Sunday, November 8, 2026
Sunday, November 8, 2026

ನಾಟಾ ಪರೀಕ್ಷೆ- ಕ್ರಿಯೇಟಿವ್ ಸಂಸ್ಥೆಯ 4 ವಿದ್ಯಾರ್ಥಿಗಳಿಗೆ 100 ರ‍್ಯಾಂಕ್‌ನೊಳಗೆ ಸ್ಥಾನ

ನಾಟಾ ಪರೀಕ್ಷೆ- ಕ್ರಿಯೇಟಿವ್ ಸಂಸ್ಥೆಯ 4 ವಿದ್ಯಾರ್ಥಿಗಳಿಗೆ 100 ರ‍್ಯಾಂಕ್‌ನೊಳಗೆ ಸ್ಥಾನ

Date:

ಉಡುಪಿ, ಜು.24: ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನವರು ನಡೆಸಿದ ನಾಟಾ ಪರೀಕ್ಷೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಕಟಿಸಿದ್ದು, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಆರ್ಕಿಟೆಕ್ಚರ್ ವಿಭಾಗದಲ್ಲಿ ಉನ್ನತ ರ‍್ಯಾಂಕ್ ಗಳನ್ನು ಗಳಿಸಿದ್ದಾರೆ. ಕ್ರಿಯೇಟಿವ್ ನ ವಿದ್ಯಾರ್ಥಿಗಳಾದ ಭೂಮಿಕಾ ವೈ ರಾಜ್ಯಕ್ಕೆ 38 ನೇ ಸ್ಥಾನ ಗಳಿಸುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ಉಳಿದಂತೆ ಕ್ರಮವಾಗಿ ವಿದ್ಯಾರ್ಥಿಗಳಾದ, ಪ್ರಣವ್ ಕುಲಕರ್ಣಿ 79, ಸಮೃದ್ ಪಿ .ಶೆಟ್ಟಿ 91, ಪ್ರಾರ್ಥನಾ ಎಂ.99, ಅದಿತಿ ನಂದೀಶ್ 107, ಕುಶಾಲ್ ಎಲ್ 115, ಹೆಚ್. ಎಸ್.ಆದ್ಯ 163, ಅಜಯ್ ಕೆ. ಎನ್.181,ಜ್ಯೋತಿ ಎಸ್.211 ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಪ್ರಸ್ತುತ ಬಹುಬೇಡಿಕೆಯನ್ನು ಹೊಂದಿರುವ ರಾಷ್ಟ್ರದ ಅತ್ಯುನ್ನತ ಸಂಸ್ಥೆಯಾದ ಆರ್ಕಿಟೆಕ್ಚರ್ ಸಂಸ್ಥೆಗಳಿಗೆ ಸೇರಲು ನಡೆಯುವ ರಾಷ್ಟ್ರ ಮಟ್ಟದ NATA (ನ್ಯಾಶನಲ್ ಎಲಿಜಿಬಿಲಿಟಿ ಟೆಸ್ಟ್ ಫಾರ್ ಆರ್ಕಿಟೆಕ್ಚರ್) ಪ್ರವೇಶ ಪರೀಕ್ಷೆಗೆ ಕ್ರಿಯೇಟಿವ್ ವಿದ್ಯಾ ಸಂಸ್ಥೆಯು ಅತ್ಯುತ್ತಮ ತರಬೇತಿ ನೀಡುತ್ತಿದೆ. ವಿದ್ಯಾರ್ಥಿಗಳ ಸಾಧನೆಯನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ- ಬೋಧಕೇತರ ವೃಂದದವರು, ಸಂಯೋಜಕರಾದ ಸುಮಂತ್ ದಾಮ್ಲೆ, ರವರು ಅಭಿನಂದಿಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಬಡಾ ಗ್ರಾಮ: ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ

ಕಾಪು, ನ.8: ಕಾಪು ವಿಧಾನಸಭಾ ಕ್ಷೇತ್ರದ ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ...

ಟೆಕ್ಸಾಸ್‌ನಲ್ಲಿ ಎಸ್‌ಬಿಐ ಹೊಸ ಶಾಖೆ ಆರಂಭ; ಅಮೆರಿಕದಲ್ಲೂ ಬ್ಯಾಂಕಿಂಗ್ ವಿಸ್ತರಿಸಿದ ಸ್ಟೇಟ್ ಬ್ಯಾಂಕ್

ಯು.ಬಿ.ಎನ್.ಡಿ., ನ.8: ಅಮೆರಿಕದಲ್ಲಿ ಭಾರತದ ಬ್ಯಾಂಕಿಂಗ್ ಉಪಸ್ಥಿತಿಯನ್ನು ಬಲಪಡಿಸುವ ಮತ್ತು ಗ್ರಾಹಕರಿಗೆ...

ಭಾರತದಾದ್ಯಂತ ಇ20 ಪೆಟ್ರೋಲ್ ನಿಗದಿತ ಗುಣಮಟ್ಟದ ಮಾನದಂಡಗಳನ್ನು ಪೂರೈಸುತ್ತದೆ: ಪೆಟ್ರೋಲಿಯಂ ಸಚಿವಾಲಯ

ನವದೆಹಲಿ, ನ.8: ಕರ್ನಾಟಕ ಸೇರಿದಂತೆ ದೇಶಾದ್ಯಂತ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ...

ಯಕ್ಷಗಾನ ಕಲಾರಂಗದ 108ನೇ ಮನೆ ಹಸ್ತಾಂತರ

ಉಡುಪಿ, ನ.8: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‍ನ ಪ್ರಥಮ ಪಿಯುಸಿ ವಿದ್ಯಾರ್ಥಿ ಅಂಕಿತ್...
error: Content is protected !!