Thursday, September 24, 2026
Thursday, September 24, 2026

ಮೊಬೈಲ್ ಗೀಳಿನಿಂದ ಹೊರಬನ್ನಿ: ಸುಚಿತ್ ಕೋಟ್ಯಾನ್

ಮೊಬೈಲ್ ಗೀಳಿನಿಂದ ಹೊರಬನ್ನಿ: ಸುಚಿತ್ ಕೋಟ್ಯಾನ್

Date:

ಕಾರ್ಕಳ, ಆ.2: ಇಂದು ಜನರಲ್ಲಿ ಮೊಬೈಲ್ ವೀಕ್ಷಣೆಯ ಮಟ್ಟ ಹೆಚ್ಚಾಗಿ, ಅನಾರೋಗ್ಯಕರ ಮನಸ್ಥಿತಿ ಉಂಟಾಗಿದೆ. ಇದರಿಂದ ಹೊರಬರಲು ಹವ್ಯಾಸಗಳು, ವ್ಯಾಯಾಮ, ಸಂಘ ಜೀವನದ ಜೊತೆಗೆ ಸಕಾರಾತ್ಮಕ ಜೀವನ ಶೈಲಿ ನಮ್ಮಲ್ಲಿದ್ದರೆ ಆರೋಗ್ಯಕರ ಬದುಕು ಸಾಧ್ಯ ಎಂದು ಎಂ.ಜಿ.ಎಂ ಕಾಲೇಜಿನ ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥ ಸುಚಿತ್ ಕೋಟ್ಯಾನ್ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ಆಯೋಜಿಸಿದ ‘ಡೂಮ್ ಸ್ಕ್ರೋಲಿಂಗ್ ಟು ಡೀಪ್ ಫೋಕಸ್’ ಎಂಬ ವಿಷಯದ ಕುರಿತು ನಡೆದ ಕಾರ್ಯಾಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು.

ಉಪಪ್ರಾಂಶುಪಾಲರಾದ ಸಾಹಿತ್ಯ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಸುಮಿತ್ರಾ, ಎನ್.ಸಿ.ಸಿ ಅಧಿಕಾರಿ ಲೆ. ಮಂಜುನಾಥ್ ಮುದೂರು, ಎನ್.ಎಸ್ ಎಸ್ ಉಪಸಂಯೋಜನಾಧಿಕಾರಿ ಪ್ರಸಾದ್ ಆಚಾರ್ಯ, ದೈ.ಶಿ.ನಿರ್ದೇಶಕಿ ಸೌಜನ್ಯ ಹೆಗ್ಡೆ ಹಾಗೂ ಎನ್ ಎಸ್.ಎಸ್ ನಾಯಕಿ ಅನ್ವಿತಾ ಶೆಟ್ಟಿ ಉಪಸ್ಥಿತರಿದ್ದರು. ಎನ್.ಎಸ್.ಎಸ್ ನಾಯಕ ಧನುಷ್ ಚೌಟ ಕಾರ್ಯಕ್ರಮ ನಿರೂಪಿಸಿ, ಶ್ರೀಕರ್ ಭಟ್ ಸ್ವಾಗತಿಸಿ, ಅಧ್ವೆತ್ ಸಾಲ್ಯಾನ್ ಅತಿಥಿಯನ್ನು ಪರಿಚಯಿಸಿ ಆಶ್ಲೇಷ್ ಪ್ರಭು ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಂದಾಪುರದ ಇಂಪನಾ ಆರ್. ಅವರಿಗೆ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಕುಂದಾಪುರ, ಸೆ.22: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ...

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರಕ್ಕೆ ಶೈಕ್ಷಣಿಕ ಭೇಟಿ

ಕುಂದಾಪುರ, ಸೆ.22: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು,...

ಎನ್ಎಸ್ಎಸ್ ಸ್ವಯಂಸೇವಕರಿಂದ ತ್ರಾಸಿ ಬೀಚ್ ಕ್ಲೀನಿಂಗ್

ಕುಂದಾಪುರ, ಸೆ.22: ಅಂತಾರಾಷ್ಟ್ರೀಯ ಕೊಸ್ಟಲ್ ಕ್ಲೀನ್ ಆಫ್ ಡೇ ಆಚರಣೆ ಪ್ರಯುಕ್ತ...
error: Content is protected !!