Sunday, October 25, 2026
Sunday, October 25, 2026

ಗ್ರಾಮೀಣ ಕ್ರೀಡೆಗಳನ್ನು ಉಳಿಸುವಲ್ಲಿ ಪಂಚವರ್ಣ ಕಾರ್ಯ ಶ್ಲಾಘನೀಯ: ಶ್ರೀಕಾಂತ್ ಶೆಣೈ

ಗ್ರಾಮೀಣ ಕ್ರೀಡೆಗಳನ್ನು ಉಳಿಸುವಲ್ಲಿ ಪಂಚವರ್ಣ ಕಾರ್ಯ ಶ್ಲಾಘನೀಯ: ಶ್ರೀಕಾಂತ್ ಶೆಣೈ

Date:

ಕೋಟ, ಆ.2: ಪಂಚವರ್ಣ ಮಹಿಳಾ ಮಂಡಲದ ಆಸಾಡಿ ಒಡ್ರ್ ಕಾರ್ಯಕ್ರಮದ ಮೂಲಕ ಗ್ರಾಮೀಣ ಕ್ರೀಡೆಗಳನ್ನು ಮತ್ತೆ ಬೆಳಕಿಗೆ ತರುವ ಅಥವಾ ಅದನ್ನು ಉಳಿಸಿ ಬೆಳೆಸುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಕೋಟದ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ ಹೇಳಿದರು. ಅಗಸ್ಟ್ 9 ರಂದು ಕೋಟದ ಮಣೂರಿನಲ್ಲಿ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲದ ಮಾರ್ಗದರ್ಶನದಲ್ಲಿ ನಡೆಯಲಿರುವ ಆಸಾಡಿ ಒಡ್ರ್ ಕಾರ್ಯಕ್ರಮದ ಅಂಗವಾಗಿ ಮಣೂರು ರಾಜಲಕ್ಷ್ಮೀ ಸಭಾಂಗಣದಲ್ಲಿ ಹಮ್ಮಿಕೊಂಡ ಗ್ರಾಮೀಣ ಕ್ರೀಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೋಟ ರೈತ ಧ್ವನಿ ಸಂಘದ ಅಧ್ಯಕ್ಷ ಎಂ ಜಯರಾಮ ಶೆಟ್ಟಿ ಮಾತನಾಡಿ ಕುಂದಾಪ್ರ ಭಾಷೆ ಆಸಾಡಿ ತಿಂಗಳ ಆಚರಣೆಗಳು ನಮ್ಮ ಜೀವನ ಪರಿಭಾಷೆಗಳಲ್ಲೊಂದು. ಇಂತಹ ಕಾರ್ಯಕ್ರಮಗಳ ಮೂಲಕ ಭಾಷೆ, ಜೀವನ ಸಂಸ್ಕೃತಿ ಮತ್ತಷ್ಟು ಗಟ್ಟಿಯಾಗಲಿದೆ ಎಂದರು. ಆಸಾಡಿ ಗ್ರಾಮ್ಯ ಕ್ರೀಡೆ ಹಿಡಿಕಡ್ಡಿ ನೇಯುವ ಮೂಲಕ ಕೋಟತಟ್ಟು ಗ್ರಾಮ ಪಂಚಾಯತ್ ಕಾರ್ಯದರ್ಶಿ ಸುಮತಿ ಅಂಚನ್ ಅನಾವರಣಗೊಳಿಸಿದರು. ಮುಂಬೈ ಒಎನ್ ಜಿಸಿ ನಿವೃತ್ತ ಅಧಿಕಾರಿ ಬನ್ನಾಡಿ ನಾರಾಯಣ ಆಚಾರ್ ಹಲಸಿನ ಕಡ್ಬಿ ಕೊಟ್ಟೆ ಕಟ್ಟುವುದಕ್ಕೆ ಚಾಲನೆ ನೀಡಿದರು.

ಅಧ್ಯಕ್ಷತೆಯನ್ನು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ವಹಿಸಿದ್ದರು. ಸ್ನೇಹಕೂಟ ಅಧ್ಯಕ್ಷೆ ಭಾರತಿ ವಿ ಮಯ್ಯ, ಪಂಚವರ್ಣದ ಗೌರವ ಸಲಹೆಗಾರ ವಿಷ್ಣುಮೂರ್ತಿ ಮಯ್ಯ, ಪಂಚವರ್ಣದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಅಧ್ಯಕ್ಷ ಮನೋಹರ್ ಪೂಜಾರಿ ಉಪಸ್ಥಿತರಿದ್ದರು. ಕಲಾವತಿ ಅಶೋಕ್ ಪ್ರಾಸ್ರಾವಿಕವಾಗಿ ಮಾತನಾಡಿದರು. ವಸಂತಿ ಹಂದಟ್ಟು ಸ್ವಾಗತಿಸಿ, ವೀಣಾ ಪ್ರಕಾಶ್ ಪೂಜಾರಿ ವಂದಿಸಿದ. ಸುಜಾತ ಬಾಯರಿ ನಿರೂಪಿಸಿದರು. ಕುಂದಾಪ್ರ ಭಾಷೆ ಬದ್ಕಿನ ಕ್ರೀಡೆಗಳಾದ ಗುಡ್ನಾ ಆಟ, ಹಲಸಿನ ಕಡ್ಬಿ ಕೊಟ್ಟೆ ಕಟ್ಟುವುದು, ಹಿಡಿಕಡ್ಡಿ ನೇಯುವುದು, ಹಗ್ಗ ಜಗ್ಗಾಟ, ಸಂಗೀತ ಕುರ್ಚಿ ಸೇರಿದಂತೆ ಹಲವು ಗ್ರಾಮ್ಯ ಕ್ರೀಡೆಗಳು ಗಮನ ಸೆಳೆದವು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನ.1: ಗುಜ್ಜಾಡಿ ನಾಯಕವಾಡಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಗುಜ್ಜಾಡಿ, ಅ.25: ಕರ್ನಾಟಕ ಸರಕಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ಆಯುಷ್...

ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ಅನ್ಯಾಯವಾದರೆ ಸೂಕ್ತ ಕ್ರಮ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಬೆಂಗಳೂರು, ಅ.25: ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ಅನ್ಯಾಯವಾಗುತ್ತಿದೆ ಎಂಬ...

ನ.1: ಕಾಪು ಶ್ರೀ ಸುಧೀಂದ್ರ ಆಯುರ್ ಕ್ಲಿನಿಕ್ ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕಾಪು, ಅ.25: ಕಾಪು ಪರಿಸರದ ಜನತೆಗೆ ಆರೋಗ್ಯ ಸೇವೆ ಸಲ್ಲಿಸುತ್ತಿರುವ ಶ್ರೀ...
error: Content is protected !!