಣ, ಸಮಸ್ಯೆ ಪರಿಹರಿಸುವ ಸಾಮರ್ಥ್ಯ ಮತ್ತು ವೈಜ್ಞಾನಿಕ ಮನೋಭಾವವನ್ನು ವಿದ್ಯಾರ್ಥಿಗಳು ಹೊಂದುವುದು ಅತಿ ಮುಖ್ಯ ಎಂದು ಪೋಷಕರನ್ನು ಉದ್ದೇಶಿಸಿ ಮಾತುಗಳನ್ನಾಡಿದರು.

ಕನ್ನಡ ವಿಭಾಗದ ಉಪನ್ಯಾಸಕರಾದ ವರುಣ್ ವಾಲಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಆಂಗ್ಲ ಭಾಷ ಉಪನ್ಯಾಸಕರಾದ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು. ಪೋಷಕ ವರ್ಗದವರು, ಬೋಧಕ ಬೋಧಕೇತರ ವೃಂದದವರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮೂರನೇ ಟಿ20: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 6 ವಿಕೆಟ್‌ಗಳ ಜಯ

ಯು.ಬಿ.ಎನ್.ಡಿ., ಅ.27: ವೆಲ್ಲಿಂಗ್ಟನ್‌ನಲ್ಲಿ ಮಂಗಳವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ, ಆತಿಥೇಯ...

ಅಂತಿಮ ಮತದಾರರ ಪಟ್ಟಿಯ ಸಿ.ಡಿ ಹಸ್ತಾಂತರ

ಮಣಿಪಾಲ, ಅ.27: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ – 2026...

ಅ. 30: ನೇರ ಸಂದರ್ಶನ

ಉಡುಪಿ, ಅ.27: ಮಂಗಳೂರು ಫರ‍್ಸ್, ಉಡುಪಿ ನೀಯರ್ ಕಲ್ಯಾಣ್‌ಪುರ ಉಪ್ಪೂರು ಬಿಡ್ಜ್,...

ಕ್ರಿಯೇಟಿವ್ ಪದವಿಪೂರ್ವ ಕಾಲೇಜು: ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ ಉದ್ಘಾಟನೆ

ಕಾರ್ಕಳ, ಅ.27: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ರಾಷ್ಟ್ರೀಯ ಸೇವಾ ಯೋಜನೆ,...
error: Content is protected !!