Thursday, September 24, 2026
Thursday, September 24, 2026

ಬಂಟಕಲ್ಲು: ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ

ಬಂಟಕಲ್ಲು: ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ

Date:

ಶಿರ್ವ, ಜು.23: ಶ್ರೀ ದುರ್ಗಾಪರಮೇಶ್ವರೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ದಾನಿ ರಂಜಿತ್ ಪ್ರಕಾಶ್ ಬರ್ಬೋಜ ಇಸ್ರೇಲ್ ಅವರು ನೀಡುವ ಸಮವಸ್ತ್ರ ವಿತರಣೆ ಕಾರ್ಯಕ್ರಮವು ಶಾಲಾ ಸಂಚಾಲಕ ರಾಮದಾಸ ಪ್ರಭು ಅವರ ಅಧ್ಯಕ್ಷತೆಯಲ್ಲಿ ಜರಗಿತು. ಶಾಲಾ ಆಡಳಿತ ಮಂಡಳಿಯ ಮಂಡಳಿಯ ಅಧ್ಯಕ್ಷ ಶಶಿಧರ ವಾಗ್ಲೆ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲಾ ಅಭಿಮಾನಿಗಳು ತಮ್ಮ ಸಂಪತ್ತಿನ ಸ್ವಲ್ಪ ಪಾಲನ್ನು ಶಾಲೆ ಅಥವಾ ಸಮಾಜಕ್ಕೆ ನೀಡುವುದರ ಮೂಲಕ ತಮ್ಮ ಉದಾರ ಮನೋಭಾವನೆಯನ್ನು ವ್ಯಕ್ತಪಡಿಸುತ್ತಿರುವುದು ಶ್ಲಾಘನೀಯಾವಾದುದು ಎಂದರು. ಶ್ರೀ ದೇವಳದ ಆಡಳಿತ ಮುಕ್ತೇಸರರಾದ ಜಯರಾಮ ಪ್ರಭುರವರು ಶಾಲಾ ಮಕ್ಕಳಿಗೆ ಸಮವಸ್ತ್ರವನ್ನು ವಿತರಿಸಿ ರಂಜಿತ್ ಪ್ರಕಾಶ್ ಬರ್ಬೋಜಾ ದೂರದ ಇಸ್ರೇಲ್ ನಲ್ಲಿದ್ದರೂ ನಮ್ಮ ಶಾಲೆಯ ಅಭಿಮಾನದಿಂದ ಶಾಲಾ ಮಕ್ಕಳಿಗೆ ಹಲವು ವರ್ಷಗಳಿಂದ ಸಮ ವಸ್ತ್ರ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು. ಮುಖ್ಯ ಅತಿಥಿ ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ ಆರ್ ಪಾಟ್ಕರ್ ರವರು ರಂಜಿತ್ ಪ್ರಕಾಶ್ ಬರ್ಬೋಜರ್ ಅವರು ಶಾಲೆ, ಆರೋಗ್ಯ ಹಾಗೂ ಇತರ ಸಾಮಾಜಿಕ ಕಾರ್ಯಗಳಿಗೆ ನೀಡುತ್ತಿರುವ ಸಹಾಯ, ಸಹಕಾರವನ್ನು ತಿಳಿಸಿ, ಅವರಿಗೆ ಕೖತಜ್ಞತೆಯನ್ನು ಸಲ್ಲಿಸಿದರು.

ಶಾಲೆಯ 65 ವಿದ್ಯಾರ್ಥಿಗಳಿಗೆ 74 ಜೊತೆ ಸಮವಸ್ತ್ರ ವಿತರಿಸಲಾಯಿತು. ಶಾಲಾ ಶತಮಾನೋತ್ಸವ ಸಮಿತಿ ಕೋಶಾಧಿಕಾರಿ ವಿಶ್ವನಾಥ ಬಾಂದೇಲ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಸಂಗೀತ ಪಾಟ್ಕರ್ ಸ್ವಾಗತಿಸಿ, ಶಿಕ್ಷಕಿ ರೇಷ್ಮಾ ವಂದಿಸಿದರು. ಶಿಕ್ಷಕಿ ವಿನುತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸುಮತಿ, ಶ್ವೇತ ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕೃತಕ ಬುದ್ಧಿಮತ್ತೆ (ಎಐ), ಬಾಹ್ಯಾಕಾಶ, ಇಂಧನ ಮತ್ತು ಸಂಸ್ಕೃತಿ ಕುರಿತು ಮಹತ್ವದ ಚರ್ಚೆ ನಡೆಸಿದ ಭಾರತ, ಯುಎಇ ಮತ್ತು ಫ್ರಾನ್ಸ್‌

ಯು.ಬಿ.ಎನ್.ಡಿ., ಸೆ.24: ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 81ನೇ ಅಧಿವೇಶನದ...

ಕುಂದಾಪ್ರ ಕನ್ನಡ: ಭಾಷಾ ವಿಶೇಷತೆ- ವಿಶೇಷ ಉಪನ್ಯಾಸ

ಕುಂದಾಪುರ, ಸೆ.24: ಡಾ. ಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ...

ಉಡುಪಿಯ ಹಲವೆಡೆ ದಿನವಿಡೀ ಉತ್ತಮ ಮಳೆ

ಉಡುಪಿ, ಸೆ.24: ಉಡುಪಿಯ ಹಲವೆಡೆ ಗುರುವಾರ ಉತ್ತಮ ಮಳೆಯಾಗಿದೆ. ಕಾರ್ಕಳ, ಮಣಿಪಾಲ,...
error: Content is protected !!