Saturday, October 17, 2026
Saturday, October 17, 2026

ಕಾರಂತರು ಕರ್ನಾಟಕದ ವೈಚಾರಿಕ ಪ್ರಜ್ಞೆಯ ಪ್ರತಿನಿಧಿ: ಸಚಿವ ಶಿವರಾಜ ಎಸ್ ತಂಗಡಗಿ

ಕಾರಂತರು ಕರ್ನಾಟಕದ ವೈಚಾರಿಕ ಪ್ರಜ್ಞೆಯ ಪ್ರತಿನಿಧಿ: ಸಚಿವ ಶಿವರಾಜ ಎಸ್ ತಂಗಡಗಿ

Date:

ಉಡುಪಿ, ಸೆ.25: ಡಾ. ಶಿವರಾಮ ಕಾರಂತರು ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶಕ್ಕೆ ಘನತೆ ತಂದವರು. ಸ್ವಾತಂತ್ರ್ಯ ಪೂರ್ವದಲ್ಲಿ ನಾಡಿನ ಸಮಾನತೆಯನ್ನು ಪ್ರತಿಪಾದಿಸಿದವರು. ವೈಚಾರಿಕ ಚಿಂತನೆಯ ಕೊಂಡಿಯಾಗಿರುವ ಕಾರಂತರು ಕರ್ನಾಟಕದ ವೈಚಾರಿಕ ಮತ್ತು ವೈಜ್ಞಾನಿಕ ಪ್ರಜ್ಞೆಯ ಪ್ರತಿನಿಧಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ ಎಸ್ ತಂಗಡಗಿ ಹೇಳಿದರು. ಅವರು ಡಾ.ಶಿವರಾಮ ಕಾರಂತ ಟ್ರಸ್ಟ್ನ ಕಾರ್ಯಕ್ರಮಗಳ ಕುರಿತಾದ ವಾರ್ತಾ ಸಂಚಯವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಡಾ. ಶಿವರಾಮ ಕಾರಂತ ಟ್ರಸ್ಟಿನ ಚಟುವಟಿಕೆಗಳನ್ನು ಶ್ಲಾಘಿಸಿದ ಸಚಿವರು ಕಾರಂತರ 125 ನೇ ಜನ್ಮ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ಅನುದಾನದ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಟ್ರಸ್ಟಿನ ವತಿಯಿಂದ ಸಚಿವರನ್ನು ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಸನ್ಮಾನಿಸಿದರು. ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ಡಾ.ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ, ಟ್ರಸ್ಟಿನ ಸದಸ್ಯ ಜಿ.ಎಂ.ಶರೀಫ್ ಹೂಡೆ, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

2030 ರ ವೇಳೆಗೆ ಭಾರತ ಮತ್ತು ರಷ್ಯಾ 100 ಬಿಲಿಯನ್ ಡಾಲರ್ ದ್ವಿಪಕ್ಷೀಯ ವ್ಯಾಪಾರ ಗುರಿ

ನವದೆಹಲಿ, ಅ.16: ರಷ್ಯಾ ಮತ್ತು ಇತರ ಸದಸ್ಯ ರಾಷ್ಟ್ರಗಳಿಗೆ ರಫ್ತುಗಳನ್ನು ಹೆಚ್ಚಿಸಲು...

ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ ಶಿಕ್ಷಕ- ಪೋಷಕರ ಸಭೆ

ಕಾರ್ಕಳ, ಅ.16: ವಿದ್ಯಾರ್ಥಿಗಳ ಕನಸುಗಳಿಗೆ ದಿಕ್ಕು ತೋರಿಸಿ, ಭವಿಷ್ಯದ ಸಾಧನೆಗೆ ಭದ್ರ...

ಉಡುಪಿಯಲ್ಲಿ ತಂಪೆರೆದ ಮುಂಜಾನೆ ಮಳೆ

ಉಡುಪಿ, ಅ.16: ಉಡುಪಿ ಜಿಲ್ಲೆಯ ಹಲವೆಡೆ ಶುಕ್ರವಾರ ಮುಂಜಾನೆ ಗುಡುಗು ಸಹಿತ...

ಸಂಸ್ಕೃತಿ ನಮ್ಮ ಗೌರವದ ಪ್ರತೀಕ: ಡಾ. ವೆಂಕಟರಾಮ್ ಭಟ್

ಉಡುಪಿ, ಅ.16: ಭಾರತೀಯ ಸಂಸ್ಕೃತಿಯ ಉಳಿವಿನಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳ ಪಾತ್ರ...
error: Content is protected !!