Thursday, September 24, 2026
Thursday, September 24, 2026

ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದು ಹೆಮ್ಮೆಯ ಕ್ಷಣ: ಕಾರ್ಗಿಲ್ ಯೋಧ ಅನಂತಪದ್ಮನಾಭ ನಾಯಕ್

ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದು ಹೆಮ್ಮೆಯ ಕ್ಷಣ: ಕಾರ್ಗಿಲ್ ಯೋಧ ಅನಂತಪದ್ಮನಾಭ ನಾಯಕ್

Date:

ಶಿರ್ವ, ಜು.26: 1999 ರ ಕಾರ್ಗಿಲ್ ಯುದ್ಧದಲ್ಲಿ ಭಾರತ ದೇಶದ ಪರವಾಗಿ ಯೋಧನಾಗಿ ಸೇವೆ ಸಲ್ಲಿಸಿದ ದಿನಗಳು ರೋಮಾಂಚನವನ್ನು ಉಂಟುಮಾಡುತ್ತದೆ. ಕಾರ್ಗಿಲ್ ಹೋರಾಟದ ದಿನಗಳು ನನ್ನ ಜೀವಮಾನದ ಸರ್ವಶ್ರೇಷ್ಠ ಹೆಮ್ಮೆಯ ಕ್ಷಣಗಳು ಆಗಿದ್ದವು ಎಂದು ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಯೋಧ ಅನಂತಪದ್ಮನಾಭ ನಾಯಕ್ ಹೇಳಿದರು. ಅವರು ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ಆನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಿತಿ, ಬಂಟಕಲ್ಲು ನಾಗರಿಕ ಸೇವಾ ಸಮಿತಿ, ರಾಜಪುರ ಸಾರಸ್ವತ ಸೇವಾ ವೖಂದ ಬಂಟಕಲ್ಲು ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಡೆದ ಕಾರ್ಗಿಲ್ ದಿವಸ್ ಆಚರಣೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಅಮರ್ ಜವಾನ್ ಸ್ಮಾರಕಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆಯನ್ನು ಮಾಡಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿ, ಕಾರ್ಗಿಲ್ ಯುದ್ದದ ದಿನಗಳನ್ನು ನೆನಪಿಸಿ ನಡೆದ ಕಾರ್ಗಿಲ್ ಯುದ್ದದ ಬಗ್ಗೆ ವಿವರಿಸಿದರು. ನಿವೃತ್ತ ಯೋಧರಾದ ರಾಜೇಂದ್ರ ಪಾಟ್ಕರ್, ರೋಬರ್ಟ್ ಮೆಂಡೋನ್ಸಾ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಹುತಾತ್ಮ ವೀರಯೋಧರಿಗೆ ನಮನ ಸಲ್ಲಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಶಶಿಧರ ವಾಗ್ಲೆಯವರು ಕಾರ್ಗಿಲ್ ದಿವಸ್ ಆಚರಣೆಯ ಬಗ್ಗೆ ಮಾತನಾಡಿ ಕಾರ್ಯಕ್ರಮ ಸಂಯೋಜಿಸಿದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಮಾಧವ ಕಾಮತ್, ಶಾಲಾ ಸಂಚಾಲಕ ರಾಮದಾಸ್ ಪ್ರಭು, ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಸಮಿತಯ ಅಧ್ಯಕ್ಷ ಕೆ ಆರ್ ಪಾಟ್ಕರ್ ರವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಶಾಲೆಯಲ್ಲಿ ನಿರ್ಮಿಸಿದ ಅಮರ್ ಜವಾನ್ ಸ್ಮಾರಕದ ಬಗ್ಗೆ ಹಾಗೂ ಇದು ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ರಾಷ್ಟ್ರಭಕ್ತಿಯನ್ನು ಹುಟ್ಟಿಸುವ ಸ್ಮಾರಕವಾಗಲಿದೆ ಎಂದು ತಿಳಿಸಿ ಎಲ್ಲರನ್ನೂ ಸ್ವಾಗತಿಸಿದರು.

ಹುತಾತ್ಮ ಯೋಧರಿಗೆ ಮೌನ ಪ್ರಾರ್ಥನೆಯೊಂದಿಗೆ ನಮನ ಸಲ್ಲಿಸಿ, ಪುಷ್ಪಾರ್ಚನೆ ಮಾಡಲಾಯಿತು.
ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಮರಾಠೆ, ಬಂಟಕಲ್ಲು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಉಮೇಶ್ ಪ್ರಭು, ಸೇವಾ ವೃಂದದ ಕಾರ್ಯದರ್ಶಿ ವಿಶ್ವನಾಥ ಬಾಂದೇಲ್ಕರ್ ನಾಗರಿಕ ಸೇವಾ ಸಮಿತಿಯ ಡೆನಿಸ್ ಡಿ`ಸೋಜಾ, ಅನಂತರಾಮ ವಾಗ್ಲೆ, ಸುರೇಶ್ ಆಚಾರ್ಯ ಪ್ರೀತಮ್ ಪ್ರಭು, ಉದ್ಯಮಿ ರಾಘವೇಂದ್ರ ನಾಯಕ್, ವಿರೇಂದ್ರ ಪಾಟ್ಕರ್, ಶ್ರೀನಿವಾಸ ಕಾಮತ್, ರವಿದಾಸ ಪಾಟ್ಕರ್, ಮಂಜುನಾಥ ಪಾಟ್ಕರ್, ವೀಣಾ ಆಚಾರ್ಯ, ಶ್ವೇತಾ ಭಟ್, ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಹುತಾತ್ಮರಗೆ ನಮನ ಸಲ್ಲಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಂದಾಪುರದ ಇಂಪನಾ ಆರ್. ಅವರಿಗೆ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಕುಂದಾಪುರ, ಸೆ.22: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ...

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರಕ್ಕೆ ಶೈಕ್ಷಣಿಕ ಭೇಟಿ

ಕುಂದಾಪುರ, ಸೆ.22: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು,...

ಎನ್ಎಸ್ಎಸ್ ಸ್ವಯಂಸೇವಕರಿಂದ ತ್ರಾಸಿ ಬೀಚ್ ಕ್ಲೀನಿಂಗ್

ಕುಂದಾಪುರ, ಸೆ.22: ಅಂತಾರಾಷ್ಟ್ರೀಯ ಕೊಸ್ಟಲ್ ಕ್ಲೀನ್ ಆಫ್ ಡೇ ಆಚರಣೆ ಪ್ರಯುಕ್ತ...
error: Content is protected !!