Friday, September 25, 2026
Friday, September 25, 2026

ಶ್ರೀ ಕ್ಷೇತ್ರ ಶಂಕರಪುರ: ಶ್ರೀ ಸಾಯಿ ಈಶ್ವರ್ ಟಿವಿ ಪುನರ್ ಲೋಕಾರ್ಪಣೆ; ತ್ರಿಶಕ್ತಿ ಅಭಿಯಾನ

ಶ್ರೀ ಕ್ಷೇತ್ರ ಶಂಕರಪುರ: ಶ್ರೀ ಸಾಯಿ ಈಶ್ವರ್ ಟಿವಿ ಪುನರ್ ಲೋಕಾರ್ಪಣೆ; ತ್ರಿಶಕ್ತಿ ಅಭಿಯಾನ

Date:

ಕಟಪಾಡಿ, ಜು.26: ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದ ವತಿಯಿಂದ ಆಟಿದ ಒಣಸ್ ಗುರೂಜಿನೊಟ್ಟೊಗು ಕಾರ್ಯಕ್ರಮ ನಡೆಯಿತು. ಶ್ರೀ ಸಾಯಿ ಈಶ್ವರ್ ಟಿವಿ ಮಾಧ್ಯಮದ ಪುನರ್ ಲೋಕಾರ್ಪಣೆ ಮತ್ತು ತ್ರಿಶಕ್ತಿ ಅಭಿಯಾನ ಉದ್ಘಾಟನೆ ನಡೆಯಿತು. ಶ್ರೀ ಸಾಯಿ ಈಶ್ವರ್ ಗುರೂಜಿ ಮಾತನಾಡುತ್ತಾ, ಎಲ್ಲಕ್ಕಿಂತ ಮಿಗಿಲಾದದ್ದು ದೇಶಾಭಿಮಾನ ದೇಶವಿದ್ದರೆ ಮಾತ್ರ ನಾವೆಲ್ಲ ಹೀಗಾಗಿ ದೇಶದ ಹಿತಕ್ಕೆ ವಿರೋಧವಾಗಿ ನಡೆದುಕೊಳ್ಳುವುದು ಅಪರಾಧ. ಆಟಿಯ ತಿಂಗಳು ನಮ್ಮ ಪೂರ್ವಜರಿಗೆ ಬಹಳ ಕಷ್ಟದ ಸಮಯವಾಗಿತ್ತು, ಈ ಸಂದರ್ಭದಲ್ಲಿ ಅವರೆಲ್ಲರೂ ಕೂಡ ಸೊಪ್ಪು ತರಕಾರಿ ಗೆಡ್ಡೆ ಗೆಣಸುಗಳನ್ನು ತಿಂದು ಜೀವನ ಸಾಗಿಸುತ್ತಿದ್ದರು. ಆದರೆ ಇಂದು ಈ ಪರಿಸ್ಥಿತಿ ಇಲ್ಲ ನಮ್ಮ ಹಿರಿಯರು ನೀಡಿದ ಅಪೂರ್ವವಾದ ಜೀವನ ಪದ್ಧತಿಯನ್ನು ನಾವೆಲ್ಲರೂ ರೂಡಿಸಿಕೊಳ್ಳಬೇಕು ಎಂದು ಹೇಳಿದರು.

ಮಾಜಿ ನಗರಸಭಾ ಸದಸ್ಯ ವಿಜಯ್ ಕೊಡವೂರು, ದೇಶ ಅಭಿಮಾನ ಎಲ್ಲಕ್ಕಿಂತ ಮಿಗಿಲಾದದ್ದು, ಹಿಂದೂ ಸಂಸ್ಕೃತಿಗೆ ತೊಂದರೆಯಾದಾಗ ನಾವೆಲ್ಲರೂ ಎದ್ದು ನಿಲ್ಲಬೇಕಾಗಿದೆ ಎಂದರು. ಗೋರಕ್ಷಾ ಅಭಿಯಾನದ ಜಿಲ್ಲಾ ಸಂಚಾಲಕ ಗಜೇಂದ್ರ ಎಸ್ ಬಿ ಬೈಂದೂರು, ನಾಗರಾಜ್, ವಿಜಯ್ ಕುಂದರ್, ರಾಮ ಟಿ ಪೂಜಾರಿ, ಸತೀಶ್ ದೇವಾಡಿಗ, ವಿಘ್ನೇಶ್ ನೀಲಾವರ ಮುಂತಾದವರು ಉಪಸ್ಥಿತರಿದ್ದರು. ಮಠದ ಟ್ರಸ್ಟಿ ಗೀತಾಂಜಲಿ ಸುವರ್ಣ ವಂದಿಸಿದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕೃತಕ ಬುದ್ಧಿಮತ್ತೆ (ಎಐ), ಬಾಹ್ಯಾಕಾಶ, ಇಂಧನ ಮತ್ತು ಸಂಸ್ಕೃತಿ ಕುರಿತು ಮಹತ್ವದ ಚರ್ಚೆ ನಡೆಸಿದ ಭಾರತ, ಯುಎಇ ಮತ್ತು ಫ್ರಾನ್ಸ್‌

ಯು.ಬಿ.ಎನ್.ಡಿ., ಸೆ.24: ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 81ನೇ ಅಧಿವೇಶನದ...

ಕುಂದಾಪ್ರ ಕನ್ನಡ: ಭಾಷಾ ವಿಶೇಷತೆ- ವಿಶೇಷ ಉಪನ್ಯಾಸ

ಕುಂದಾಪುರ, ಸೆ.24: ಡಾ. ಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ...

ಉಡುಪಿಯ ಹಲವೆಡೆ ದಿನವಿಡೀ ಉತ್ತಮ ಮಳೆ

ಉಡುಪಿ, ಸೆ.24: ಉಡುಪಿಯ ಹಲವೆಡೆ ಗುರುವಾರ ಉತ್ತಮ ಮಳೆಯಾಗಿದೆ. ಕಾರ್ಕಳ, ಮಣಿಪಾಲ,...
error: Content is protected !!