Sunday, October 18, 2026
Sunday, October 18, 2026

ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರದ 76 ನೇ ಸ್ಥಾಪನಾ ದಿನಾಚರಣೆ

ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರದ 76 ನೇ ಸ್ಥಾಪನಾ ದಿನಾಚರಣೆ

Date:

ಉಡುಪಿ, ಜು.23: ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರದ 76 ನೇ ಸ್ಥಾಪನಾ ದಿನಾಚರಣೆಯು ಸಂಸ್ಥೆಯ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಜರಗಿತು. ಸಭಾಧ್ಯಕ್ಷತೆಯನ್ನು ಹಿರಿಯ ಜಾನಪದ ವಿದ್ವಾಂಸ, ಅಮೃತ ಮಹೋತ್ಸವ ಸಮಿತಿಯ ಸಂಚಾಲಕ ಬನ್ನಂಜೆ ಬಾಬು ಅಮೀನ್ ವಹಿಸಿದ್ದರು. ಸಂಘದ ಸ್ಥಾಪಕರು ಹಾಗೂ 75 ವರ್ಷ ಗಳ ಕಾಲ ಮುನ್ನಡೆಸಿಕೊಂಡು ಬಂದ ಮಹನೀಯರನ್ನು ನಾವು ಈ ದಿನ ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ. ನಿರಂತರ ಕಲಾ ಚಟುವಟಿಕೆ ನಡೆಸುತ್ತಾ ಬರುವ ಮೂಲಕ ಹಿರಿಯರ ಆಶಯವನ್ನು ಸಾರ್ಥಕಗೊಳಿಸುವ ಕಾರ್ಯವನ್ನು ಸಂಸ್ಥೆಯ ಆಡಳಿತ ಮಂಡಳಿ ನಡೆಸಿದೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಗಜಾನನ ಯಕ್ಷಗಾನ ಕಲಾಮಂಡಳಿ ತೊಟ್ಟಂ ಇದರ ಸ್ಥಾಪಕ ಭೋಜಪ್ಪ ಸಾಲ್ಯಾನ್ ಇವರು ಕಲಾಕ್ಷೇತ್ರ ದ ಕಾರ್ಯಕ್ರಮ ಗಳಲ್ಲಿ ಹಲವಾರು ವರ್ಷಗಳ ಕಾಲ ಭಾಗವಹಿಸಿದನ್ನು ನೆನಪಿಸಿಕೊಂಡರು ಹವ್ಯಾಸಿ ಯಕ್ಷಗಾನ ರಂಗದಲ್ಲಿ ಕಲಾಕ್ಷೇತ್ರ ದ ಪಾತ್ರ ದೊಡ್ಡದು ಎಂದರು. ಕಲಾಕ್ಷೇತ್ರದ ಪೋಷಕ ವಿಶ್ವನಾಥ ಶೆಣೈ ಮುಖ್ಯ ಅಥಿತಿ ಗಳಾಗಿ ಭಾಗವಹಿಸಿದ್ದರು. ಉಪಾಧ್ಯಕ್ಷ ನಿಟ್ಟೂರು ಮಹಾಬಲ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷ ಜಿ ಬಾಬು ಗೌಡ, ಹಿರಿಯ ಸದಸ್ಯರಾದ ಅಣ್ಣಯ್ಯ ಪಾಲನ್, ಶಿವ ಪಾಲನ್,ಗುರುವ ಸುವರ್ಣ ಬನ್ನಂಜೆ ನಾಗರಾಜ ಉಪಾಧ್ಯ ಮಾರ್ಪಳ್ಳಿ, ಕೋಶಾಧಿಕಾರಿ ನರಸಿಂಹ ಎನ್ ಆರ್, ಕಲಾ ಕಾರ್ಯದರ್ಶಿ ಶ್ರೀಧರ್ ಭಟ್, ಕಾರ್ಯಕಾರಿ ಸದಸ್ಯರಾದ ರಮೇಶ್ ಕೋಟ್ಯಾನ್, ಅನಿಲ್ ಕುಮಾರ್ ಅಡೂರು, ಸುಗಂಧಿ ಆಚಾರ್ಯ ಹಾಗೂ ಕಲಾಭಿಮಾನಿಗಳು ಉಪಸ್ಥಿತರಿದ್ದರು. ಅಧ್ಯಕ್ಷ ಕೇಶವ ಮೂರ್ತಿ ಬೆಲ್ಪತ್ರೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ರಮೇಶ್ ಚಿಂಬಾಲ್ಕರ್ ವಂದಿಸಿದರು. ಕಾರ್ಯದರ್ಶಿ ಗಣೇಶ್ ಕೋಟ್ಯಾನ್ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ತ್ರಿಶಂಕು ಚರಿತ್ರೆ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೆಚ್‌ಐವಿ /ಏಡ್ಸ್ ಅರಿವು ಮೂಡಿಸಲು ಜಿಲ್ಲಾಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಥಾನ್

ಉಡುಪಿ, ಅ.17: ಹೆಚ್‌ಐವಿ/ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಯುವಜನರಲ್ಲಿ ಆರೋಗ್ಯದ...

ಪೊಲೀಸರಂತೆ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರ ಕಾರ್ಯ ಶ್ಲಾಘನೀಯ: ಹರಿರಾಮ್ ಶಂಕರ್

ಉಡುಪಿ, ಅ.17: ಕಾನೂನು ಸುವ್ಯವಸ್ಥೆ, ಬಂದೋಬಸ್ತ್ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪೊಲೀಸ್...

ಕಾರ್ಮಿಕರು ತಮ್ಮ ಹಕ್ಕುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ.ಶಾಹಿದ್ ತೆಕ್ಕಿಲ್

ಉಡುಪಿ, ಅ.17: ಸರಕಾರವು ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಜಾರಿಗೊಳಿಸಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹ...
error: Content is protected !!