Sunday, August 30, 2026
Sunday, August 30, 2026

ತ್ರಿಶಾ ಪದವಿಪೂರ್ವ ಕಾಲೇಜು: ಓರಿಯೆಂಟೇಷನ್ ಕಾರ್ಯಕ್ರಮ

ತ್ರಿಶಾ ಪದವಿಪೂರ್ವ ಕಾಲೇಜು: ಓರಿಯೆಂಟೇಷನ್ ಕಾರ್ಯಕ್ರಮ

Date:

ಮಂಗಳೂರು, ಜೂ.12: ತ್ರಿಶಾ ಪದವಿಪೂರ್ವ ಕಾಲೇಜಿನ ವತಿಯಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ತ್ರಿಶಾ ಶಿಕ್ಷಣ ಸಮೂಹ ಸಂಸ್ಥೆಗಳ ಸಂಸ್ಥಾಪಕರು ಸಿ.ಎ ಗೋಪಾಲಕೃಷ್ಣ ಭಟ್ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಸಾಧನೆಗೆ ಮೂರು ಸೂತ್ರ, ಸತತ ಅಭ್ಯಾಸ, ಅಡಚಣೆಗಳ ನಿವಾರಣೆ, ಗಮನ ಕೇಂದ್ರೀಕರಿಸುವುದು ಆಗಿದೆ. ನೀರಿನಲ್ಲಿ ಸ್ನಾನ ಮಾಡಿದವರು ಬರೀ ಬಟ್ಟೆ ಮಾತ್ರ ಬದಲಾಯಿಸುತ್ತಾರೆ ಆದರೆ ಬೆವರಿನಲ್ಲಿ ಸ್ನಾನ ಮಾಡಿದವರು ಇತಿಹಾಸವನ್ನು ಬದಲಾಯಿಸುತ್ತಾರೆ. ಮೇಲಿನ ಮೂರು ಸಿದ್ದ ಸೂತ್ರಗಳನ್ನು ಅಳವಡಿಸಿಕೊಂಡ ಸಾಧನೆಯ ಶಿಖರವನ್ನೇರಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಪಿಯುಸಿ ಶಿಕ್ಷಣದ ಅಗತ್ಯತೆಗಳು ಹಾಗೂ ವಿದ್ಯಾರ್ಥಿಗಳು ಸಾಗಬೇಕಾದ ಹಾದಿಯನ್ನು ಕುರಿತಂತೆ ಉಪನ್ಯಾಸವನ್ನು ನೀಡಿದರು.

ವೇದಿಕೆಯಲ್ಲಿ ಕಾಲೇಜಿನ ಶೈಕ್ಷಣಿಕ ಆಡಳಿತಗಾರರಾದ ಡಾ.ನಾರಾಯಣ ಕಾಯರ್ ಕಟ್ಟೆ ಹಾಗೂ ತ್ರಿಶಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರದ ಯಶಸ್ವಿನಿ ಯಶ್ಪಾಲ್ ಉಪಸ್ಥಿತರಿದ್ದರು. ಕಾಲೇಜಿನ ನಿಯಮ ಮತ್ತು ನಿಬಂಧನೆಗಳನ್ನು ಕುರಿತಂತೆ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ವಾಣಿಜ್ಯಶಾಸ್ತ್ರದ ಅಧ್ಯಾಪಕಿ ಶ್ರೀಮತಿ ಶೈನಿ ವಿ ಪಿ ಸ್ವಾಗತಿಸಿದರು, ವಾಣಿಜ್ಯಶಾಸ್ತ್ರದ ಅಧ್ಯಾಪಕಿ ವಿದ್ಯಾಲಕ್ಷ್ಮಿ ವಂದಿಸಿದರು. ಅರ್ಥಶಾಸ್ತ್ರದ ಅಧ್ಯಾಪಕಿ ಶಿಲ್ಪ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವರ್ತಮಾನದ ಸಂಕಟಗಳನ್ನು ಮೀರುವ ಶಕ್ತಿ ಸಾಹಿತ್ಯಕ್ಕಿದೆ: ಡಾ. ಸಂತೋಷ್ ಆಳ್ವ

ವಾಮದಪದವು. ಆ.28: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ...

ಗಂಗೊಳ್ಳಿ: ಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

ಗಂಗೊಳ್ಳಿ, ಆ.28: ಶ್ರೀ ನಾರಾಯಣ ಗುರು ಜನ ಸೇವಾ ಬಳಗ ಗಂಗೊಳ್ಳಿ...

ಯಕ್ಷಶಿಕ್ಷಣ ಟ್ರಸ್ಟಿನ ವಿಶ್ವಸ್ತರ ಸಭೆ

ಉಡುಪಿ, ಆ.28: ಯಕ್ಷಶಿಕ್ಷಣ ಟ್ರಸ್ಟಿನ ವಿಶ್ವಸ್ತರ ಸಭೆ ಶುಕ್ರವಾರ ಟ್ರಸ್ಟಿನ ಗೌರವಾಧ್ಯಕ್ಷರು,...

ಕಾರ್ಕಳ: ಮಾಳ ಕೋಟೆ ಬಸದಿಯಲ್ಲಿ 5 ಅಪರೂಪದ ಜಿನ ಶಾಸನಗಳ ಪತ್ತೆ; ಸಂಶೋಧಕ ಶ್ರುತೇಶ್ ಆಚಾರ್ಯರಿಂದ ಅಧ್ಯಯನ

ಕಾರ್ಕಳ, ಆ.27: ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಸ್ವಸ್ತಿ ಶ್ರೀ ಲಲಿತಕೀರ್ತಿ...
error: Content is protected !!