Saturday, August 15, 2026
Saturday, August 15, 2026

ಪುಸ್ತಕಗಳನ್ನು ಓದಿ ಜ್ಞಾನ ಸಂಪಾದನೆ ಹೆಚ್ಚಿಸಿ: ಡಾ. ಎಲ್ಲಮ್ಮ

ಪುಸ್ತಕಗಳನ್ನು ಓದಿ ಜ್ಞಾನ ಸಂಪಾದನೆ ಹೆಚ್ಚಿಸಿ: ಡಾ. ಎಲ್ಲಮ್ಮ

Date:

ಉಡುಪಿ, ಆ.12: ಜ್ಞಾನ ಎಂಬುದು ಒಂದು ಶಕ್ತಿ, ಪುಸ್ತಕಗಳನ್ನು ಓದುವುದರಿಂದ ನಾವು ಜ್ಞಾನ ಸಂಪಾದನೆ ಮಾಡಬಹುದು. ಓದುವಿಕೆ ನಮ್ಮ ಭಾಷಾ ಕೌಶಲ್ಯ ಮತ್ತು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುತ್ತದೆ. ಎಲ್ಲರೂ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಎಲ್ಲಮ್ಮ ಹೇಳಿದರು. ಅವರು ಬುಧವಾರ ಅಜ್ಜರಕಾಡು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ನಗರ ಕೇಂದ್ರ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆಯ ನಿಮಿತ್ತ ನಡೆದ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ಸ್ವಾತಂತ್ರ‍್ಯ ಹೋರಾಟದಲ್ಲಿ ಪುಸ್ತಕಗಳು ಮತ್ತು ಲೇಖನಗಳು ಅತ್ಯಂತ ಪ್ರಮುಖ ಪಾತ್ರ ವಹಿಸಿವೆ. ಮಹಾನ್ ಕ್ರಾಂತಿಕಾರಿಗಳ ಲೇಖನಗಳನ್ನು ಓದಿ ಪ್ರಭಾವಿತರಾಗಿ ಅದೆಷ್ಟೋ ಮಂದಿ ಸ್ವಾತಂತ್ರ ಹೋರಾಟದಲ್ಲಿ ಧುಮುಕಿದ್ದಾರೆ. ಪುಸ್ತಕಗಳು ಸಮಾಜ ಪರಿವರ್ತನೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಸಾರ್ವಜನಿಕರು ಕೂಡ ಗ್ರಂಥಗಳನ್ನು ಬರೆಯಬೇಕು ಅವುಗಳನ್ನು ವಿದ್ಯಾರ್ಥಿಗಳು ಓದುವಂತಾಗಬೇಕು ಎಂದರು.

ಪುಸ್ತಕಗಳು ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಪುಸ್ತಕಗಳನ್ನು ಓದುವಾಗ ನಾವು ಅದರ ಲೇಖಕನ ಜೊತೆ ಒಂದು ಸಂಬಂಧವನ್ನು ಬೆಳೆಸಿಕೊಳ್ಳುತ್ತೇವೆ. ನಮ್ಮ ಹೆತ್ತವರು ಸ್ನೇಹಿತರು ಅಥವಾ ಶಿಕ್ಷಕರ ಜೊತೆ ಹಂಚಿಕೊಳ್ಳಲಾಗದಂತಹ ಭಾವನೆಗಳನ್ನ ಪುಸ್ತಕಗಳ ಮೂಲಕ ಹಂಚಿಕೊಳ್ಳಬಹುದು. ಪುಸ್ತಕಗಳಲ್ಲಿ ಲೇಖಕನ ಉದ್ದೇಶ ಏನು ಎನ್ನುವುದು ಸ್ಪಷ್ಟವಾಗುತ್ತದೆ. ಇಲ್ಲಿ ಪಡೆದ ಅನುಭವವನ್ನು ಜೀವನದಲ್ಲಿ ಅಳವಡಿಸಿ ದಕ್ಷ ಆಡಳಿತ ನೀಡಬಹುದು. ಜಿಲ್ಲೆಯಲ್ಲಿ ಸುಸಜ್ಜಿತ ಕೇಂದ್ರ ಗ್ರಂಥಾಲಯ ಇರುವುದರಿಂದಾಗಿ ಬಹಳಷ್ಟು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಅನುಕೂಲವಾಗುತ್ತಿದೆ ಎಂದು ವಿದ್ಯಾರ್ಥಿನಿ ನಯನ ತಮ್ಮ ಅನುಭವ ಹಂಚಿಕೊಂಡರು. ಸರಕಾರಿ ಇಲಾಖೆಗಳಲ್ಲಿ ಲಂಚ ಇಲ್ಲದೆ ಕಾರ್ಯನಿರ್ವಹಿಸುವ ಮುಕ್ತ ವಿಭಾಗವಿದ್ದರೆ ಅದು ಗ್ರಂಥಾಲಯ. ಬ್ಯಾಂಕನ್ನು ತೆರೆದಿಟ್ಟರೆ ಕಳ್ಳರು ನುಗ್ಗಿ ಹಣವನ್ನು ದೋಚುತ್ತಾರೆ ಆದರೆ ಗ್ರಂಥಾಲಯವನ್ನು ತೆರೆದಿಟ್ಟರೆ ಕಳ್ಳರು ಬರುವುದಿಲ್ಲ ಏಕೆಂದರೆ ಇಲ್ಲಿ ಕಳ್ಳತನ ಮಾಡಲು ಪುಸ್ತಕಗಳನ್ನು ಬಿಟ್ಟರೆ ಬೇರೇನೂ ಇಲ್ಲ. ಕ್ರೀಡೆ ಮತ್ತು ಓದಿನಲ್ಲಿ ಜನರಿಗೆ ಆಸಕ್ತಿ ಕಡಿಮೆಯಾಗಿದ್ದು ಗ್ರಂಥಾಲಯಕ್ಕೆ ಬರುವ ಜನರ ಸಂಖ್ಯೆ ಕ್ಷೀಣಿಸಿದೆ. ಗ್ರಂಥಾಲಯಗಳು ಹೆಚ್ಚು ಜನರನ್ನು ಆಕರ್ಷಿಸಲು ಕಾರ್ಯನಿರ್ವಹಿಸಬೇಕು ಎಂದು ಹಿರಿಯ ಓದುಗರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿ ಸುರೇಖಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಡಾ. ಎಸ್ ಆರ್ ರಂಗನಾಥ್ ಅವರ ಜನ್ಮ ದಿನಾಚರಣೆಯನ್ನು ರಾಜ್ಯದಾದ್ಯಂತ ಗ್ರಂಥಪಾಲಕರ ದಿನವಾಗಿ ಆಚರಿಸಲಾಗುತ್ತಿದೆ. ಆಗಸ್ಟ್ 14 ರಂದು ಗ್ರಂಥಾಲಯದಲ್ಲಿ ನಮ್ಮ ಸಾಹಿತಿ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು. ನಗರ ಕೇಂದ್ರ ಗ್ರಂಥಾಲಯದ ಗ್ರಂಥ ಪಾಲಕಿ ರಂಜಿತ ವಂದಿಸಿದರು. ಜಿಲ್ಲಾ ಕೇಂದ್ರದ ಗ್ರಂಥ ಪಾಲಕಿ ವನಿತಾ, ಗ್ರಂಥಾಲಯದ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರೂ. 75 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ಶೀಂಬ್ರ ದೇವಸ್ಥಾನದ ಸಂಪರ್ಕ ರಸ್ತೆ ಕಾಮಗಾರಿ ಉದ್ಘಾಟನೆ

ಉಡುಪಿ, ಆ.14: ಮೂಡುಪೆರಂಪಳ್ಳಿ ವಾರ್ಡಿನ ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಸುಮಾರು 75...

ಮುಜರಾಯಿ ದೇವಸ್ಥಾನಗಳ ಅರ್ಚಕರು ಹಾಗೂ ಸಿಬ್ಬಂದಿಗಳ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಮನವಿ

ಉಡುಪಿ, ಆ.14: ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು,...

ಕೊಂಕಣಿ ಭಾಷಾ ರಾಷ್ಟ್ರೀಯ ಮಾನ್ಯತಾ ದಿನ 2026: ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ, ಆ.14: ಶ್ರೀ ಲಕ್ಷ್ಮೀ ವೆಂಕಟೇಶ ಕಲಾ ಸೇವಾ ಟ್ರಸ್ಟ್ (ರಿ)....
error: Content is protected !!