ಉಡುಪಿ, ಜು.26: ಸುಹಾಸಂ, ಉಡುಪಿ ಸಂಸ್ಥೆಯ ವತಿಯಿಂದ ಉಡುಪಿ ಪರಿಸರದ ಅತ್ಯಂತ ಸುಮಧುರ ಹಾಡುಗಾರರ ತಂಡ ‘ನಿನಾದನ’ ಪ್ರಸ್ತುತಪಡಿಸುವ ಸಂಗೀತಧಾರಾ’ ಕಾರ್ಯಕ್ರಮ ಶನಿವಾರ ಸಂಜೆ ಕಿದಿಯೂರು ಹೋಟೆಲ್‌ನ ಮಾಧವ ಕೃಷ್ಣ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷೆ ಸಂಧ್ಯಾ ಶೆಣೈ ಮಾತನಾಡಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸ್ಸಿಗೆ ಮುದ ನೀಡುತ್ತದೆ. ಮುಂದಿನ ದಿನಗಳಲ್ಲೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಅಲ್ಲದೆ ಎಲ್ಲರ ಸಹಕಾರವನ್ನು ಯಾಚಿಸಿದರು.
ನಿನಾದನ ಸಂಸ್ಥೆಯ ಸಂಸ್ಥಾಪಕಿ ವಿದ್ಯಾರಾಣಿ ಹಾಗೂ ಉದಯ್ ಕುಮಾರ್ ನಾಯಕ್ ರವರನ್ನು ಅಭಿನಂದಿಸಿ ಗೌರವಿಸಲಾಯಿತು. ರಾಮಚಂದ್ರ ರಾವ್ ಹಾಗೂ ಸಿಎಸ್ ರಾವ್, ಕೃಷ್ಣಮೂರ್ತಿ ರಾವ್ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಮುರಳೀಧರ ಕೆ ಸ್ವಾಗತಿಸಿದರು. ಖಜಾಂಚಿ ಸದಾಶಿವ ರಾವ್ ವಂದಿಸಿದರು. ವಿದುಷಿ ಸರೋಜಾ ಆಚಾರ್ಯ ಪ್ರಾರ್ಥಿಸಿದರು. ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ನಿರೂಪಿಸಿದರು.




By
ForthFocus™