Sunday, October 18, 2026
Sunday, October 18, 2026

ಕೋಡಿಯಲ್ಲಿ ಹಸಿರು ಹೆಜ್ಜೆ ಅಭಿಯಾನಕ್ಕೆ ಚಾಲನೆ

ಕೋಡಿಯಲ್ಲಿ ಹಸಿರು ಹೆಜ್ಜೆ ಅಭಿಯಾನಕ್ಕೆ ಚಾಲನೆ

Date:

ಕೋಟ, ಜೂ.12: ದೇಶದೆಲ್ಲೆಡೆ ತಾಪಮಾನ ಹೆಚ್ಚುತ್ತಿದೆ. ಕಾಡೆಲ್ಲ ನಾಡಾಗಿ ಪರಿವರ್ತನೆಗೊಂಡಿದ್ದು ಇದರಿಂದ ಸಾಕಷ್ಟು ಸಮಸ್ಯೆಗಳನ್ನು ಈಗಾಗಲೇ ಎದುರಿಸುತ್ತಿದ್ದೇವೆ. ಪಂಚವರ್ಣದ ಹಸಿರು ಹೆಜ್ಜೆ ಶ್ಲಾಘನೀಯ ಪ್ರಯತ್ನವಾಗಿದೆ ಎಂದು ಕೋಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಅಭಿಪ್ರಾಯಪಟ್ಟರು. ಶುಕ್ರವಾರ ಕೋಡಿ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಕೋಟದ ಪಂಚವರ್ಣ ಸಂಘಟನೆ, ಗೀತಾನಂದ ಫೌಂಡೇಶನ್ ಮಣೂರು ಮಾರ್ಗದರ್ಶನದಲ್ಲಿ ಶಿಶು ಅಭಿವೃದ್ಧಿ ಯೋಜನೆ ಬ್ರಹ್ಮಾವರ, ಸಂಜೀವಿನಿ ಒಕ್ಕೂಟ ಕೋಡಿ ಪಂಚಾಯತ್, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಹಯೋಗದೊಂದಿಗೆ ಮೂರನೇ ವರ್ಷದ ಹಸಿರು ಹೆಜ್ಜೆ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಸಿರು ಹೆಜ್ಜೆ ಕಾರ್ಯಕ್ರಮದ ಸಂಯೋಜಕ ಪಂಚವರ್ಣದ ರವೀಂದ್ರ ಕೋಟ ಕಾರ್ಯಕ್ರಮದ ರೂಪುರೇಷೆಗಳನ್ನು ಸಭೆಗೆ ತಿಳಿಸಿದರು. ಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಗಿಡಗಳನ್ನು ನೆಡಲಾಯಿತು. ಇದೇ ವೇಳೆ ಪಿಡಿಒ ರವೀಂದ್ರ ರಾವ್ ಪ್ರತಿಜ್ಞಾ ವಿಧಿಯನ್ನು ಮಕ್ಕಳಿಗೆ ಬೋಧಿಸಿದರು. ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಸದಸ್ಯ ಕೇಶವ ಆಚಾರ್, ಕೋಡಿ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಪ್ರಭಾಕರ್ ಮೆಂಡನ್, ಗೀತಾ ಖಾರ್ವಿ, ಮಾಜಿ ಸದಸ್ಯರಾದ ಅಂತೋನಿ ಡಿಸೋಜ, ಕೃಷ್ಣ ಪೂಜಾರಿ ಪಿ., ಸತೀಶ್ ಕುಂದರ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪೂರ್ಣಿಮಾ, ಎಂಬಿಕೆ ಅನಿತಾ, ಅಂಗನವಾಡಿ ಕಾರ್ಯಕರ್ತೆಯರಾದ ಯಮುನಾ ಎಲ್ ಕುಂದರ್, ಕೋಡಿಕನ್ಯಾನ ಪ್ರೀತಿ ಎಸ್., ಕೋಡಿ ಲೀಲಾವತಿ, ಕೋಡಿ ಶಾಲಾ ಮುಖ್ಯ ಶಿಕ್ಷಕಿ ಸಂಪಾ ಟೀಚರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೆಚ್‌ಐವಿ /ಏಡ್ಸ್ ಅರಿವು ಮೂಡಿಸಲು ಜಿಲ್ಲಾಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಥಾನ್

ಉಡುಪಿ, ಅ.17: ಹೆಚ್‌ಐವಿ/ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಯುವಜನರಲ್ಲಿ ಆರೋಗ್ಯದ...

ಪೊಲೀಸರಂತೆ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರ ಕಾರ್ಯ ಶ್ಲಾಘನೀಯ: ಹರಿರಾಮ್ ಶಂಕರ್

ಉಡುಪಿ, ಅ.17: ಕಾನೂನು ಸುವ್ಯವಸ್ಥೆ, ಬಂದೋಬಸ್ತ್ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪೊಲೀಸ್...

ಕಾರ್ಮಿಕರು ತಮ್ಮ ಹಕ್ಕುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ.ಶಾಹಿದ್ ತೆಕ್ಕಿಲ್

ಉಡುಪಿ, ಅ.17: ಸರಕಾರವು ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಜಾರಿಗೊಳಿಸಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹ...
error: Content is protected !!