Monday, July 27, 2026
Monday, July 27, 2026

ಕಲ್ಯಾಣಪುರ: ಶ್ರೀ ಸುಧೀಂದ್ರ ಪೀಠ ಉದ್ಘಾಟನೆ

ಕಲ್ಯಾಣಪುರ: ಶ್ರೀ ಸುಧೀಂದ್ರ ಪೀಠ ಉದ್ಘಾಟನೆ

Date:

ಕಲ್ಯಾಣಪುರ, ಅ.28: ಶ್ರೀ ಸಂಸ್ಥಾನ ಕಾಶೀ ಮಠಾಧೀಶರಾಗಿದ್ದ ಶ್ರೀಮದ್ ಸುಧೀಂದ್ರತೀರ್ಥ ಸ್ವಾಮೀಜಿಯವರ ಜನ್ಮಶತಮಾನೋತ್ಸವದ ಸವಿನೆನಪಿಗಾಗಿ ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದ ಉತ್ಸವ ಮೂರ್ತಿ ಪೇಟೆ ಉತ್ಸವದ ಸಂದರ್ಭ ವಿರಾಜಮಾನವಾಗುವ ಸಲುವಾಗಿ ಸುಧೀಂದ್ರನಗರದಲ್ಲಿ ಏಳು ಮನೆಗಳ ನಿವಾಸಿಗಳು ನೂತನವಾಗಿ ನಿರ್ಮಿಸಿದ ಶ್ರೀ ಸುಧೀಂದ್ರ ಪೀಠದ ಉದ್ಘಾಟನಾ ಕಾರ್ಯಕ್ರಮ ಅಕ್ಟೋಬರ್ 27 ರಂದು ನಡೆಯಿತು.

ವೇದಮೂರ್ತಿ ಕೆ. ಕಾಶೀನಾಥ ಭಟ್ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ವೇದಮೂರ್ತಿ ಗಣಪತಿ ಭಟ್, ಜಯದೇವ ಭಟ್, ಗಣೇಶ್ ಭಟ್, ಮಹೇಶ್ ಭಟ್, ರಾಮಚಂದ್ರ ಅವಧಾನಿ, ಜಯದೇವ ಪುರಾಣಿಕ್ ದೇವವಾಸ್ತು, ರಾಕ್ಷೋಜ್ಞ ಹೋಮ, ಬಲಿಪೂಜೆ ನಡೆಸಿಕೊಟ್ಟರು.

ಜಿ. ಗೋಕುಲದಾಸ್ ನಾಯಕ್ ಮತ್ತು ಮಧುವಂತಿ ಜಿ ನಾಯಕ್ ದಂಪತಿಗಳು ಪೂಜಾ ಕಾರ್ಯದ ನೇತೃತ್ವ ವಹಿಸಿದರು. ಮಹಾಪೂಜೆಯ ನಂತರ ನೂರಾರು ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು.

ವೆಂಕಟರಾಯ ಮಲ್ಯ, ರಮೇಶ್ ಪೈ, ಮಧುಕರ ನಾಯಕ್, ಲಕ್ಷ್ಮೀನಾರಾಯಣ ನಾಯಕ್, ವಿದ್ಯಾ ಕಿಣಿ, ಕೆ. ಹರೀಶ್ ಭಟ್ ಹಾಗೂ ಕಲ್ಯಾಣಪುರ ವೆಂಕಟರಮಣ ದೇವಸ್ಥಾನದ ಸುತ್ತಮುತ್ತಲಿನ ನಿವಾಸಿಗಳು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದು ಹೆಮ್ಮೆಯ ಕ್ಷಣ: ಕಾರ್ಗಿಲ್ ಯೋಧ ಅನಂತಪದ್ಮನಾಭ ನಾಯಕ್

ಶಿರ್ವ, ಜು.26: 1999 ರ ಕಾರ್ಗಿಲ್ ಯುದ್ಧದಲ್ಲಿ ಭಾರತ ದೇಶದ ಪರವಾಗಿ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ದೇಶದ ಎಚ್ಚೆತ್ತ ಯುವಜನರ ಗೆಲುವಾಗಿದೆ: ಸಿದ್ದರಾಮಯ್ಯ

ಬೆಂಗಳೂರು, ಜು.26: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ದೇಶದ ಎಚ್ಚೆತ್ತ ಯುವಜನರ ಗೆಲುವಾಗಿದೆ....
error: Content is protected !!