Sunday, July 26, 2026
Sunday, July 26, 2026

ಕ್ರಿಯೇಟಿವ್ ಕಾಲೇಜು: ಶಿಕ್ಷಕರ ಪಾಲಕರ ಸಭೆ

ಕ್ರಿಯೇಟಿವ್ ಕಾಲೇಜು: ಶಿಕ್ಷಕರ ಪಾಲಕರ ಸಭೆ

Date:

ಕಾರ್ಕಳ, ಅ.28: ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ ವಿವಿಧ ಹಂತಗಳಲ್ಲಿ ಶಿಕ್ಷಕರ – ಪಾಲಕರ ಸಭೆಯನ್ನು ಕಾಲೇಜಿನ ಸಪ್ತಸ್ವರ ಸಭಾಂಗಣದಲ್ಲಿ ನಡೆಸಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ಜೀವನ ಮೌಲ್ಯಗಳನ್ನು ಕುರಿತು ನಡೆದ ಕಾರ್ಯಕ್ರಮ ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ವೇದಿಕೆಯಾಯಿತು. ಸಹಸಂಸ್ಥಾಪಕರುಗಳಾದ ವಿದ್ವಾನ್ ಗಣಪತಿ ಭಟ್ ರವರು ಮಾತನಾಡಿ, ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಶಿಕ್ಷಣ ಸಂಸ್ಥೆ, ಪೋಷಕರು ಮತ್ತು ಶಿಕ್ಷಕರ ತ್ರಿಕೋನ ಸಹಕಾರ ಅತ್ಯವಶ್ಯಕ ಎಂದು ಹೇಳಿದರು. ಅಶ್ವತ್ ಎಸ್.ಎಲ್ ರವರು ಶಿಕ್ಷಕರು ಮತ್ತು ಪಾಲಕರು ಇಬ್ಬರು ಒಂದೇ ಹಾದಿಯಲ್ಲಿ ನಡೆದು ವಿದ್ಯಾರ್ಥಿಗೆ ಮಾರ್ಗದರ್ಶನ ನೀಡಿದಾಗ, ಸಮಾಜಕ್ಕೆ ಒಳ್ಳೆಯ ನಾಗರಿಕರನ್ನು ರೂಪಿಸಲು ಸಾಧ್ಯವಾಗುತ್ತದೆ ಎನ್ನುತ್ತಾ ಕ್ರಿಯೇಟಿವ್ ನ ಕಾರ್ಯ ಯೋಜನೆಗಳ ಬಗ್ಗೆ ವಿವರಣೆಗಳನ್ನು ನೀಡಿದರು.

ಡಾ. ಬಿ. ಗಣನಾಥ ಶೆಟ್ಟಿ ರವರು ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮ ಸಮಯವನ್ನು ಸದುಪಯೋಗಪಡಿಸಿಕೊಂಡು, ಶ್ರದ್ಧೆ ಮತ್ತು ಶ್ರಮದಿಂದ ಓದುತ್ತ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗಬೇಕು ಎಂದು ಕರೆ ನೀಡಿದರು. ಗಣಪತಿ ಭಟ್ ಕೆ.ಎಸ್ ರವರು ಸಮಗ್ರ ಶೈಕ್ಷಣಿಕ ವಿವರಗಳನ್ನು ನೀಡಿ, ಶಿಕ್ಷಣ ಜೀವನಕ್ಕೆ ಬೆಳಕಾಗಲಿ ಎಂದು ಹಾರೈಸಿದರು.

ಆಡಳಿತ ಮಂಡಳಿಯವರು, ಬೋಧಕ ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಹಾಗೂ ಪೋಷಕ ವೃಂದದವರು ಪಾಲ್ಗೊಂಡಿದ್ದರು. ಉಪನ್ಯಾಸಕಿ ಸ್ಮಿತಾ ಹಾಗೂ ಪ್ರಿಯಾಂಕ ತೀರ್ಥರಾಮ್ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ರೂಮಿನೊಳಗಿಂದ’ ಬಿಡುಗಡೆ

ಗಂಗೊಳ್ಳಿ, ಜು.24: ನರೇಂದ್ರ ಅವರ ಸಾಹಿತ್ಯದಲ್ಲಿನ ವೈವಿಧ್ಯತೆ ಮತ್ತು ಆಕರ್ಷಣೆ ಅಭಿನಂದನೀಯ....

ಜು.27: ಅಜ್ಜರಕಾಡಿನಲ್ಲಿ ನೇರ ಸಂದರ್ಶನ

ಉಡುಪಿ, ಜು.24: ಉಡುಪಿಯ ಅಜ್ಜರಕಾಡು ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಧನಂಜಯ...

ಅಂಚೆ ಜೀವ ವಿಮಾ ಪ್ರತಿನಿಧಿಗಳ ಆಯ್ಕೆಗೆ ನೇರ ಸಂದರ್ಶನ

ಉಡುಪಿ, ಜು.24: ಉಡುಪಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ...

ನಾಟಾ ಪರೀಕ್ಷೆ- ಕ್ರಿಯೇಟಿವ್ ಸಂಸ್ಥೆಯ 4 ವಿದ್ಯಾರ್ಥಿಗಳಿಗೆ 100 ರ‍್ಯಾಂಕ್‌ನೊಳಗೆ ಸ್ಥಾನ

ಉಡುಪಿ, ಜು.24: ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನವರು ನಡೆಸಿದ ನಾಟಾ ಪರೀಕ್ಷೆ...
error: Content is protected !!